ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವಂತಿಕೆಯ ಮಾರ್ಗವಿರಲಿ ಸರಳ

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಅಡ್ಡಿಯಾಗಬಲ್ಲ ಪ್ರಮುಖ ಕಾರಣಗಳಲ್ಲಿ ಒಂದು ಅಂಡಾಣುವಾಹಿನಾಳದ ಅಡಚಣೆ (ಫ್ಯಾಲೋಪಿಯನ್‌ ಟ್ಯೂಬ್ ಅಬ್‌ಸ್ಟ್ರಕ್ಷನ್‌ –  Fallopian tube obstruction).

ಮಹಿಳೆಯರಲ್ಲಿಯ ಬಂಜೆತನಕ್ಕೆ ಇದು ಶೇ. 20ರಷ್ಟು ಕಾರಣವಾಗಿದೆ. ( ಅಂಡಾಣುವು ಅಂಡಾಶಯದಿಂದ ಗರ್ಭಕೋಶಕ್ಕೆ ಸೇರಲು ಅವಕಾಶವನ್ನು ಮಾಡಿಕೊಡುವ ಹಾದಿಯೇ ಫ್ಯಾಲೋಪಿಯನ್‌ ನಾಳ.) ಅಂಡಾಣುವಾಹಿನಾಳದ ಮುಚ್ಚುವಿಕೆಯಂಥ ಸಮಸ್ಯೆಗಳು ಬಹುಪಾಲು ಸಂದರ್ಭಗಳಲ್ಲಿ ಜನನಾಂಗದ ಸೋಂಕಿನಿಂದ ಉಂಟಾಗುತ್ತವೆ.

ಕಾರಣಗಳೇನು?
ನಾಳವೊಂದರ ಅಡಚಣೆಯು ಸಾಮಾನ್ಯವಾಗಿ ವಸ್ತಿಕುಹರದ ಉರಿಯೂತ ಕಾಯಿಲೆಯಿಂದ (Pelvic inflammatory disease PID) ಸಂಭವಿಸುತ್ತದೆ.  ನಾಳಕಾರಣದಿಂದಾಗುವ ಬಂಜೆತನಕ್ಕೆ ಮೊದಲನೆಯ ಸಲದ ಪಿಐಡಿಯು ಶೇ. 12ರಷ್ಟು, ಎರಡನೆಯ ಸಲದ ಪಿಐಡಿ ಶೇ. 23ರಷ್ಟು, ಮೂರನೆಯ ಸಲದ ಪಿಐಡಿಯು ಶೇ. 53ರಷ್ಟು ಕಾರಣವಾಗುತ್ತದೆ.

ಈ ಸೋಂಕಿನಿಂದ ವಸ್ತಿಕುಹರದ ಅಂಟುಕೊಳ್ಳುವಿಕೆ (Pelvic adhesion)ಯಂಥ ತೊಂದರೆ ಕಾಣಿಸಿಕೊಳ್ಳುತ್ತದೆ.  ಈ ರೀತಿಯ ಅಂಟುವಿಕೆಯು ಅಂಡಾಣುವಾಹಿನಾಳವನ್ನು ಮುಚ್ಚುವುದಿಲ್ಲವಾದರೂ, ಅಂಡಾಶಯದಿಂದ ಅದನ್ನು ಬೇರ್ಪಡಿಸುವ ಮೂಲಕ ಅದರ ಕಾರ್ಯಸ್ಥಗಿತಕ್ಕೆ ಕಾರಣವಾಗಬಲ್ಲದು.

ಸಮಸ್ಯೆಯ ಪ್ರಮಾಣ ಕಡಿಮೆಯಿದ್ದಾಗ ಅದರ ಅಂಡಾಣುವಾಹಿನಾಳದ ಅಂಚುಗಳು ಗಂಟುಗಳಾಗಿ ಹಾನಿಗೆ ತುತ್ತಾಗಬಹುದು. ಹೀಗಿದ್ದರೂ ನಾಳ ಸಂಪೂರ್ಣವಾಗಿ ಮುಚ್ಚಿಕೊಳ್ಳದೆ ಸ್ವಲ್ಪ ತೆರೆದುಕೊಂಡಿರುತ್ತದೆ.

ಸಂತಾನಹರಣಚಿಕಿತ್ಸೆಯ ಸಂದರ್ಭದ ನಾಳ ಕಟ್ಟುವಿಕೆಯ ಕಾರಣದಿಂದ ನಾಳದ ಮಧ್ಯಭಾಗವು ಅಡಚಣೆಗೆ ಒಳಗಾಗಬಹುದು. ಗರ್ಭನಿರೋಧ ಚಿಕಿತ್ಸೆಯ ಸಂದರ್ಭದಲ್ಲಿ ನಡೆಯುವ ನಾಳಬಂಧನ ಎಂದೂ ಮಾರ್ಪಡಿಸಲಾಗದ ಚಿಕಿತ್ಸಾವಿಧಾನ. ರಕ್ತದ ನಂಜಿನಿಂದಾದ ಗರ್ಭಸ್ರಾವವು ನಿಕಟಸ್ಥ ನಾಳದ ಮುಚ್ಚುವಿಕೆಗೆ ( Proximal tubal occlusion) ಕಾರಣವಾಗಬಲ್ಲದು.

ನಾಳದ ಸಹಜತೆಯ ಪರೀಕ್ಷೆ ಹೇಗೆ?
ಬಂಜೆತನದ ಸಮಸ್ಯೆಗೆ ತುತ್ತಾದ ರೋಗಿಗಳಲ್ಲಿ ನಾಳದ ಕಾರ್ಯವಂತಿಕೆಯ ಬಗ್ಗೆ ಪೂರ್ಣ ಪರೀಕ್ಷೆ ಸಾಧ್ಯವಿಲ್ಲವಾದರೂ ನಾಳ ಎಷ್ಟು ತೆರೆದಿದೆ ಎನ್ನುವುದನ್ನು ಪರೀಕ್ಷಿಸಲು ಸಾಧ್ಯ. ಇದಕ್ಕೆ ಒದಗುವ ಕೆಲವು ಪರೀಕ್ಷೆಗಳೆಂದರೆ: ಹಿಸ್ಟೆರೊಸಾಲ್ಪಿನೋಗ್ರಾಮ್‌, ಸೋನೋಗ್ರಾಫಿ, ಲ್ಯಾಪರೋಸ್ಕೋಪಿ.

ಚಿಕಿತ್ಸೆ
ಅಂಡಾಣುವಾಹಿನಾಳದ ಅಡಚಣೆಯನ್ನು ಶಸ್ತ್ರಚಿಕಿತ್ಸೆಯ ಸಹಾಯದಿಂದ ಸರಿಪಡಿಸುವುದು ಸಾಂಪ್ರದಾಯಿಕ ವಿಧಾನ. ನಾಳಗಳ ಬಾಯನ್ನು ತೆರೆಯುವಂತೆ ಮಾಡಿ ಅವುಗಳ ಸಹಜ ಕಾರ್ಯಕ್ಕೆ ಸಹಾಯವಾಗುವಂತೆ ಮಾಡಲಾಗುತ್ತದೆ.

ಆಧುನಿಕ ವಿಧಾನ ಎಂದರೆ ಕೃತಕ ಗರ್ಭಧಾರಣೆ (Vitro fertilization). ಈ ವಿಧಾನದಿಂದ ಫಲಿತಾಂಶವನ್ನು ಬೇಗ ನೀರೀಕ್ಷಿಸಬಹುದಲ್ಲದೆ, ಇದರ ವೆಚ್ಚವೂ ಕಡಿಮೆ, ಚಿಕಿತ್ಸೆಯಲ್ಲಿ ನಡೆಯುವ ಅತಿಕ್ರಮಣದ ಪ್ರಮಾಣವೂ ಕಡಿಮೆ. ನಾಳದ ಮುಚ್ಚುವಿಕೆಯನ್ನು ಸರಿಪಡಿಸುವುವ ವಿಧಾನಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ.

ಈಗ ಶಸ್ತ್ರಚಿಕಿತ್ಸೆಯ ಸ್ವರೂಪದಲ್ಲೂ ಬೇರೆ ಬೇರೆ ವಿಧಾನಗಳು ಆಚರಣೆಗೆ ಬಂದಿವೆ. ಲ್ಯಾಪರೋಸ್ಕೋಪಿ ಮತ್ತು ಲ್ಯಾಪರೋಟಮಿ ವಿಧಾನದಿಂದಲೂ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT