ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಾಯೂಂ ಗ್ರಾಮದಲ್ಲಿ ಸುಲಭ ಶೌಚಾಲಯ

Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ದಲಿತ ಬಾಲಕಿ­ಯರಿಬ್ಬರು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬದಾಯೂಂ ಜಿಲ್ಲೆಯ ಕತ್ರ ಶಹದತ್‌ಗಂಜ್‌್ ಗ್ರಾಮದ ಪ್ರತಿ­ಯೊಂದು ಮನೆಗೂ ಶೌಚಾಲಯ ಕಟ್ಟಿಸಲು ಸುಲಭ್‌ ಇಂಟರ್‌ನ್ಯಾಷನ್‌ ನಿರ್ಧರಿಸಿದೆ.

‘ನೈರ್ಮಲ್ಯ ಕಾರ್ಯಕರ್ತರು ಹಾಗೂ ಎಂಜಿನಿಯರುಗಳ ತಂಡ ಈ ಗ್ರಾಮಕ್ಕೆ ಭೇಟಿ ನೀಡಿ ಶೀಘ್ರವೇ ಕೆಲಸ ಶುರು­ಮಾಡ­­ಲಿದೆ. ಶೌಚಾಲಯ ಇಲ್ಲದ ಕಾರಣ ಈ ಇಬ್ಬರು ಹೆಣ್ಣು­ಮಕ್ಕಳು ಇಂಥ­ದ್ದೊಂದು ಘೋರ ದುರಂತಕ್ಕೆ ಬಲಿಯಾಗಿದ್ದಾರೆ’  ಎಂದು ಸುಲಭ್‌್ ಸಂಸ್ಥಾ­ಪಕ ಬಿಂದೇಶ್ವರ ಪಾಠಕ್‌ ಹೇಳಿದ್ದಾರೆ.

‘ಮೊದಲು ಶೌಚಾಲಯ, ಆಮೇಲೆ ದೇಗುಲ’ ಎನ್ನುವ ಮೋದಿ ಅವರ ಘೋಷವಾಕ್ಯವನ್ನು ಶ್ಲಾಘಿಸಿದ ಅವರು,  ಪ್ರತಿ ಮನೆಗೂ ಶೌಚಾಲ­ಯದ ವ್ಯವಸ್ಥೆ ಮಾಡಿಕೊಡಲು ಸರ್ಕಾರದ ಜತೆ ಕೆಲಸ ಮಾಡಲು ನಾವು ಬಯಸುತ್ತೇವೆ’ ಎಂದಿದ್ದಾರೆ. 

‘ಈ ವಿಷಯವಾಗಿ ನಾನು ಪ್ರಧಾನಿ­ಯವರಿಗೆ ಪತ್ರ ಬರೆಯುತ್ತಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ದೇಶದಲ್ಲಿ ಸುಮಾರು  ಶೇ 65ರಷ್ಟು ಮಂದಿ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಬಯಲು ಶೌಚ ಪದ್ಧತಿ ಕೊನೆಗಾಣಿ­ಸುವುದಕ್ಕೆ ಕನಿಷ್ಠ ಒಂದು ಹಳ್ಳಿಯ­ನ್ನಾದರೂ ದತ್ತು ತೆಗೆದು ಕೊಳ್ಳುವಂತೆ ಪ್ರಮುಖ ಉದ್ಯಮ ಸಂಸ್ಥೆಗಳಿಗೆ ಸುಲಭ್‌್ ಸಂಸ್ಥೆ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT