ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವಂತಿಕೆಯ ಸಮಸ್ಯೆ ಇದೆಯೇ?

ಅಂಕುರ-93
Last Updated 22 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಒಂದು ವರ್ಷದವರೆಗೆ ಸತತ ಪ್ರಯತ್ನಗಳ ನಂತರವೂ ಗರ್ಭಕಟ್ಟದಿದ್ದರೆ ಫಲವಂತಿಕೆಯ ಸಮಸ್ಯೆ ಇದೆ ಎಂದು ಭಾವಿಸಬಹುದಾಗಿದೆ. ಗರ್ಭಧಾರಣೆಯಾದ ನಂತರ ಗರ್ಭಪಾತವಾಗುತ್ತಿದ್ದರೆ ಮತ್ತು ಎರಡಕ್ಕಿಂತ ಹೆಚ್ಚು ಗರ್ಭಪಾತಗಳಾದರೆ ಫಲವಂತಿಕೆಯ ಸಮಸ್ಯೆ ಇದೆಯೆಂದೇ ಹೇಳಬಹುದಾಗಿದೆ.

ಗರ್ಭಧಾರಣೆ ಎನ್ನುವುದು ಕೇವಲ ಒಂದು ಕ್ರಿಯೆಯಲ್ಲ. ಇದೊಂದು ಸಂಕೀರ್ಣವಾದ ಪ್ರಕ್ರಿಯೆ. ಇದರಲ್ಲಿ ನಾಲ್ಕು ಅಂಶಗಳು ಅಡಕವಾಗಿವೆ.
* ಮಹಿಳೆಯ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಬೇಕು.
* ಅಂಡನಾಳದಿಂದ ಅಂಡಾಣುವು ಗರ್ಭಕೋಶಕ್ಕೆ ಪಯಣಿಸಬೇಕು.
* ವೀರ್ಯಾಣುವು ಅಂಡಾಣುವಿನೊಡನೆ ಸಂಯೋಗವಾಗಬೇಕು.
* ಸಂಯೋಗವಾದ ಭ್ರೂಣವು ಗರ್ಭಕೋಶದ ಗೋಡೆಗೆ ಅಂಟಿಕೊಳ್ಳಬೇಕು.
ಈ ನಾಲ್ಕು ಹಂತಗಳಲ್ಲಿ ಸ್ವಲ್ಪ ಏರುಪೇರು ಆದರೂ ಫಲವಂತಿಕೆಗೆ ಸಮಸ್ಯೆಯಾಗುತ್ತದೆ.

ಬಂಜೆತನವು ಸಾಮಾನ್ಯ ಸಮಸ್ಯೆಯಾಗಿದೆಯೇ?
ಒಟ್ಟು ಜನಸಂಖ್ಯೆಯ ಶೇಕಡಾ 16ರಷ್ಟು ಜನರು ಒಂದಲ್ಲ ಒಂದು ಫಲವಂತಿಕೆಯ ಸಮಸ್ಯೆಯಿಂದ ಬಳಲುತ್ತಾರೆ ಎಂದು ನಂಬಲಾಗಿದೆ. ಭಾರತೀಯ ಜನಸಂಖ್ಯೆಯನ್ನು ಹೋಲಿಸಿದಾಗ ನಮ್ಮಲ್ಲಿ ಬಂಜೆತನದಿಂದ ನರಳುವವರ ಸಂಖ್ಯೆ ಬೃಹತ್‌ ಗಾತ್ರದಲ್ಲಿಯೇ ಇದೆಯೆಂದು ಹೇಳಬಹುದಾಗಿದೆ.

ಈ ಬಂಜೆತನಕ್ಕೆ ವೀರ್ಯಾಣುವಿನ ಸಂಖ್ಯೆಯಲ್ಲಿ ಕೊರತೆ (ಶೇ 41), ಮಹಿಳೆಯರಲ್ಲಿ ಪಾಲಿಸಿಸ್ಟಿಕ್‌ ಓವರಿಯನ್‌ ಸಿಂಡ್ರೋಮ್‌ (ಶೇ 40)ರಷ್ಟು ಎಂದು ಹೇಳಲಾಗುತ್ತದೆ.

ಬಂಜೆತನ ಮಹಿಳೆಯ ಸಮಸ್ಯೆಯೇ?
ಇಲ್ಲ. ಬಂಜೆತನವೆಂದಾಗ ಅದು ಕೇವಲ ಮಹಿಳೆಗೆ ಮಾತ್ರ ಸಂಬಂಧಿಸಿದ್ದು ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಒಂದರಲ್ಲಿ ಮೂರರಷ್ಟು ಪಾಲು ಮಹಿಳೆಗೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ. ಇನ್ನುಳಿದ ಭಾಗದಲ್ಲಿ ಮೂರರಷ್ಟು ಭಾಗ ಪುರುಷರಿಂದ ಬಂಜೆತನ ಅನುಭವಿಸುವಂತಾಗಿರುತ್ತದೆ. ಉಳಿದ ಭಾಗಗಳಿಗೆ ಈ ಹಿಂದೆ ತಿಳಿಸಿದಂತೆ ವಿವರಿಸಲಾಗದ ಕಾರಣಗಳಿರುತ್ತವೆ. ಅದು ಯಾರಿಗಾದರೂ ಬಾಧಿಸಬಹುದು.

ಮಹಿಳೆಯರ ಬಂಜೆತನಕ್ಕೆ ಕಾರಣಗಳೇನು?
ಬಹುತೇಕ ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯೇ ಬಂಜೆತನಕ್ಕೆ ಮೂಲ ಕಾರಣವಾಗಿರುತ್ತದೆ. ಫಲಿತಗೊಳ್ಳಲು ಅವರಲ್ಲಿ ಅಂಡಾಣುಗಳೇ ಇರುವುದಿಲ್ಲ. ಅನಿಯಮಿತ ಋತುಚಕ್ರ ಹಾಗೂ ಋತುಮತಿಯಾಗದೇ ಇರುವುದು ಅಂಡಾಣು ಬಿಡುಗಡೆಯಾಗದೇ ಇರುವುದರ ಲಕ್ಷಣಗಳಾಗಿವೆ. 

ಇದಲ್ಲದೆ, ಇನ್ನೂ ಕೆಲವು ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗಬಹಲ್ಲವು.
* ಡಿಂಭನಾಳಗಳಲ್ಲಿ ಅಡೆತಡ, ಎಂಡೊಮೆಟ್ರಿಯೋಸಿಸ್‌, ಅಂಡನಾಳದೊಳಗೆ ಗರ್ಭಕಟ್ಟುವಿಕೆ ಮುಂತಾದವು.
* ಗರ್ಭಕೋಶದ ಸಮಸ್ಯೆಗಳು.
* ಗರ್ಭಕೋಶದೊಳಗಿನ ಗಡ್ಡೆಗಳು.

ಗರ್ಭಕಟ್ಟುವ ಸಾಮರ್ಥ್ಯವಿಲ್ಲ ಎಂದು ತಿಳಿಸುವ ಲಕ್ಷಣಗಳು ಯಾವವು ಎಂದು ತಿಳಿದಿವೆಯೇ?
ಋತುಚಕ್ರದ ಸಂದರ್ಭದಲ್ಲಿ ಅಥವಾ ಅಂಡಾಣು ಬಿಡುಗಡೆಯ ಸಮಯದಲ್ಲಿ ಮಹಿಳೆಯು ತೀವ್ರವಾದ ನೋವು ಅನುಭವಿಸುತ್ತಿದ್ದರೆ ಎಂಡೊಮೆಟ್ರಿಯೊಸಿಸ್‌ನ ಲಕ್ಷಣವಾಗಿರುತ್ತದೆ. ತಜ್ಞರ ಸಲಹೆಯನ್ನು ಕೂಡಲೇ ಪಡೆಯುವುದು ಒಳಿತು. 

ಅಂಡಾಣು ಬಿಡುಗಡೆಯಾಗದೇ ಇರುವ ಮಹಿಳೆಯರಲ್ಲಿ, ಋತುಮತಿಯಾಗದೇ ಇರುವವರಲ್ಲಿ, ಅಥವಾ ವರ್ಷದಲ್ಲಿ ಎರಡು ಮೂರು ಸಲ ಮಾತ್ರ ಋತುಚಕ್ರ ಕಂಡು ಬರುವವರಲ್ಲಿ ಪೊಲಿಸಿಸ್ಟಿಕ್‌ ಓವರಿಯನ್‌ ಡಿಸೀಸ್‌ ಸಹ ಇರಬಹುದು. 

ಈ ಎರಡು ಕಾರಣಗಳಲ್ಲದೇ ಮತ್ತಿತರ ಹೇಳಲಾಗದ ಕೆಲವು ಕಾರಣಗಳೂ ಇರುತ್ತವೆ. ಆದರೆ ಲಕ್ಷಣಗಳನ್ನು ಬೇಗ ಗುರುತಿಸಿದಷ್ಟೂ ಚಿಕಿತ್ಸೆ ಸುಲಭವಾಗುತ್ತದೆ.

ಮಹಿಳೆಯರಲ್ಲಿ ಬಂಜೆತನ ಹೆಚ್ಚಲು ಕಾರಣವಾಗುವ ಇತರ ಅಂಶಗಳು ಮಗುವನ್ನು ಹೊರುವ ಹಾಗೂ ಹೆರುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಹಲವು ಅಂಶಗಳು ಹೀಗಿವೆ: ವಯಸ್ಸು, ಒತ್ತಡ, ಅಪೌಷ್ಟಿಕಾಂಶ, ಅಥ್ಲೆಟಿಕ್‌ ತರಬೇತಿ, ತೂಕ, ತಂಬಾಕು ಸೇವನೆ, ಮದ್ಯಪಾನ, ಲೈಂಗಿಕ ಸೋಂಕು, ಹಾರ್ಮೋನುಗಳ ಸ್ರಾವವನ್ನು ನಿಯಂತ್ರಿಸುವ ರೋಗ ಅಥವಾ ಚಿಕಿತ್ಸೆಗಳು.

ಮಹಿಳೆಯು ಅಮ್ಮನಾಗುವಲ್ಲಿ ವಯಸ್ಸು ಕಾರಣವಾಗುವುದು ಹೇಗೆ?
ಬಹುತೇಕ ಮಹಿಳೆಯರು 30 ಮತ್ತು ನಲ್ವತ್ತರ ಆಸುಪಾಸಿನಲ್ಲಿ ತಾಯಿಯಾಗಲು ಹವಣಿಸುತ್ತಾರೆ. ಅಲ್ಲಿಯವರೆಗೂ ಅವರು ತಮ್ಮ ಶಿಕ್ಷಣ, ವೃತ್ತಿ, ಜವಾಬ್ದಾರಿ ಮುಂತಾದವುಗಳನ್ನೆಲ್ಲ ಮುಗಿಸಿ ತಾಯಿಯಾಗಲು ಪ್ರಯತ್ನಿಸುತ್ತಾರೆ.

ಇತ್ತೀಚಿನ ವರದಿಯ ಪ್ರಕಾರ ಬಹುತೇಕ ಜನರು 35ನೇ ವಯಸ್ಸಿಗೆ ತಾಯಿಯಾಗಲು ಪ್ರಯತ್ನಿಸುತ್ತಿದ್ದಾರೆ. ತಡವಾದ ಮದುವೆ, ವೃತ್ತಿಯಲ್ಲಿ ಮೇಲೇರಬೇಕೆಂಬ ಆಕಾಂಕ್ಷೆ ಮುಂತಾದವುಗಳು ತಾಯ್ತನವನ್ನು ಮುಂದೂಡುವ ಕಾರಣಗಳಾಗಿರುತ್ತವೆ. 35ವರ್ಷದ ಆಸುಪಾಸಿನಲ್ಲಿರುವ ಮಹಿಳೆಯರು ಫಲವಂತಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ.

ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT