ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ಹೊಲಿಯಲು ಬಗೆಬಗೆ ಟಿಪ್ಸ್‌

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಈಗ ಎಲ್ಲವೂ ರೆಡಿಮೇಡ್‌. ಹಾಗೆನೇ ಬಟ್ಟೆ ಕೂಡ. ಆದರೆ ಹಾಗಂತ ತಮ್ಮಿಷ್ಟದ ಡಿಸೈನ್‌ಗಳನ್ನು ಇಷ್ಟಪಡುವವರು ಬಟ್ಟೆಗಳಲ್ಲಿ ರೆಡಿಮೇಡ್‌ಗೆ ಮೊರೆ ಹೋಗುವ ಬದಲು ದರ್ಜಿಗಳಲ್ಲಿ ಹೋಗಿ ಹೊಲಿಸಿಕೊಳ್ಳುವುದೇ ಹೆಚ್ಚು.

ಇದೇ ಕಾರಣಕ್ಕೆ ದರ್ಜಿಗಳ ಸಂಖ್ಯೆ ಇಂದು ಹೆಚ್ಚಿದೆ. ಎಷ್ಟೋ ಮಹಿಳೆಯರು ಮನೆಯಲ್ಲಿಯೇ ಹೊಲಿಗೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಬಟ್ಟೆ ಹೊಲಿಯುವ ಸಮಯದಲ್ಲಿ ಕೆಲವೊಂದು ಸಮಸ್ಯೆಗಳು ಮೇಲಿಂದ ಮೇಲೆ ಎದುರಾಗುತ್ತಿರುತ್ತವೆ. ಅಂಥ ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಉಪಾಯ. ಇದರ ಜೊತೆಗೆ ಬಟ್ಟೆ ಹೊಲಿಸಿಕೊಳ್ಳುವವರಿಗೆ ಕೆಲ ಟಿಪ್ಸ್ ನೀಡಲಾಗಿದೆ,..

* ಬಟ್ಟೆಗಳ ಗುಂಡಿ ಆಗ್ಗಾಗ್ಗೆ ಕಿತ್ತುಹೋಗುತ್ತಿದ್ದರೆ ಅದನ್ನು ಮತ್ತೆ ಹೊಲಿಯುವಾಗ ದಾರಕ್ಕೆ ಸ್ವಲ್ಪ ಮೇಣವನ್ನು ಉಜ್ಜಿ. ಹೀಗೆ ಮಾಡಿದರೆ ದಾರ ಕೀಳಲು ಕಷ್ಟ ಆಗುತ್ತದೆ.

* ಬಟ್ಟೆಗಳ ಗುಂಡಿ ಹೊಲಿದ ಮೇಲೆ ಆ ದಾರಕ್ಕೆ ಬಣ್ಣ ರಹಿತ ನೇಲ್ಪಾಲಿಷ್ ಹಚ್ಚಿದರೆ ಆ ಗುಂಡಿ ಬಹಳ ದಿನಗಳವರೆಗೆ ಕಿತ್ತು ಬರುವುದಿಲ್ಲ.

* ಹೊಸ ಸೀರೆಗಳ ಅಂಚು ಹೊಲಿಯಬೇಕಾದರೆ ಆ ಸೀರೆ ಅಂಚಿನಿಂದಲೇ ಹೊಲಿಗೆ ಬರುವ ಜಾಗದಲ್ಲಿ ನಯವಾಗಿ ಒಂದು ಎಳೆ ದಾರವನ್ನು ಎಳೆದುಕೊಂಡು ಹೆಮ್ ಮಾಡಿ, ಹೊಲಿಗೆ ಕಾಣಿಸುವುದಿಲ್ಲ.

* ಪ್ಯಾಚ್‌ ವರ್ಕ್‌ ಮಾಡುವಾಗ ಟಾಕಾ ಹಾಕುವ ಬದಲು ಬಟ್ಟೆಗಳನ್ನು ಮೈದಾ ಹಿಟ್ಟಿನ ಪೇಸ್ಟ್ ಮಾಡಿ ಅಂಟಿಸಿದರೆ ಹೊಲಿಯಲು ಅನುಕೂಲವಾಗುತ್ತದೆ.

* ಚೂಡಿದಾರ್ ಅಥವಾ ಮಕ್ಕಳ ಲಂಗದ ಲಾಡಿ ಕಳಚದೇ ಇರಲು ಹಿಂಭಾಗದಲ್ಲಿ ಲಾಡಿಯನ್ನೂ ಸೊಂಟದ ಪಟ್ಟಿಯನ್ನೂ ಸೇರಿಸಿ ಎರಡು ಹೊಲಿಗೆ ಹಾಕಿ.

* ಕೆಲವೊಮ್ಮೆ ಹೊಲಿಗೆ ಯಂತ್ರದಲ್ಲಿ ಮಂದವಾದ ಬಟ್ಟೆಗಳನ್ನು ಹೊಲಿಯುವಾಗ ಹೊಲಿಗೆ ಕೈಕೊಡುತ್ತದೆ. ಒಂದು ಕಡೆ ಹೊಲಿಗೆ ಇದ್ದರೆ ಮತ್ತೊಂದು ಕಡೆ ಇರುವುದಿಲ್ಲ. ಆಗ ನೀವು ಮಾಡಬೇಕಾದದ್ದು ಇಷ್ಟೇ. ಹೊಲಿಯುವ ಆ ಮಂದ ಬಟ್ಟೆಯ ಮೇಲೆ ಸ್ವಲ್ಪ ಸೋಪನ್ನು ಉಜ್ಜಿ. ಈಗ ನೋಡಿ ಸೂಜಿಯ ಓಟ.

* ಕಾಲರ್  ಹರಿದುಹೋಗುವುದು ಮಾಮೂಲು. ಆ ಡ್ರೆಸ್ ನಿಮಗೆ ಇಷ್ಟವಾಗಿದ್ದರೆ ಅಥವಾ ಲಕ್ಕಿ ಎನಿಸಿದ್ದರೆ ಬೀಸಾಕಲೂ ಮನಸ್ಸು ಬರುವುದಿಲ್ಲ. ಆಗ ಕಾಲರ್ಗಳ ಹೊಲಿಗೆಯನ್ನು ಬ್ಲೇಡ್ನಿಂದ ಮೆಲ್ಲನೆ ತೆಗೆಯಿರಿ. ಅವುಗಳನ್ನು ತಿರುಗಿಸಿ ಹೊಲಿದರೆ ಶರ್ಟ್ ಪುನಃ ನಿಮ್ಮ ಮೈ ಸೇರುತ್ತದೆ!

* ಬಟ್ಟೆ ಹೊಲಿಸಿದ ನಂತರ ಉಳಿದ ತುಂಡುಗಳನ್ನು ಜೊತೆಯಲ್ಲಿಯೇ ಇರಿಸಿಕೊಳ್ಳುವುದು ಉತ್ತಮ. ಯಾವುದಾದರೂ ಕಾರಣದಿಂದಾಗಿ (ಇಲಿ ಕಚ್ಚುವುದು, ಬೆಂಕಿ ಕಿಡಿ ಬೀಳುವುದು, ಕೊಕ್ಕೆಗೆ ಸಿಲುಕುವುದು ಇತ್ಯಾದಿ) ಆದರೆ ಆಗ ಆ ಬಟ್ಟೆ ಉಪಯೋಗಕ್ಕೆ ಬರುತ್ತದೆ. ಇಲ್ಲದಿದ್ದರೆ ಮ್ಯಾಚಿಂಗ್ ಬಣ್ಣ ಹುಡುಕುವುದು ಕಷ್ಟವಾಗುತ್ತದೆ.

* ಹೊಲಿದ ನಂತರ ಉಳಿದ ಬಟ್ಟೆಗಳನ್ನು ಎಸೆಯದೇ ಅದರಿಂದ ಗೊಂಬೆ, ದಿಂಬುಗಳ ಕವರ್, ಟೇಬಲ್ ಕ್ಲಾತ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT