ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ಮಟ್ಟ ಅಂದಾಜು: ರಂಗರಾಜನ್‌ ಸಮರ್ಥನೆ

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದಲ್ಲಿ ಪ್ರತಿ 10 ಜನರಲ್ಲಿ ಮೂವರು ಬಡವರು ಎಂಬ ತಮ್ಮ  ಲೆಕ್ಕಚಾರ­ವನ್ನು ಸಮರ್ಥಿ­ಸಿಕೊಂಡಿರುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಪಿಎಂ­ಎಸಿ) ಮಾಜಿ ಅಧ್ಯಕ್ಷ ಸಿ.ರಂಗ­ರಾಜನ್‌, ಜಾಗತಿಕ ಮಾನದಂಡಗಳ ಅನುಸಾರ ತಾವು ಬಡತನ ಮಟ್ಟವನ್ನು ಅಂದಾಜು ಮಾಡಿರುವುದಾಗಿ ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ 47 ಮತ್ತು ಗ್ರಾಮೀಣ ಭಾಗದಲ್ಲಿ 32ಕ್ಕಿಂತ ಹೆಚ್ಚಿಗೆ ಹಣ ಖರ್ಚು ಮಾಡುವವರು ಬಡ­ವರಲ್ಲ ಎಂದು ತೀರ್ಮಾನಿಸ­ಬ­ಹುದು ಎಂದು ರಂಗರಾಜನ್‌ ಸಮಿತಿ ಹೇಳಿದೆ. ಇದಕ್ಕೆ ವ್ಯಕ್ತವಾದ ಟೀಕೆಗಳ ಬಗ್ಗೆ
ಪ್ರತಿ­ಕ್ರಿಯಿಸಿದ ಅವರು, ‘ಈ ಅಂದಾಜು ತರ್ಕ­-ಬದ್ಧವಾಗಿದೆ. ಯಾವುದೇ ಒತ್ತಡದಿಂದ ಈ ಲೆಕ್ಕಾಚಾರ ಮಾಡಿಲ್ಲ, ಮುಕ್ತ­ವಾಗಿಯೇ ಮಾಡಿದ್ದೇವೆ’ ಎಂದಿದ್ದಾರೆ.

‘ವಿಶ್ವಬ್ಯಾಂಕ್‌ ಪ್ರಕಾರ ಪ್ರತಿದಿನ ಕನಿಷ್ಠ ಎರಡು ಡಾಲರ್‌ ವೆಚ್ಚ ಮಾಡುವವರು ಬಡವರು. ನಾವು ಅಂದಾಜು ಮಾಡಿರು­ವಂತೆ ಈ ಪ್ರಮಾಣ 2.4 ಡಾಲರ್‌­ಗಳಿಷ್ಟಿದೆ. ಆದ್ದರಿಂದ ನಮ್ಮ ಲೆಕ್ಕಾಚಾರ ಬಡತನದ ಮಟ್ಟ ಅಳೆಯುವ ಜಾಗತಿಕ ಮಾನದಂಡದಂತೆಯೇ ಇದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT