ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್: 2ನೇ ಸುತ್ತಿಗೆ ನೊವಾಕ್

ಟೆನಿಸ್: ಕೆರ್ಬರ್‌ಗೆ ಆಘಾತ
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಅಗ್ರ ಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್ ಮತ್ತು ಆ್ಯಂಡಿ ಮರ್ರೆ ಅವರು ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಿಸಿ ದರು. ಮಹಿಳೆಯರ ವಿಭಾಗದಲ್ಲಿ ಏಂಜಲಿಕ್ ಕೆರ್ಬರ್ ಅವರು ಆಘಾತ ಅನುಭವಿಸಿದರು.

ರೋಲಂಡ್ ಗ್ಯಾರೊಸ್‌ನಲ್ಲಿ ಮಂಗಳವಾರ ಸರ್ಬಿಯಾದ ಜೋಕೊವಿಚ್ 6–4, 6–1, 6–1 ಸೆಟ್‌ಗಳಿಂದ ತೈವಾನ್‌ನ ಲು ಯೆನ್ ಸುನ್ ಅವರ ಸವಾಲನ್ನು ಮೆಟ್ಟಿ ನಿಂತರು.

ಮೊದಲ ಸೆಟ್‌ನಲ್ಲಿ ತೈವಾನ್ ಆಟಗಾರ ಕಠಿಣ ಪೈಪೋಟಿ ಒಡ್ಡಿದರು. ಅದರೆ, ವಿಶ್ವದ ಅಗ್ರಶ್ರೇಯಾಂಕದ ಆಟಗಾರ ನೊವಾಕ್ ಚಾಣಾಕ್ಷತನದ ಆಟವಾಡಿದರು. 90 ನಿಮಿಷಗಳ ಆಟದಲ್ಲಿ ನೋವಾಕ್ ನಿಖರವಾದ ಸರ್ವಗಳು ಮತ್ತು ಆಕರ್ಷಕ ಬ್ಯಾಕ್‌ಹ್ಯಾಂಡ್ ಹೊಡೆತಗಳ  ಮೂಲಕ ಎದುರಾಳಿಗೆ ಸೋಲುಣಿಸಿದರು.ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಈ ಮೊದಲು ಮೂರು ಬಾರಿ ಫೈನಲ್ ತಲುಪಿದ್ದರು.

ಎರಡನೇ ಸುತ್ತಿನಲ್ಲಿ ನೊವಾಕ್ ಬೆಲ್ಜಿಯಂನ ಸ್ಟೀವ್ ಡಾರ್ಸಿಸ್ ಅವರನ್ನು ಎದುರಿಸುವರು.

ಮರ್ರೆಗೆ ಕಠಿಣ ಜಯ: ಬ್ರಿಟನ್‌ನ ಆ್ಯಂಡಿ ಮರ್ರೆ ಮೊದಲ ಸುತ್ತಿನಲ್ಲಿ ಪ್ರಯಾಸದ ಜಯ ಗಳಿಸಿದರು.

ಅವರು 3–6, 3–6, 6–0, 6–3, 7–5ರಿಂದ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ವಿರುದ್ಧ ಗೆದ್ದರು. ಮೂರು ತಾಸು 41 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಮರ್ರೆ ಮೊದಲ ಎರಡು ಸೆಟ್‌ಗಳಲ್ಲಿ ಸೋತರು. 37 ವರ್ಷದ ಸ್ಟೆಪಾನೆಕ್ ಅಮೋಘ ಆಟವಾಡಿದರು. ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಮರ್ರೆ ಬಹಳಷ್ಟು  ಪರದಾಡಬೇಕಾಯಿತು. 

ಆದರೆ ಮೂರನೇ ಸೆಟ್‌ನಲ್ಲಿ ಮರ್ರೆ ತಿರುಗೇಟು ನೀಡುವಲ್ಲಿ ಸಫಲರಾದರು.  ಅವರ ಬಲಶಾಲಿ ಸರ್ವ್‌ಗಳು ಮತ್ತು ನಿಖರವಾದ ರ್‌್ಯಾಲಿಗಳ ಮುಂದೆ ಸ್ಟೆಪಾನೆಕ್ ಮಂಕಾದರು. ಮರ್ರೆ 6–0ಯಿಂದ ಸೆಟ್ ಗೆದ್ದರು. ನಂತರದ ಸೆಟ್‌ನಲ್ಲಿ ಸ್ಟೆಪಾನೆಕ್ ಪ್ರತಿರೋಧವನ್ನು ಮೀರಿ ನಿಂತ ಮ್ರೆ 6–3ರಿಂದ ಗೆದ್ದರು. ಆದರೆ, ಐದನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಮರ್ರೆ ಸುಲಭವಾಗಿ ಜಯಿಸಲು ಸಾಧ್ಯವಾಗಲಿಲ್ಲ.  ಟೈಬ್ರೇಕರ್‌ನಲ್ಲಿ ಮರ್ರೆ 7–5ರಿಂದ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT