ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ, ವಾಹನ ತೊಳೆಯದಂತೆ ನಾಗರಿಕರಿಗೆ ಮನವಿ

ಪ್ರಜಾವಾಣಿ ಫಲಶ್ರುತಿ: ತಾಳಿಕೋಟಿ: ಖಾಸಗಿ ಒಡೆತನ ಪರಸಿಕಲ್ಲಿನ ಗಣಿ ಈಜುಗೊಳವಾಗಿ ಮಾರ್ಪಾಡು
Last Updated 19 ಮೇ 2015, 7:03 IST
ಅಕ್ಷರ ಗಾತ್ರ

ತಾಳಿಕೋಟೆ: ಕಳೆದ ಮೂರ್ನಾಲ್ಕು ವರ್ಷ ಗಳಿಂದ ಬೇಸಿಗೆಯಲ್ಲಿ ಈಜುಕೊಳವಾಗಿ ಸಾರ್ವಜನಿಕರನ್ನು ಆಕರ್ಷಿಸುತ್ತಿರುವ ಮಿಣಜಗಿ ಪರಸಿಕಲ್ಲಿನ ಪಡೆಯಲ್ಲಿ ಖಾಸಗಿ ವಾಹನಗಳು ಹಾಗೂ ಬಟ್ಟೆ ತೊಳೆಯು ವುದರಿಂದ ಅನಾರೋಗ್ಯಕರ ವಾತಾವರಣವುಂಟಾಗುತ್ತಿದೆ ಇದನ್ನು ನಿಯಂತ್ರಿಸಿ ಸಂರಕ್ಷಿಸಿ ಎಂದು ಸಾರ್ವಜನಿಕರ ಪರವಾಗಿ ‘ಪ್ರಜಾವಾಣಿ’  ಏಪ್ರಿಲ್‌ 10ರಂದು ವರದಿ ಪ್ರಕಟಿಸಿತ್ತು.

ಮನವಿಗೆ ಪರಸಿ ಪಡೆಯ ಮಾಲೀಕರಾದ  ಟಿಎಪಿಸಿಎಂಎಸ್‌ ಸದಸ್ಯ  ಪಿ.ಬಿ.ಪಾಟೀಲ (ರಾಜುಗೌಡ) ಹಾಗೂ ಸಂಗಪ್ಪ ಮದರಿ
ಸ್ಪಂದಿಸಿದ್ದಾರೆ, ಈಜು ಕೊಳದ ಒಳಗೆ ಬರಲು ಇದ್ದ ಎರಡೂ ದಾರಿಗಳಿಗೆ ಅಡ್ಡಲಾಗಿ ಎತ್ತರದ ಒಡ್ಡು ಹಾಕಿಸಿ ವಾಹನಗಳು ಒಳಗೆ ಬರದಂತೆ ಕೇವಲ ಈಜುಕೊಳವಾಗಿ ಬಳಕೆಯಾಗು ವಂತೆ ಮಾಡಿ ಈಜಲು ಬರುವ ನೂರಾ ರು ಜನತೆಯ ಹೃದಯ ಗೆದ್ದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಜುಗೌಡ ‘ತಮ್ಮ ಪತ್ರಿಕೆಯಲ್ಲಿ ಈಜುಕೋಳದ ಬಳಕೆ ಅದ ರಿಂದ ನೂರಾರು ಜನರು ಪಡೆಯುತ್ತಿದ್ದ ಲಾಭ, ವಾಹನಗಳ ತೊಳೆಯುವಿಕೆ ಅದ ರಿಂದ ಕೊಳದ ನೈರ್ಮಲ್ಯ ಹಾಳಾಗು ತ್ತಿರುವ ಬಗ್ಗೆ ಬಂದ ಲೇಖನ ಮನಕ್ಕೆ ತಟ್ಟಿತು. ವರದಿ ನಂತರ  ಈ ಬಗ್ಗೆ ನನ್ನ ಅನೇಕ ಮಿತ್ರರೂ ಸಹ ಈಜಿಗೆ ಮಾತ್ರ ಅವಕಾಶ ನೀಡುವಂತೆ ಒತ್ತಡ ಹೇರ ತೊಡಗಿದರು. ಫರಸಿಕಲ್ಲು ತೆಗೆದು ಮಾರಾಟ ಮಾಡಲು  ನಿಂತ ನೀರು ಅವಕಾಶ ನೀಡಲಿಲ್ಲ. ಇದು ಈಜುಕೊಳ ವಾಗಿಯಾದರೂ ಜನತೆಗೆ ಉಪಯೋಗಕ್ಕೆ ಬಂತಲ್ಲ ಎಂಬ ಸಂತೋಷ ನಮಗಿದೆ ಎಂದರು. 

ಜಿಲ್ಲೆಯಲ್ಲಿಯೆ ಇಂತಹ ಸಾರ್ವಜನಿಕ ಬೃಹತ್‌ ಈಜುಕೊಳ ವಿಲ್ಲ ಅದರ ಪುಣ್ಯ ತಟ್ಟಲಿ ಎಂದು ಗಟ್ಟಿ ನಿರ್ಧಾರ ಮಾಡಿದೆ. ಇದಕ್ಕೆ ಮದರಿ ಸಾಹುಕಾರ, ಬಸವರಾಜ ಬಾಗೇವಾಡಿ, ಸಂದಿ ಅಂಗಡಿ, ರಾಜು ಹಂಚಾಟೆ, ಶಿವಾನಂದ ಹೂಗಾರ, ಬಸವರಾಜ ಮದರಕಲ್ಲ ಮೊದಲಾದ ವರು ಬೆಂಬಲವಾಗಿ ನಿಂತರು ಎಂದು ಸ್ಮರಿಸಿದರು.

ವಾಹನಗಳ ಒಳ ಪ್ರವೇಶ ವೇನೋ ನಿಂತಿದೆ.  ಕೊಳದಲ್ಲಿ ಬಟ್ಟೆ ತೊಳೆಯ ದಂತೆ ಈಜುವವರು ಸಾಬೂನು, ಶ್ಯಾಂಪು ಬಳಸದಂತೆ, ತಡೆಗಟ್ಟಿ ಎಂದು ಈಜಲು ಬರುವವರಿಗೆ ಅವರು ಮನವಿ ಮಾಡಿದರು. 

ಈಗ ಈಜುಕೊಳವಾಗಿ ಮಾತ್ರ ಬಳಕೆಯಾಗಲಿ ಎಂದು ಈಜುವವರೆಲ್ಲ ಗಟ್ಟಿ ನಿರ್ಧಾರ ಮಾಡಿದ್ದಾರೆ. ನೀರು ಕೆಡದಂತೆ ರಕ್ಷಿಸಲು, ಸ್ವಯಂಪ್ರೇರಿತರಾಗಿ ಶ್ಯಾಂಪು, ಸಾಬೂನು ಬಳಕೆ ಮಾಡುತ್ತಿಲ್ಲ. ಇದು ಗೊತ್ತಿಲ್ಲದವರು ತಂದು ಬಳಸಲು ತೊಡಗಿದರೆ ಕೊಳದಲ್ಲಿನ ಪ್ರತಿಯೊಬ್ಬರೂ ಬಳಸದಂತೆ ಕೂಗು ಹಾಕುತ್ತಾರೆ. ಈಜು ಮುಗಿಸಿ ಹೊರಹೋಗುವವರು ಒಳಗಿರುವವರಿಗೆ ‘ಕೊಳ ರಕ್ಷಿಸಿ’ ಎಂದು ಮನವಿ ಮಾಡಿ ಹೊರ ನಡೆಯುತ್ತಿದ್ದಾರೆ.

ಹೀಗಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ಈಜುವವರೆಲ್ಲ ಸರದಿಯಂತೆ ಕಾಯುತ್ತಾರೆ. ಗುರುಪಾದಪ್ಪ ವಾಲಿ, ಇತರರು ಈಗ ಕೊಳದ ಸುತ್ತ ಇರುವ ಗಲೀಜು ಸ್ವಚ್ಛ ಮಾಡುತ್ತಿದ್ದಾರೆ. ಒಳಗೆ ತಂಬಾಕು ಪದಾರ್ಥ ತಿಂದು ಉಗುಳದಂತೆ ಮನವಿ ಮಾಡಲಾಗಿದೆ. ಇದು ಅನೇಕರಿಗೆ ಕೋಪ ತರಿಸಿ ಜಗಳಗಳಿಗೂ ಕಾರಣವಾಗುತ್ತಿತ್ತು.ಅದರ ಹಿಂದಿನ ಉದ್ದೇಶ ಅರಿವಾದಾಗ ಅವರೂ ಕೈಜೋಡಿಸುತ್ತಿದ್ದಾರೆ.             ಸ್ವಚ್ಛತೆ ಸೂಚನಾ ಫಲಕ ನಿಲ್ಲಿಸುವುದಾಗಿ ರಾಜು ಹಂಚಾಟೆ ಇತರರು   ತಿಳಿಸಿದರು

ಇಂತಹ ವಿಧಾಯಕ ಕೆಲಸಕ್ಕೆ ಪ್ರೇರಣೆ ನೀಡಿದ ’ಪ್ರಜಾವಾಣಿ’ಗೆ ರವಿ ತಾಳಪಲ್ಲೆ, ಈರಣ್ಣ ನಾಗರಾಳ, ಪ್ರಕಾಶ ಕಶೆಟ್ಟಿ, ಗೋವಿಂದಸಿಂಗ ಗೌಡಗೇರಿ, ಮಶ್ಯಾಕ ಚೋರಗಸ್ತಿ,  ಡಾ.ಗುಣಕಿ, ಅಯ್ಯು   ಗೊಟಗುಣಕಿ, ಬಿ.ಜಿ.ಫತ್ತೆಪುರ, ರವಿ ಸಜ್ಜನ, ಮೊದಲಾದವರು ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT