ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಶನ್‌ನಿಂದ ಬೆನ್ನು ನೋವು

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನಿಮ್ಮ ಬೆನ್ನೋವಿಗೆ ಫ್ಯಾಶನ್‌ ಸಹ ಕಾರಣವಾಗಿರಬಹುದು... ಗಾಬರಿಯಾಗಬೇಡಿ... ಫ್ಯಾಶನ್‌ಗೂ ಬೆನ್ನು ನೋವಿಗೂ ಎಲ್ಲಿಂದೆಲ್ಲಿಗೆ ಸಂಬಂಧ... ಅನ್ನಬೇಡಿ... ತೀರ ಬೇರವಾದ ಸಂಬಂಧವಿದೆ ಎನ್ನುತ್ತಾರೆ ಬೆನ್ನುಹುರಿಯ ತಜ್ಞ ಸೂರಜ್‌ ಬಾಫ್ನಾ.

ಸೊಂಟಕ್ಕಂಟಿದ ಸ್ಕರ್ಟ್ಸ್‌ಗಳು
ಮೊಣಕಾಲಿನವರೆಗೆ ಸೊಂಟಕ್ಕೆ ಅಪ್ಪಿದ ಸ್ಕರ್ಟ್‌ಗಳು ಇತ್ತೀಚೆಗೆ ಬಹುತೇಕ ವೃತ್ತಿಗಳಲ್ಲಿ ಸಮವಸ್ತ್ರದಂತೆ ಆಗಿದೆ. ಆದರೆ ಇಂಥ ಸ್ಕರ್ಟ್‌ಗಳಿಂದಾಗಿ ನಿಮಗೆ ತೀವ್ರತೆರನಾದ ಬೆನ್ನುನೋವು ಕಾಡಬಹುದು. ಕಾಲಿನ ಚಲನೆಗೆ ಕಡಿವಾಣ ಬೀಳುವುದರಿಂದ ರಕ್ತ ಪರಿಚಲನೆ ಹಾಗೂ ಸ್ನಾಯುಗಳ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುವಿನ ಸೆಳೆತ, ಡಿಸ್ಕ್‌ಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

ಬಿಗಿಯಾದ ಜೀನ್ಸ್‌: ಬಿಗಿಯಾದ ಜೀನ್ಸ್‌ ಧರಿಸುವುದು ಇದೀಗ ಫ್ಯಾಶನ್‌ ಅಷ್ಟೇ ಅಲ್ಲ, ಪ್ಯಾಶನ್‌ ಕೂಡ ಆಗಿದೆ. ದೇಹವನ್ನು ಬಿಗಿದಪ್ಪಿ ಕೂರುವುದರಿಂದ ಹಾಗೂ ಮೈ ಕಾಣದೇ ಇರುವುದರಿಂದ ಬಿಗಿಯಾದ ಜೀನ್ಸ್‌ ಎಲ್ಲ ವಯೋವರ್ಗದವರಿಗೂ ಇಷ್ಟವಾದ ಉಡುಗೆ. ಆದರೆ ಇವು ಸೊಂಟ, ತೊಡೆ, ಪೃಷ್ಠವನ್ನು ಬಿಗಿಯಾಗಿಸುವುದರಿಂದ ಸಂದುಗಳಲ್ಲಿ ಅಥವಾ ಕೀಲುಗಳಲ್ಲಿ ನೋವು ಆರಂಭವಾಗುತ್ತದೆ. ಹಿಂಬದಿಯ ಜೇಬಿನಲ್ಲಿ ಭಾರವಾದ ಫೋನು ಅಥವಾ ವ್ಯಾಲೆಟ್‌ ಅನ್ನು ಇರಿಸಿಕೊಂಡಿದ್ದರೆ ಇದು ಎರಡೂ ಪೃಷ್ಠಗಳ ನಡುವೆ ಅಸಮತೋಲನ ತಂದಿಸುತ್ತದೆ. ಇದರಿಂದ ತೊಡೆ, ಸೊಂಟ ಅಥವಾ ಪೃಷ್ಠಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಹ್ಯಾಂಡ್‌ ಬ್ಯಾಗು: ಇತ್ತಿತ್ತಲಾಗಿ ಜಂಬದ ಚೀಲಗಳ ಗಾತ್ರ ಒಂದರ್ಧ ಗೋಣಿಚೀಲದಷ್ಟು ದೊಡ್ಡದಾಗಿಯಂತೂ ಇರುತ್ತದೆ. ಏನೂ ಇರದಿದ್ದರೂ ಚೀಲದ ಭಾರವೇ ಹೆಚ್ಚಾಗಿರುತ್ತದೆ. ಇನ್ನು ಅಷ್ಟು ದೊಡ್ಡ ಚೀಲ ಕೊಳ್ಳುವುದೇ ಅಗತ್ಯದ ವಸ್ತುಗಳನ್ನು ಅದರಲ್ಲಿ ಸಂಗ್ರಹಿಸಿ ಇಡಲು ದೊಡ್ಡ ಹ್ಯಾಂಡ್‌ಬ್ಯಾಗು ಕೊಳ್ಳಲಾಗುತ್ತದೆ. ನೀರಿನ ಬಾಟಲಿ, ಔಷಧಿ, ಪ್ರಸಾಧನ, ಚಿಕ್ಕದೊಂದು ಪರ್ಸು, ಫೋನು ಇವೆಲ್ಲವುಗಳಿಂದಾಗಿ ಬ್ಯಾಗಿನ ಭಾರ ಸಹಜವಾಗಿಯೇ ಹೆಚ್ಚಿರುತ್ತದೆ. ದೇಹದ ಒಂದೇ ಬದಿಯಲ್ಲಿ ಭಾರವನ್ನು ಹೊರುವುದು ಬೆನ್ನು ಮೂಳೆಯನ್ನು ಬಾಗಿಸುತ್ತದೆ. ಬಾಗಿದ ಬೆನ್ನು ಹುರಿಯಿಂದಾಗಿ ಬೆನ್ನು ನೋವು ಹೆಚ್ಚುತ್ತದೆ.

ಹೈ ಹೀಲ್ಸ್‌: ಎತ್ತರದ ಹಿಮ್ಮಡಿಗಳನ್ನು ಧರಿಸುವುದು ಇದೀಗ ಸಾಮಾನ್ಯವಾಗಿದೆ. ಆದರೆ ಇವು ಪಾದ ಮತ್ತು ಬೆನ್ನು ಎರಡರಲ್ಲಿಯೂ ನೋವು ತರಬಹುದು. ಮೀನ ಖಂಡಗಳ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ರಕ್ತ ಸರಬರಾಜು ಸಮಸ್ಯೆ ಉಂಟಾಗುತ್ತದೆ. ಇದರಿಂದ ಬೆನ್ನು ನೋವು ದೇಹವನ್ನು ಆವರಿಸಿಕೊಳ್ಳಲಾರಂಭಿಸುತ್ತದೆ. ದೂರದ ನಡಿಗೆ, ಬಹಳ ಹೊತ್ತು ನಿಂತೇ ಕೆಲಸ ಮಾಡುವಂತಿದ್ದಲ್ಲಿ ಆರಾಮದಾಯಕವಾಗಿರುವ ಶೂ ಅಥವಾ ಚಪ್ಪಲಿಗಳನ್ನು ಧರಿಸುವುದು ಒಟ್ಟಾರೆ ಆರೋಗ್ಯಕ್ಕೆ ಒಳಿತಾಗಿದೆ.

ಕಂಠಾಭರಣ: ಕತ್ತಿಗೆ ಅತಿಯಾದ ಆಭರಣಗಳನ್ನು ಧರಿಸುವುದು ಭಾರದ ಪೆಂಡೆಂಟ್‌ ಬಳಸುವುದು, ಕತ್ತಿನ ಸ್ನಾಯುಗಳನ್ನು ಎಳೆದು ಹಿಡಿದಿಡುತ್ತವೆ. ಕತ್ತಿನ ಕೀಲುಗಳ ಮೇಲೆ ಭಾರವಂತೂ ಹೆಚ್ಚುತ್ತ ನೋವು ಹೆಚ್ಚಾಗುತ್ತದೆ. ಕತ್ತು ಭಾರದಿಂದ ಕುಗ್ಗಿದಂತಾಗುತ್ತದೆ. ಈ ಕುಸಿತದಿಂದಾಗಿ ಭುಜದ ನೋವು, ಕತ್ತಿನ ನೋವು ನಿಧಾನಕ್ಕೆ ಬೆನ್ನನ್ನು ಆವರಿಸಿಕೊಳ್ಳುತ್ತದೆ. ಬೆನ್ನು ಹುರಿಯ ಮೇಲೆ ಭಾರ ಹೆಚ್ಚುತ್ತದೆ.

ಕೇಶ ವಿನ್ಯಾಸ: ಕೇಶರಾಶಿಯನ್ನು ತಲೆಯ ಒಂದೇ ಬದಿಗೆ ಬಾಚಿ, ಅದನ್ನು ಭುಜದ ಮೇಲಿಂದ ಇಳಿಬಿಡುವುದು ಅತಿ ಚಂದ ಕಾಣುತ್ತದೆ ನಿಜ. ಆದರೆ ಈ ಸ್ಥಿತಿಯಲ್ಲಿ ನಿಮ್ಮ ತಲೆ ಹಾಗೂ ಗದ್ದ ಎರಡೂ ವಿರುದ್ಧ ದಿಕ್ಕಿನಲ್ಲಿ ಬಾಗಿರುತ್ತವೆ. ಇದೂ ಸಹ ನಿಮ್ಮ ಕತ್ತಿನ ಬದಿಗೆ, ಭುಜ ಹಾಗೂ ಬೆನ್ನು ನೋವನ್ನು ಸೃಷ್ಟಿಸಬಹುದು. ಆದಷ್ಟು ಸರಳವಾಗಿರಿ, ಸಹಜವಾಗಿರಿ. ಆರೋಗ್ಯವಂತರಾಗಿರಿ.

ಫ್ಯಾಶನ್‌ ಮಂತ್ರ

*ಉಡುಗೆ ತೊಡುಗೆ ಆರಾಮದಾಯಕವಾಗಿರಲಿ
* ಪಾದ ಸಂಪೂರ್ಣವಾಗಿ ನೆಲ ಸ್ಪರ್ಶಿಸುವಂತಿರಲಿ
* ಹ್ಯಾಂಡ್‌ಬ್ಯಾಗಿನಲ್ಲಿ ಅನಾವಶ್ಯಕ ವಸ್ತುಗಳನ್ನು ತುಂಬದಿರಿ
*ಆಭರಣಗಳು ಹಗುರವಾಗಿದ್ದಷ್ಟೂ ಕತ್ತು ಬಾಗದು
* ಕೇಶವಿನ್ಯಾಸ ಭುಜಗಳ ನಡುವೆ ಬರುವಂತಿರಲಿ.
ಹಗುರ, ನೈಸರ್ಗಿಕ, ಸಹಜ, ಸರಳತನವೇ ಫ್ಯಾಶನ್‌ ಮಂತ್ರವಾಗಿರಲಿ. ಟ್ರೆಂಡ್‌ ಏನೇ ಇದ್ದರೂ ನಿಮ್ಮನ್ನು ಆರೋಗ್ಯವಂತವಾಗಿರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT