ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಲರ್ ಅಬ್ಬರದ ಶತಕ; ಇಂಗ್ಲೆಂಡ್‌ಗೆ ಗೆಲುವು

Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬ್ಲೋಮ್‌ಫಾಂಟೀನ್‌, ದಕ್ಷಿಣ ಆಫ್ರಿಕಾ (ಎಎಫ್‌ಪಿ):  ಜಾಸ್‌ ಬಟ್ಲರ್‌ ವೇಗದ ಆಟದ ಬಲದಿಂದ ಸವಾಲಿನ ಮೊತ್ತ ಕಲೆ ಹಾಕಿದ್ದ ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಡಕ್ವರ್ಥ್‌್ ಲೂಯಿಸ್‌ ನಿಯಮದ ಅನ್ವಯ 39 ರನ್‌ಗಳ ಭರ್ಜರಿ ಗೆಲುವು ಪಡೆದಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌  ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ಕಳೆದುಕೊಂಡು 399 ರನ್‌ ಕಲೆ ಹಾಕಿತ್ತು.
ಬಟ್ಲರ್‌ ಕೇವಲ 76 ಎಸೆತಗಳಲ್ಲಿ 105 ರನ್‌ ಕಲೆ ಹಾಕಿದರು. ಬೌಂಡರಿ (11) ಮತ್ತು ಸಿಕ್ಸರ್‌ಗಳ (5) ಮೂಲಕವೇ 74 ರನ್‌ ಕಲೆ ಹಾಕಿದರು. ಇದು ಬಟ್ಲರ್ ಬ್ಯಾಟಿಂಗ್‌ ಅಬ್ಬರಕ್ಕೆ ಸಾಕ್ಷಿ. ಇದು ಏಕದಿನ ಕ್ರಿಕೆಟ್‌ನಲ್ಲಿ ಆಂಗ್ಲರ ತಂಡ ಕಲೆ ಹಾಕಿದ ಎರಡನೇ ಒಟ್ಟು ಗರಿಷ್ಠ ಮೊತ್ತವೆನಿಸಿತು.

2015ರಲ್ಲಿ ನ್ಯೂಜಿಲೆಂಡ್‌ ಎದುರು ಬಾರಿಸಿದ್ದ 408 ರನ್‌ ಗರಿಷ್ಠ ಸ್ಕೋರು ಎನಿಸಿದೆ.
ಸವಾಲಿನ ಗುರಿಯನ್ನು ಹರಿಣಗಳ ನಾಡಿನ ತಂಡ ದಿಟ್ಟತನದಿಂದ  ಬೆನ್ನಟ್ಟಿತು.  ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ (ಔಟಾಗದೆ 138, 96 ಎಸೆತ, 12 ಬೌಂಡರಿ, 6 ಸಿಕ್ಸರ್‌) ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು.

ಫಾಫ್‌ ಡು ಪ್ಲೆಸಿಸ್‌ (55) ನೆರವಾಗಿದ್ದರು. ಇದರಿಂದ ದಕ್ಷಿಣ ಆಫ್ರಿಕಾ 33.3 ಓವರ್‌ಗಳು ಮುಗಿದಾಗ ಐದು ವಿಕೆಟ್‌ ಕಳೆದುಕೊಂಡು 250 ರನ್‌ ಗಳಿಸಿತ್ತು.  ಈ ವೇಳೆ ಸುರಿದ ಮಳೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ಆಸೆ ಕೊಚ್ಚಿ ಹೋಯಿತು.

ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಪಡೆದುಕೊಂಡಿತು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 399 (ಜಾಸನ್‌ ರಾಯ್‌ 48, ಅಲೆಕ್ಸ್‌ ಹೇಲ್ಸ್‌ 57, ಜೋ ರೂಟ್‌ 52, ಜಾಸ್‌ ಬಟ್ಲರ್‌ 105, ಬೆನ್‌ ಸ್ಟೋಕ್ಸ್‌ 57; ಕ್ರಿಸ್‌ ಮಾರಿಸ್‌ 74ಕ್ಕೆ3).

ದಕ್ಷಿಣ ಆಫ್ರಿಕಾ 33.3 ಓವರ್‌ಗಳಲ್ಲಿ 5 ವಿಕೆಟ್‌ಗೆ 250 (ಕ್ವಿಂಟನ್‌ ಡಿ ಕಾಕ್‌ ಔಟಾಗದೆ 138, ಫಾಫ್‌ ಡು ಪ್ಲೆಸಿಸ್‌ 55; ಮೊಯೀನ್‌ ಅಲಿ 43ಕ್ಕೆ3). ಫಲಿತಾಂಶ: ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ಇಂಗ್ಲೆಂಡ್‌ಗೆ 39 ರನ್ ಗೆಲುವು. ಪಂದ್ಯ ಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT