ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅಧಿವೇಶನ ಮೊಟಕು ಸಂಭವ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಗಸ್ಟ್‌ 14ರ­ವರೆಗೆ ನಡೆಯುವುದೆಂದು ನಿರೀಕ್ಷಿಸಿರುವ ಸಂಸ­ತ್‌ನ ಪ್ರಸಕ್ತ ಬಜೆಟ್‌ ಅಧಿವೇಶನ ಒಂದು ವಾರ ಮೊಟಕಾಗುವ ಸಾಧ್ಯತೆ ಇದೆ. ಈ ವಿಚಾರ ಗುರುವಾರ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರುವ ಸಂಭವ­ವಿದೆ.

ಜುಲೈ 31ರೊಳಗೆ ಬಜೆಟ್‌ ಅಂಗೀ­ಕಾರ ಪಡೆದ ನಂತರ ಹೆಚ್ಚಿನ ಶಾಸ­ಕಾಂಗ ವಿಷಯಗಳು ಉಳಿದಿರುವುದಿಲ್ಲ. ಈ ಹಿಂದಿನ ಯೋಜನೆಯಂತೆ, ರಾಜ್ಯ­ಸಭೆಯಲ್ಲಿ ಅಂಗೀಕಾರವಾಗಿ, ಲೋಕ­ಸಭೆ­ಯಲ್ಲಿ ಬಾಕಿ ಇರುವ ಕೆಲವು ಮಸೂ­ದೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಬಯಸಿತ್ತು.

ಆದರೆ ಈಗಿನ ಚಿಂತನೆ ಪ್ರಕಾರ, ತರಾತುರಿಯ ಕ್ರಮ­ಗಳಿ­ಗಿಂತ ತೀವ್ರ ಪರಿಶೀಲನೆಯ ನಂತರ ಈ ಮಸೂದೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು  ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT