ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಕರ್ನಾಟಕ ಚಿತ್ರೋದ್ಯಮದ ಬೆಂಬಲವಿಲ್ಲ

Last Updated 30 ಜುಲೈ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪರ ಸಂಘಟ­ನೆ­ಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಬೆಂಬಲ ನೀಡದಿರಲು ಕರ್ನಾ­ಟಕ ಚಲನ­ಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.

‘ಬಂದ್‌ ಕುರಿತಂತೆ ನಿರ್ಮಾಪಕರು, ಪ್ರದ­ರ್ಶಕರು ಮತ್ತು ವಿತರಕರೊಂದಿಗೆ ಸಭೆ ನಡೆಸಲಾಗಿದೆ. ಶಾಲೆ­ಯಲ್ಲಿ ವಿದ್ಯಾ­ರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರ­ಣದ ಕುರಿತು ಸರ್ಕಾರ ಕೆಲವು ಸೂಕ್ತ ಕ್ರಮ­ಗಳನ್ನು ಕೈಗೊಂಡಿ­ರುವುದ­ರಿಂದ ಬಂದ್‌ ಬೆಂಬಲಿಸುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತ­ವಾ­ಯಿತು. ಹೀಗಾಗಿ ನೇರವಾಗಿ ಬಂದ್‌­­­ನಲ್ಲಿ ಪಾಲ್ಗೊ­ಳ್ಳ­ದಿ­ರಲು ತೀರ್ಮಾ­­ನಿ­ಸ­ಲಾ­ಯಿತು’ ಎಂದು ಚಲ­ನ­ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗ­ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರ್ಮಾಪಕರು, ಪ್ರದರ್ಶಕರು ಸ್ವಯಂಪ್ರೇರಣೆ­ಯಿಂದ ಬಂದ್‌ನಲ್ಲಿ ಭಾಗ­ವ­ಹಿಸಬಹುದಾಗಿದೆ. ಈ ಬಗ್ಗೆ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಬಹು­ತೇಕ ಸಿನಿಮಾಗಳ ಚಿತ್ರೀಕರಣ ನಗ­ರ­ದಾಚೆ ಗಿನ ಸ್ಥಳ­ಗ­ಳಲ್ಲಿ ನಡೆಯು­ತ್ತಿದೆ. ಹೀಗಾಗಿ ಚಿತ್ರೀಕರಣ­ಗಳನ್ನು ಸ್ಥಗಿ­ತ­­ಗೊ­­­ಳಿ­ಸು­ವಂತೆಯೂ ಸೂಚಿಸಿಲ್ಲ’ ಎಂದರು.ಜಾಗೃತಿ ಕಿರುಚಿತ್ರ: ದೇಶದಲ್ಲಿ ಅತ್ಯಾ­ಚಾರ ಪ್ರಕರಣ­ಗಳು ಹೆಚ್ಚುತ್ತಿರು­ವುದ­ರಿಂದ ಅದರ ವಿರುದ್ಧ ಜನರಲ್ಲಿ ಜಾಗೃತಿ ಮೂ­ಡಿಸಲು ಕಿರುಚಿತ್ರ ತಯಾರಿಸಲು ವಾಣಿಜ್ಯ ಮಂಡಳಿ ಮುಂದಾಗಿದೆ.

‘ಭಗವಾನ್‌, ನಾಗಣ್ಣ ಮುಂತಾದ ನಿರ್ದೇ­ಶಕರ ನೇತೃತ್ವದಲ್ಲಿ ಈ ಕಿರುಚಿತ್ರ ತಯಾರಾಗಲಿದೆ. ಇದರಲ್ಲಿ ಖ್ಯಾತ ಕಲಾ­ವಿದರು ಕಾಣಿಸಿಕೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಚಿತ್ರಮಂದಿರ­ಗಳ­ಲ್ಲಿಯೂ ಚಿತ್ರ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲು ಚಿತ್ರರಂಗ ಪ್ರಯ­ತ್ನಿ­­ಸ­ಲಿದೆ’ ಎಂದು ಗಂಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT