ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಮರ್ಫಿ ಟೌನ್‌ ತಂಡಕ್ಕೆ ಪ್ರಶಸ್ತಿ

Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೆನಾಲ್ಟಿ ಶೂಟೌಟ್‌ನಲ್ಲಿ  ಸೊಗಸಾದ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿದ ಮರ್ಫಿ ಟೌನ್‌ ಫುಟ್‌ಬಾಲ್ ಕ್ಲಬ್‌ ತಂಡದವರು ರಾಜ್ಯ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆದ 14 ವರ್ಷದ ಒಳಗಿನವರ ವಲಯವಾರು ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಬಸವನಗುಡಿಯ ಬಿಯುಎಫ್‌ಸಿ ಫುಟ್‌ಬಾಲ್‌ ಮೈದಾನದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮರ್ಫಿ ಟೌನ್‌ ಕ್ಲಬ್‌ 4–3 ಗೋಲುಗಳಿಂದ ವಸಂತ ನಗರದ ರೂಟ್ಸ್‌ ಅಕಾಡೆಮಿ ಎದುರು ಜಯಭೇರಿ ಮೊಳಗಿಸಿತು.

ಪಂದ್ಯದ ಆರಂಭದಿಂದಲೇ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಆದ್ದರಿಂದ ನಿಗದಿತ ಅವಧಿ ಗೋಲುರಹಿತವಾಗಿ ಅಂತ್ಯಕಂಡಿತು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಈ ಅವಕಾಶವನ್ನು ಮರ್ಫಿ ಟೌನ್‌ ತಂಡ ಚೆನ್ನಾಗಿಯೇ ಬಳಸಿಕೊಂಡಿತು.

ವಿಜಯಿ ತಂಡಕ್ಕೆ ರಾಜ್ಯ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಎ.ಆರ್‌.ಖಲೀಲ್‌ ‘ಎ.ಟಿ. ವಿಜಯರಂಗಂ ಟ್ರೋಫಿ’ ಹಾಗೂ ಪದಕಗಳನ್ನು ವಿತರಿಸಿದರು. ರನ್ನರ್ಸ್‌ ಅಪ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT