ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್‌ ಕ್ಷೇತ್ರಕ್ಕೆ ಅಲಿಯಾ ಸೈ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅಭಿನಯದ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚು ಹರಿಸಿರುವ ‘ಬಿ ಟೌನ್‌’ ನ ಹೊಸ ಮುಖ ಅಲಿಯಾ ಭಟ್ ಈಗ ಫ್ಯಾಷನ್ ಲೋಕಕ್ಕೂ ಕಾಲಿರಿಸಿದ್ದಾರೆ.

‘ಫ್ಯಾಷನ್ ಕ್ಷೇತ್ರದ ಬಗ್ಗೆ ಆರಂಭದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ, ‘‘ಸ್ಟುಡೆಂಟ್‌ ಆಫ್‌ ದಿ ಇಯರ್‌’’ ಚಿತ್ರದಲ್ಲಿ ನನ್ನ ಪಾತ್ರ ಹಾಗೂ ಆ ಉಡುಪಿಗೆ ಅನುಗುಣವಾಗಿ ನನ್ನ ತೂಕ ಇಳಿಸಬೇಕಾಯಿತು.  ಇದರಿಂದ ಫ್ಯಾಷನ್‌ ಕುರಿತು ಸ್ವಲ್ಪ ತಿಳಿವಳಿಕೆ ಹಾಗೂ ಪ್ರೀತಿ ಹುಟ್ಟಿಕೊಂಡಿತು’ ಎಂದು ಅಲಿಯಾ ಹೇಳಿದ್ದಾರೆ.

‘ನಿಜ ಹೇಳಬೇಕೆಂದರೆ ನಿರ್ದೇಶಕ ಕರಣ್‌ ಜೋಹರ್‌ ಅವರಿಗೆ ಫ್ಯಾಷನ್‌ ಕ್ಷೇತ್ರದ ಕುರಿತು ಸಾಕಷ್ಟು ತಿಳಿವಳಿಕೆ ಇದೆ. ಅವರ ಪ್ರೇರಣೆಯಿಂದಲೇ ಈ ಕ್ಷೇತ್ರಕ್ಕೆ ನಾನು ಕಾಲಿಡುವಂತಾಯಿತು’ ಎಂದೂ ತಿಳಿಸಿದ್ದಾರೆ.

ಅಂದಹಾಗೆ ಅಲಿಯಾ ಅವರು ವಿನ್ಯಾಸಗೊಳಿಸಿದ ಉಡುಪುಗಳು ಆನ್‌ಲೈನ್‌ ಜಾಲತಾಣ ಜಬಾಂಗ್‌ನಲ್ಲಿ ಖರೀದಿಸಬಹುದು. ಇವರ ವಿನ್ಯಾಸದ ಉಡುಪುಗಳಿಗೆ ‘ಅಲಿಯಾ’ ಎಂದು ಹೆಸರಿಟ್ಟಿರುವುದು ವಿಶೇಷ. ಇನ್ನೂ ಸಿನಿಮಾ ಕುರಿತು ಮಾತನಾಡುವುದಾದರೆ ಸದ್ಯ ಅಲಿಯಾ ‘ಶಾಂದಾರ್‌ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT