ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ನಿಯಮ ಜಾರಿಗೆ ತನ್ನಿ

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸರ್ಕಾರಿ ಪದವಿಪೂರ್ವ  ಕಾಲೇಜುಗಳಿಗೆ ಉಪನ್ಯಾಸಕರಾಗಿ ನೇರ ನೇಮಕ­ಗೊಂಡು ನೆಟ್‌, ಸ್ಲೆಟ್‌ ಅಂತಹ ಅರ್ಹತಾ ಪರೀಕ್ಷೆಗಳನ್ನು, ಪಿಎಚ್‌ಡಿಯಂಥ ಉನ್ನತ ಪದವಿಯನ್ನು ಪಡೆದಿರುವುದರೊಂದಿಗೆ 20–25 ವರ್ಷಗಳು ಒಂದೇ ಹುದ್ದೆಯಲ್ಲಿ ಪಿ.ಯು. ಕಾಲೇಜಿ­ನಲ್ಲಿ ಸೇವೆ ಸಲ್ಲಿಸುತ್ತಿರುವವರು ಇದ್ದಾರೆ.

ಪದವಿ ಕಾಲೇಜಿಗೆ ಬಡ್ತಿ ನೀಡುವ ನಿಯಮವಿಲ್ಲದ ಕಾರಣ ನಿವೃತ್ತಿಯಾಗುವ­ವರೆಗೂ ಅವರು ಪಿ.ಯು. ಉಪನ್ಯಾಸಕರಾಗಿಯೇ ಉಳಿಯಬೇಕಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮುಂತಾದ ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಅರ್ಹ ಪಿ.ಯು. ಉಪನ್ಯಾಸಕರಿಗೆ ಸೇವಾ ಹಿರಿತನದ ಮೇರೆಗೆ ಪದವಿ ಕಾಲೇಜಿಗೆ ಬಡ್ತಿ ನೀಡುವ ಅವಕಾಶವಿದೆ.

ನಮ್ಮ ರಾಜ್ಯದಲ್ಲೂ ಈ ನಿಯಮ ಜಾರಿಗೆ ಬರಬೇಕು. ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆ ಮುಗಿಯುವ ಮುನ್ನ ಪಿ.ಯು. ಉಪನ್ಯಾಸಕರಿಗೆ ಬಡ್ತಿ ನೀಡುವ  ನಿಯಮಾವಳಿಗಳನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಪ್ರಯತ್ನಿಸಬೇಕು.
– ಎಂ. ರಂಗಸ್ವಾಮಿ, ಗೂಳೆಹರವಿ, ತುಮಕೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT