ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವಂತಿಕೆಗೇನು ಅಡೆತಡೆ?

Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಫಲವಂತಿಕೆಯ ಸಮಸ್ಯೆ ಇದೆಯೇ? ಗರ್ಭಧಾರಣೆಗೆ ಆಗುತ್ತಿರುವ ಅಡೆತಡೆಗಳೇನು? ವೈದ್ಯರನ್ನು ಅಥವಾ ತಜ್ಞರನ್ನು ಭೇಟಿ ಮಾಡುವ ಅಗತ್ಯವಿದೆಯೇ ಎಂಬುದನ್ನು ಕಳೆದ ವಾರದಿಂದಲೂ ಗಮನಿಸುತ್ತಿದ್ದೇವೆ. ಈ ವಾರವೂ ಇದೇ ಪರೀಕ್ಷೆಯ ಇನ್ನಷ್ಟು ಅಂಶಗಳನ್ನು ಪರಿಶೀಲಿಸೋಣ.

ನಿಮಗೆ ಪಾಲಿಸಿಸ್ಟಿಕ್‌ ಓವರಿಯನ್‌ ಸಿಂಡ್ರೋಮ್‌ (ಪಿಸಿಓಎಸ್‌) ಸಮಸ್ಯೆಯೇನಾದರೂ ಇದೆಯೇ?
ಹೌದು (5) ಪಿಸಿಓಎಸ್‌ ಸಮಸ್ಯೆಯಿದ್ದಲ್ಲಿ ಅಂಡಾಣು ಬಿಡುಗಡೆಯ ಸಮಸ್ಯೆಯನ್ನು ಎದುರಿಸಬಹುದು. ಇದರಿಂದಾಗಿ ಗರ್ಭಕಟ್ಟುವುದು ಅಸಾಧ್ಯವಾಗುವುದು. ಈ ನಿಟ್ಟಿನಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಎರಡೂ ಅತ್ಯಗತ್ಯ
ಇಲ್ಲ (0)

ಪಿಸಿಓಎಸ್‌ ಎಂದರೆ: ಅಂಡಾಣುವಿನ ಬಿಡುಗಡೆಯಲ್ಲಿ ಆಗುವ ಅಡಚಣೆಯೇ ಗರ್ಭಧಾರಣೆಗೆ ಮೂಲ ಕಾರಣವಾಗಿರುತ್ತದೆ. ಪಿಸಿಓಎಸ್‌ ಎಂದರೆ ಅಂಡಾಶಯದಲ್ಲಿ ಉಂಟಾಗುವ ಸಣ್ಣ ಸಣ್ಣ ಗಂಟುಗಳಾಗಿರುತ್ತವೆ. ಕಡಿಮೆ ಋತುಸ್ರಾವ ಅಥವಾ ನಿಗದಿತ ಋತುಸ್ರಾವವಾಗದೇ ಇರುವುದು ಇಲ್ಲವೇ ಋತು ಸ್ರಾವವೇ ಆಗದೇ ಇರುವುದು, ತೂಕದಲ್ಲಿ ಹೆಚ್ಚಳ, ಬೇಡದ ಕೂದಲ ಬೆಳವಣಿಗೆ ಇದರ ಲಕ್ಷಣಗಳಾಗಿರುತ್ತವೆ. ನಿಯಮಿತ ವ್ಯಾಯಾಮದಿಂದ ತೂಕ ನಿಯಂತ್ರಿಸಿಕೊಳ್ಳಬಹುದು. ಪಿಸಿಓಎಸ್‌ಗೆ ವೈದ್ಯಕೀಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ಕಾಣಬಹುದಾಗಿದೆ. ನಂತರ ಸಮರ್ಪಕವಾಗಿ ಅಂಡಾಣು ಬಿಡುಗಡೆಯಾಗುವುದರಿಂದ ಗರ್ಭಧಾರಣೆ ಸಾಧ್ಯವಾಗುತ್ತದೆ.

ಎಕ್ಟೊಪಿಕ್‌ ಗರ್ಭಧಾರಣೆ ಆಗಿದೆಯೇ?
ಹೌದು (5) ಇಲ್ಲ (0)
ಎಕ್ಟೊಪಿಕ್‌ ಗರ್ಭಧಾರಣೆ: ಸಾಮಾನ್ಯವಾಗಿ ಗರ್ಭಕೋಶದಿಂದಾಚೆಗೆ ಭ್ರೂಣ  ಫಲಿತವಾಗಿ ಗರ್ಭಕಟ್ಟುವ ಸ್ಥಿತಿಗೆ ಅಪಸ್ಥಾನೀಯ ಅಥವಾ ಎಕ್ಟೊಪಿಕ್‌ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಇಂಥ ಗರ್ಭಧಾರಣೆಯಾದ ಭ್ರೂಣವು ಮಗುವಿನ ಜನನದವರೆಗೂ ಕಾಯುವಂತಿರುವುದಿಲ್ಲ. ಅಲ್ಲಿ ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಶೇ 1ರಷ್ಟು ಪ್ರಕರಣಗಳು ಮಾತ್ರ ಎಕ್ಟೊಪಿಕ್‌ ಬಸಿರಾಗಿರುತ್ತವೆ. ಒಂದು ವೇಳೆ ಇದನ್ನು ಸಕಾಲದಲ್ಲಿ ಗುರುತಿಸದಿದ್ದಲ್ಲಿ ಅಮ್ಮನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿರುತ್ತವೆ.

ಆದರೆ ಈ ಪರಿಸ್ಥಿತಿಯಿಂದಾಗಿ ಸಾವನ್ನಪ್ಪುವ ಗರ್ಭಿಣಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಿದೆ. ಇಂಥ ಬಸಿರು ಕಂಡು ಬಂದಲ್ಲಿ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಈ ಬಸಿರನ್ನು ನಿವಾರಿಸಲಾಗುತ್ತದೆ. ಕೆಲವೊಮ್ಮೆ ಔಷಧಿಗಳ ಮೂಲಕವೂ ಈ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ. ಒಂದು ವೇಳೆ ನಿಮ್ಮಲ್ಲಿ ಇಂಥ ಬಸಿರು ಕಂಡು ಬಂದಲ್ಲಿ ಮುಂದಿನ ಗರ್ಭಧಾರಣೆಗಳು ಅಪಸ್ಥಾನೀಯವಾಗುವ ಸಾಧ್ಯತೆಗಳು ಶೇ 1ರಿಂದ 8ರಷ್ಟಿರುತ್ತವೆ.

ಸಂತಾನೋತ್ಪತ್ತಿಯ ಅಂಗಗಳ ಮೇಲೆ ಪರಿಣಾಮ ಬೀರುವಂಥ ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೀರಾ?
ಹೌದು (5) ಇಲ್ಲ (0)

ನಿಮ್ಮ ಋತುಚಕ್ರದ ಫಲವಂತಿಕೆಯ ದಿನಗಳಲ್ಲಿ ಅದೆಷ್ಟು ಸಲ ಯಾವುದೇ ನಿರೋಧಕಗಳಿಲ್ಲದ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳೂತ್ತೀರ?
ಪ್ರತಿದಿನ (1) ನಿಮ್ಮ ಋತುಚಕ್ರದ ಅತಿ ಫಲವಂತಿಕೆಯ ದಿನಗಳಲ್ಲಿ ಪ್ರತಿದಿನವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ.
ದಿನ ಬಿಟ್ಟು ದಿನ (1) ನಿಮ್ಮ ಋತುಚಕ್ರದ ಅತಿ ಫಲವಂತಿಕೆಯ ದಿನಗಳಲ್ಲಿ ಪ್ರತಿದಿನವೂ ಸಾಧ್ಯವಾಗದಿದ್ದಲ್ಲಿ ದಿನ ಬಿಟ್ಟು ದಿನವಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ.

ಕೆಲ ದಿನಗಳು ಮಾತ್ರ (0) ಇಡೀ ಋತು ಚಕ್ರದ ಕೆಲದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಬದಲು ಅತಿ ಫಲವಂತಿಕೆಯ ದಿನಗಳನ್ನು ಲೆಕ್ಕ ಹಾಕಿ. ಆ ದಿನಗಳಲ್ಲಿ ಯಾವುದೇ ನಿರೋಧಕಗಳನ್ನು ಬಳಸದೇ ಸಂಗಾತಿಯೊಡನೆ ಮಿಲನವಾದರೆ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಿರುತ್ತವೆ.

ಫಲವಂತಿಕೆಯ ದಿನಗಳೆಂದರೆ ಯಾವವು ಎಂಬುದು ನನಗೆ ತಿಳಿಯದು (0) ಫಲವಂತಿಕೆಯ ದಿನಗಳನ್ನು ನಿಮ್ಮ ಋತುಚಕ್ರದ ಮೊದಲ ದಿನದಿಂದ ಎಣಿಸಿಕೊಂಡು ಬನ್ನಿ. 10ರಿಂದ 16ನೇ ದಿನಗಳ ನಡುವಿನ ಅವಧಿ ಅತಿ ಫಲವಂತಿಕೆಯ ದಿನಗಳಾಗಿರುತ್ತವೆ. ಈ ದಿನಗಳಲ್ಲಿ ಮಿಲನವಾದರೆ ಗರ್ಭಕಟ್ಟುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಸತತ ಯತ್ನಗಳ ನಂತರವೂ ಗರ್ಭ ಧರಿಸದಿದ್ದರೆ ಬಂಜೆತನವಿದೆಯೇ ಎಂಬ ಆತಂಕ ಕಾಡುವುದು ಸಹಜ. ಫಲವಂತಿಕೆಗೆ ಅಡೆತಡೆಗಳೇನು ಎಂದು ಅರಿಯಲು ಈ ಪ್ರಶ್ನೆಗಳಿಗೆ ಉತ್ತರಿಸುತ್ತ ಹೋಗಿ... ಕೆಲವೊಮ್ಮೆ ಅತಿ ಫಲವಂತಿಕೆಯ ದಿನಗಳನ್ನು ಕಾಯುವುದೇ ಮಹಿಳೆಯರಲ್ಲಿ ದುಗುಡ ಹುಟ್ಟುಹಾಕುತ್ತದೆ. ಅಂಡಾಣು ಬಿಡುಗಡೆಯಾದಾಗ ಅದು ಗರ್ಭನಾಳದಲ್ಲಿ ಅಂಟಿಕೊಳ್ಳುತ್ತದೆ. ಒಂದು ವೇಳೆ ಈ ಸಮಯದಲ್ಲಿ ವೀರ್ಯಾಣುವಿನೊಂದಿಗೆ ಸಂಯೋಗಹೊಂದಿ ಭ್ರೂಣ ಕಟ್ಟಿಕೊಳ್ಳುತ್ತದೆ. ಇದನ್ನೇ ಗರ್ಭಧಾರಣೆ ಎನ್ನುತ್ತಾರೆ.

ಸಾಮಾನ್ಯವಾಗಿ ನಿಮ್ಮ ಋತುಚಕ್ರದ ಮೊದಲ ದಿನದಿಂದ ಎಣಿಕೆ ಆರಂಭಿಸಿದರೆ 10ರಿಂದ 16ನೇ ದಿನದ ನಡುವಿನ ದಿನಗಳಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ. ಅಂಡಾಣು ಬಿಡುಗಡೆಯ ದಿನವನ್ನು ನಿಖರವಾಗಿ ಅರಿಯಲು ಸಾಧ್ಯವಾದರೆ ಆ ದಿನ ಲೈಂಗಿಕ ಕ್ರಿಯೆಯಲ್ಲಿ ಯಾವುದೇ ಗರ್ಭನಿರೋಧಕಗಳ ಬಳಕೆಯಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಆದರೆ ಆ ದಿನದ ಪತ್ತೆ ಮಾಡುವ ಭರದಲ್ಲಿ ಮನದಲ್ಲೊಂದು ದುಗುಡ ಹುಟ್ಟಿಸಿಕೊಳ್ಳಬಾರದು. ಹಾಗಾಗಿ ಫಲವಂತಿಕೆಯ ಆ ದಿನಗಳ ಅವಧಿಯಲ್ಲಿ ನಿರಾತಂಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಸಾಕು, ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕ್ಲಾಮಿಡಿಯಾ ಅಥವಾ ಗೊನೊರಿಯಾದಂಥ ಲೈಂಗಿಕ ಸೋಂಕುಗಳಿಗೆ ಒಳಗಾಗಿದ್ದೀರಾ?
ಹೌದು (5) ಹಾಗಿದ್ದಲ್ಲಿ ನಿಮ್ಮ ಪ್ರಸೂತಿ ತಜ್ಞರೊಂದಿಗೆ ಒಮ್ಮೆ ಈ ಬಗ್ಗೆ ಸಮಾಲೋಚಿಸಿ. ಕೆಲವೊಮ್ಮೆ ಲೈಂಗಿಕ ಸೋಂಕುಗಳಿಂದಾಗಿ ಡಿಂಭನಾಳಗಳು ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಂದುವೇಳೆ ಹೀಗಾಗಿದ್ದಲ್ಲಿ ನೀವು ಗರ್ಭಿಣಿಯರಾಗುವುದು ಕಷ್ಟವಾಗುತ್ತದೆ.
ಇಲ್ಲ (0) ಗೊತ್ತಿಲ್ಲ (0)
ಕೆಲವೊಮ್ಮೆ ಲೈಂಗಿಕ ಸೋಂಕುಗಳಿಂದಾಗಿಯೂ ಗರ್ಭಧರಿಸುವುದು ಅಸಾಧ್ಯವಾಗಿರುತ್ತದೆ. ಒಮ್ಮೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ, ಈ ಬಗ್ಗೆ ಪರೀಕ್ಷೆಗೆ ಒಳಪಡುವುದು ಒಳಿತು.

ನಿಮ್ಮ ಕುಟುಂಬದಲ್ಲಿ ಬಂಜೆತನದ ಇತಿಹಾಸವಿದೆಯೇ? ನಿಮಗೆ ನೇರವಾಗಿ ಸಂಬಂಧಕ್ಕೆ ಬರುವ ಪಾಲಕರು, ಸಹೋದರ, ಸಹೋದರಿಯರು, ಮಾವಂದಿರು ಇವರಲ್ಲಿ ಯಾರಿಗಾದರೂ ಬಂಜೆತನದ ಸಮಸ್ಯೆ ಇದೆಯೇ?
ಹೌದು (5) ಇಲ್ಲ (0)

ಫಲಿತಾಂಶ:
ಇದೀಗ ಕಳೆದ ವಾರದ ಪ್ರಶ್ನೋತ್ತರಗಳ ಅಂಕಗಳನ್ನೂ, ಈ ವಾರದ ಅಂಕಗಳನ್ನೂ ಒಟ್ಟುಗೂಡಿರಿ. ಈ ಒಟ್ಟುಗೂಡಿದ ಅಂಕಗಳ ಆಧಾರದ ಮೇಲೆ ಬಂಜೆತನ ಅಥವಾ ಫಲವಂತಿಕೆಯ ಬಗ್ಗೆ ಯೋಚಿಸುವ.
0–1 : ಫಲವಂತಿಕೆಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಇದು ಸಕಾಲವಲ್ಲ.
12: ಇದೂ ಸಹ ಏನಾದರೂ ಸಮಸ್ಯೆ ಇದೆಯೇ ಎಂದು ನಿರ್ಧರಿಸಲು ಆಗುವುದಿಲ್ಲ
23: ಇದೀಗ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಲೇಬೇಕಾದ ಕಾಲವಿದು
35: 35 ಅಂಕಗಳು ಬಂದಲ್ಲಿ ಕೂಡಲೇ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆಗೆ ಒಳಗಾಗಲು ಸಜ್ಜಾಗಲೇಬೇಕಾದ ಕಾಲ


ಈ ಪರೀಕ್ಷೆಯನ್ನು ಕೈಗೊಂಡು ನಿಮಗೆ ಅಗತ್ಯವಿದ್ದಲ್ಲಿ ತಜ್ಞರನ್ನು ಕೂಡಲೇ ಕಾಣಿ. ಬಂಜೆತನಕ್ಕೆ ಪರಿಹಾರ ಹುಡುಕಲು ತಡಮಾಡಬೇಡಿ.
ಮಾಹಿತಿಗೆ: 9611394477

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT