ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆ ಬಗೆ ಮಾಂಸಾಹಾರ

ನಮ್ಮೂರ ಊಟ
Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚಿಕನ್ ಬ್ಲ್ಯಾಕ್ ಫ್ರೈ            
ಸಾಮಗ್ರಿಗಳು: ಚಿಕನ್ 1ಕೆ.ಜಿ, ಶುಂಠಿ ಫೇಸ್ಟ್ 1ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ 10 ಎಸಳು, ಕೊತ್ತಂಬರಿ ಸೊಪ್ಪು 1 ಕಟ್ಟು, ಕರಿಬೇವು

1ಕಡ್ಡಿ, ಧನಿಯಾ ಪುಡಿ 3 ಚಮಚ, ಖಾರದ ಪುಡಿ 1 ಚಮಚ, ಅರಿಶಿನ ಪುಡಿ 1/2 ಚಮಚ, ಗರಂ ಮಸಾಲೆ 1/2 ಚಮಚ, ಜೀರಿಗೆಪುಡಿ 1/2 ಚಮಚ, ಪೆಪ್ಪರ್ ಪುಡಿ 1 ಚಮಚ, ಈರುಳ್ಳಿ ದಪ್ಪ ಗಾತ್ರದ್ದು 2, ಹಸಿ ಮೆಣಸಿನಕಾಯಿ 6, ವಿನೆಗಾರ್ 1 ಚಮಚ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಚೆನ್ನಾಗಿ ತೊಳೆದ ಚಿಕನ್ ಅರಿಶಿನ ಪುಡಿ, ಖಾರದ ಪುಡಿ ಮತ್ತು ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಮತ್ತು ಪುದಿನಾ ಸೊಪ್ಪನ್ನು ಹಾಕಿ. ನಂತರ ಬೆಂದ ಚಿಕನ್ ಹಾಕಿ. ಉಪ್ಪು, ಪೆಪ್ಪರ್ ಪುಡಿ, ಜೀರಿಗೆಪುಡಿ, ಗರಂ ಮಸಾಲ ಹಾಕಿ ಬೇಯಲು ಬಿಡಿ. ಬೆಂದ ನಂತರ ಧನಿಯಾಪುಡಿಯನ್ನು ಕಾವಲಿ ಮೇಲೆ ಸ್ವಲ್ಪಕಪ್ಪು ಬಣ್ಣ ಬರುವವರೆಗೂ ಹುರಿದು ಕೊಳ್ಳಿ. ನಂತರ ಹುರಿದ ಧನಿಯಾಪುಡಿ ಹಾಕಿ ಚೆನ್ನಾಗಿ ತಿರುಗಿಸುತ್ತೀರಿ. ಗ್ರೇವಿ ಬೇಡವೆಂದರೆ ಡ್ರೈ ಆಗುವ ತನಕ ತಿರುಗಿಸುತ್ತೀರಿ, ಬೆಂದ ನಂತರ ವಿನೆಗಾರ್ ಹಾಕಿ ಆರಲು ಬಿಡಿ.

ಎಗ್ ಬುರ್ಜಿ            
ಸಾಮಗ್ರಿಗಳು: 3 ಮೊಟ್ಟೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1/2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪೆಪ್ಪರ್ ಪುಡಿ/ಖಾರದ ಪುಡಿ 1/2 ಚಮಚ, ಈರುಳ್ಳಿ ದಪ್ಪ ಗಾತ್ರದ್ದು 2, ಹಸಿ ಮೆಣಸಿನಕಾಯಿ 2, ಕಡ್ಲೆಬೇಳೆ 2 ಚಮಚ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ: ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕಡ್ಲೆಬೇಳೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಪೆಪ್ಪರ್ ಪುಡಿ, ಖಾರದ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಮೊಟ್ಟೆಯನ್ನು ಹಾಕಿ ಬೇಯುವ ತನಕ ತಿರುಗಿಸಿ.

ಚಿ

ಕನ್ ಗಿಝರ್ಡ್ ಫ್ರೈ            
ಸಾಮಗ್ರಿಗಳು: ಚಿಕನ್ ಗಿಸರ್ಡ್ (ಜಠರ) 1 ಕೆ.ಜಿ, ಶುಂಠಿ ಪೇಸ್ಟ್ 1ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು 1 ಕಟ್ಟು, ಪುದೀನ ಸೊಪ್ಪು 1/2 ಕಟ್ಟು, ಕರಿಬೇವು 1 ಕಡ್ಡಿ, ಧನಿಯಾ ಪುಡಿ 3 ಚಮಚ, ಖಾರದ ಪುಡಿ 2 ಚಮಚ, ಅರಿಶಿನ ಪುಡಿ 1/2 ಚಮಚ, ಗರಂ ಮಸಾಲೆ 1/2 ಚಮಚ, ಪೆಪ್ಪರ್ ಪುಡಿ 1 ಚಮಚ, ಈರುಳ್ಳಿ ದಪ್ಪ ಗಾತ್ರದ್ದು 3, ಟೊಮೆಟೊ ದಪ್ಪ ಗಾತ್ರದ್ದು 2, ಒಣ ಮೆಣಸಿನಕಾಯಿ 6, ಗೋಡಂಬಿ 8, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಚೆನ್ನಾಗಿ ತೊಳೆದ ಚಿಕನ್ ಗಿಸರ್ಡ್‌ಗೆ ಅರಿಶಿನ ಪುಡಿ ಮತ್ತು ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಕರಿಬೇವು, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಈರುಳ್ಳಿ, ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಹಾಕಿ. ನಂತರ ಬೆಂದ ಚಿಕನ್ ಗಿಸರ್ಡ್ ಹಾಕಿ. ನಂತರ ಉಪ್ಪು, ಧನಿಯಾಪುಡಿ, ಖಾರದಪುಡಿ, ಪೆಪ್ಪರ್ ಪುಡಿ, ಗರಂ ಮಸಾಲ ಹಾಕಿ ಡ್ರೈ ಆಗುವ ತನಕ ತಿರುಗಿಸುತ್ತೀರಿ.

ಕರಿದ ಚಿಕನ್ ಕಬಾಬ್           
ಸಾಮಗ್ರಿಗಳು: ಚಿಕನ್ 1/2 ಕೆ.ಜಿ, ಕಡಲೆ ಹಿಟ್ಟು 3 ಚಮಚ, ಕೆಂಪು ಖಾರದಪುಡಿ 3 ಚಮಚ, ಮೈದಾ ಹಿಟ್ಟು 1ಚಮಚ, ಕಾರ್ನ್‌ ಫ್ಲೋರ್ (ಮೆಕ್ಕೆ ಜೋಳದ ಹಿಟ್ಟು) 2 ಚಮಚ, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ವಿನಿಗರ್ 2 ಚಮಚ, ಕೋಳಿಮೊಟ್ಟೆ 1, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ, ನಿಂಬೇಹಣ್ಣು 1.

ವಿಧಾನ: ಚೆನ್ನಾಗಿ ತೊಳೆದ ಚಿಕನ್‌ಗೆ ಕಡಲೆ ಹಿಟ್ಟು, ಮೈದಾ ಹಿಟ್ಟು, ಕೆಂಪು ಖಾರದಪುಡಿ, ಕಾರ್ನ್‌ಫ್ಲೋರ್, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ, ವಿನೆಗರ್, ಕೋಳಿಮೊಟ್ಟೆ, ಬೇಕೆಂದರೆ ಕೇಸರಿ ಬಣ್ಣ, ಉಪ್ಪನ್ನು ಹಾಕಿ ಕಲಸಿ ಅರ್ಧ ಗಂಟೆ ರೆಫ್ರಿಜರೇಟರ್‌ನಲ್ಲಿಡಿ. ಕಾದ ಎಣ್ಣೆಗೆ ಒಂದು ಚಿಕನ್ ತುಂಡನ್ನು ಹಾಕಿ ಹದ ಉರಿಯಲ್ಲಿ ಕರಿಯಿರಿ. ಕೆಂಬಣ್ಣಕ್ಕೆ ಬಂದಾಗ ರುಚಿ ನೋಡಿ ಕಡಿಮೆಯಿದ್ದುದನ್ನು ಸೇರಿಸಿ ಉಳಿದ ಚಿಕನ್‌ ಅನ್ನು ಕರಿಯಿರಿ, ನಂತರ ಪ್ಲೇಟ್‌ಗೆ ಈರುಳ್ಳಿ ಕತ್ತರಿಸಿಟ್ಟು ನಿಂಬೇಹಣ್ಣಿನ ರಸವನ್ನು ಹಾಕಿ ತಿನ್ನಲು ಕೊಡಿ.

ಚಿಕನ್ ಪಲಾವ್
ಸಾಮಗ್ರಿಗಳು: ಚಿಕನ್ 1/2 ಕೆ.ಜಿ, ಸೋನಾ ಮಸೂರಿ ಅಕ್ಕಿ 1/2 ಕೆ.ಜಿ, ಶುಂಠಿ ಪೇಸ್ಟ್ 1ಚಮಚ, ಬೆಳ್ಳುಳ್ಳಿ ಪೇಸ್ಟ್ 1ಚಮಚ, ಕೊತ್ತಂಬರಿ 1ಕಟ್ಟು,

ಪುದೀನ ಸೊಪ್ಪು 1/2 ಕಟ್ಟು, ಕರಿಬೇವು 1ಕಡ್ಡಿ, ಕೆಂಪು ಮೆಣಸಿನ ಪುಡಿ 2 ಚಮಚ, ಅರಿಶಿನ ಪುಡಿ 1/2 ಚಮಚ, ಮೊಸರು 2 ಚಮಚ, ಗರಂ ಮಸಾಲೆ 1 ಚಮಚ, ಗೋಡಂಬಿ 6, ಕಾಳು ಮೆಣಸು 6, ಏಲಕ್ಕಿ 2, ಲವಂಗ 6, ಚಕ್ಕೆ 4 ಚಿಕ್ಕ ತುಂಡುಗಳು, ಅನಾನಸ್ ಮೊಗ್ಗು 2, ಈರುಳ್ಳಿ ದಪ್ಪ ಗಾತ್ರದ್ದು 3, ಟೊಮೆಟೊ ದಪ್ಪ ಗಾತ್ರದ್ದು 2, ಹಸಿ ಮೆಣಸಿನಕಾಯಿ 4, ಕಾಯಿ 1/2 ಹೋಳು, ನಿಂಬೆ ಹಣ್ಣು 1, ಎಣ್ಣೆ, ತುಪ್ಪ/ಡಾಲ್ಡಾ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಚೆನ್ನಾಗಿ ತೊಳೆದ ಚಿಕನ್‌ಗೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, 1/2 ಓಳು ನಿಂಬೆ ರಸ ಮತ್ತು ಸ್ವಲ್ಪ ಉಪ್ಪನ್ನು ಹಾಕಿ ಕಲಸಿ ಅರ್ಧ ಗಂಟೆ ರೆಫ್ರಿಜರೇಟರ್‌ನಲ್ಲಿಡಿ. ಒಂದು ಈರುಳ್ಳಿಯನ್ನು ಉದ್ದುದ್ದ, ಇನ್ನೊಂದನ್ನು ವೃತ್ತಾಕಾರದಲ್ಲಿ, ಮತ್ತೊಂದನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಟೊಮೆಟೊ, ಕೊತ್ತಂಬರಿ, ಪುದೀನ, ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ಕಾಯಿತುರಿ, ಶುಂಠಿ ಮತ್ತು ಬೆಳ್ಳುಳಿ ಪೇಸ್ಟ್, ಗರಂ ಮಸಾಲೆ, ಮೇಲೆ ಕತ್ತರಿಸಿಕೊಂಡಿರುವ ಪದಾರ್ಥಗಳನ್ನು ಸ್ವಲ್ಪ ಸೇರಿಸಿ ರುಬ್ಬಿ ಮಿಶ್ರಣ ಮಾಡಿಟ್ಟುಕೊಳ್ಳಿ.

ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಅಥವಾ ಡಾಲ್ಡಾವನ್ನು ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು, ಮೆಣಸಿನಕಾಯಿ, ಈರುಳ್ಳಿ, ಲವಂಗ, ಚಕ್ಕೆ, ಕಾಳು ಮೆಣಸು ಮತ್ತು ಅನಾನಸ್ ಮೊಗ್ಗನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಆಮೇಲೆ ಟೊಮೆಟೊ, ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಹಾಕಿ. ನಂತರ ರೆಫ್ರಿಜರೇಟರ್‌ನಲ್ಲಿದ್ದ ಚಿಕನ್ ಮಿಶ್ರಣವನ್ನು ಹಾಕಿ, ಮೊಸರು ಮತ್ತು ಉಪ್ಪನ್ನು ಸೇರಿಸಿದ ನಂತರ ರುಬ್ಬಿದ ಮಿಶ್ರಣವನ್ನು ಬೆರೆಸಿ ಸ್ವಲ್ಪ ಸಮಯ ಬೇಯಿಸಿದ ತರುವಾಯ ಒಂದಕ್ಕೆ ಎರಡರಷ್ಟು ನೀರನ್ನು ಹಾಕಿ, ತೊಳೆದ ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಕಡಿಮೆಯಾಗಿದ್ದನ್ನು ಸೇರಿಸಿ, ಅಕ್ಕಿ ಬೇಯಲು ಬಿಡಿ. ಬೆಂದ ನಂತರ ಉಣಬಡಿಸುವ ಬೌಲ್‌ಗೆ ಹಾಕಿ. ಬೇಕೆಂದರೆ ಕೊತ್ತಂಬರಿ ಮತ್ತು ಉಳಿದಾರ್ಧ ನಿಂಬೆರಸವನ್ನು ಬೆರೆಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT