ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ 74 ಕಲ್ಲಿದ್ದಲು ನಿಕ್ಷೇಪ ಹರಾಜು

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆ­ಯನ್ನು ಫೆ.11ರ ಆಸುಪಾಸಿ­ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 74 ನಿಕ್ಷೇಪಗಳ ಮಂಜೂರಾತಿ ನಡೆಯಲಿದೆ. ಇದರಿಂದ ವಿದ್ಯುತ್‌ ದರ ದುಬಾರಿ­ಯಾಗುವುದನ್ನು ತಪ್ಪಿಸುವ ಸಲುವಾಗಿ ಹರಾಜಿನಲ್ಲಿ ಭಾಗಿಯಾ­ಗುವ ಕಂಪೆನಿ­ಗಳಿಗೆ ಕೆಲವು ನಿಬಂಧನೆ­ಗಳನ್ನು ವಿಧಿಸಲು ಕೂಡ ಸರ್ಕಾರ ತೀರ್ಮಾನಿಸಿದೆ.

ವಿದ್ಯುತ್‌ ಉತ್ಪಾದನೆಗೆ ಮಾತ್ರವೇ ಕಲ್ಲಿದ್ದಲು ಬಳಸಬೇಕು, ಒಂದೇ ಕಂಪೆನಿ ಪಡೆಯಬಹುದಾದ ನಿಕ್ಷೇಪಗಳ ಗರಿಷ್ಠ ಸಂಖ್ಯೆಗೆ ಮಿತಿ ಹಾಕಬೇಕು ಎಂಬುದು ಸೇರಿದಂತೆ ಇನ್ನು ಕೆಲವು ನಿಬಂಧನೆ­ಗಳನ್ನು ವಿಧಿಸಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ.

ಮೊದಲ ಹಂತದಲ್ಲಿ ಹರಾಜಿಗೆ ಒಳಪಡುವ 74 ಗಣಿಗಳ ಪೈಕಿ 42 ನಿಕ್ಷೇಪಗಳಲ್ಲಿ ಈಗಾಗಲೇ ಗಣಿಗಾರಿಕೆ ನಡೆಯುತ್ತಿದೆ. ಈ 42 ಗಣಿಗಳಲ್ಲಿ ಮಾರ್ಚ್‌ 31ರವರೆಗೆ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಈ 42 ಗಣಿಗಳು ವಾರ್ಷಿಕ 9 ಕೋಟಿ ಟನ್‌ ಉತ್ಪಾದಿಸುತ್ತಿದ್ದರೆ ಹೊಸದಾಗಿ ಪಟ್ಟಿಯಲ್ಲಿರುವ 32 ಗಣಿಗಳು ವರ್ಷಕ್ಕೆ 12 ಕೋಟಿ ಟನ್‌ ಉತ್ಪಾದನಾ ಸಾಮರ್ಥ್ಯ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT