ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಾಯೂಂ ಪ್ರಕರಣ ಸಿಬಿಐ ತನಿಖೆಗೆ

ರಾಜ್ಯ ಸರ್ಕಾರ ನಿರ್ಧಾರ
Last Updated 31 ಮೇ 2014, 19:30 IST
ಅಕ್ಷರ ಗಾತ್ರ

ಬದಾಯೂಂ/ಲಖನೌ (ಪಿಟಿಐ):  ಬದಾಯೂಂ ಜಿಲ್ಲೆಯಲ್ಲಿ ಸೋದರ ಸಂಬಂಧಿ ದಲಿತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ­ರುವ ಪ್ರಕರಣ ಖಂಡಿಸಿ  ವ್ಯಾಪಕ ಆಕ್ರೋಶ  ವ್ಯಕ್ತವಾಗಿರುವುದರಿಂದ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಶನಿವಾರ ನಿರ್ಧರಿಸಿದೆ.

‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸ­ಬೇಕು ಎಂಬ ಸಂತ್ರಸ್ತ ಕುಟುಂಬ­ಗಳ ಒತ್ತಾಯಕ್ಕೆ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸ್ಪಂದಿಸಿದ್ದಾರೆ. ಪ್ರರಕಣವನ್ನು ಸಿಬಿಐಗೆ ಹಸ್ತಾಂತರಿಸುವ ರಿವಾಜನ್ನು ಶೀಘ್ರದಲ್ಲೇ ಪೂರ್ಣ­ಗೊಳಿಸ-­ಲಾಗುವುದು’ ಎಂದು ರಾಜ್ಯ ಸರ್ಕಾರದ ಹೇಳಿಕೆ ತಿಳಿಸಿದೆ.
ಕೊಲೆ ಮಾಡುವುದಕ್ಕೂ ಮೊದಲು ಬಾಲಕಿಯರ  ಮೇಲೆ ಅತ್ಯಾಚಾರ ಎಸಗ­ಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಖಚಿತ ಪಡಿಸಿದೆ.
‘ಸಾರ್ವಜನಿವಾಗಿ ನೇಣಿಗೇರಿಸಿ’: ಅತ್ಯಾ­ಚಾರಕ್ಕೀಡಾಗಿ ಕೊಲೆಯಾದ ಬಾಲಕಿ­ಯರ ಕುಟುಂಬಗಳು ರಾಜ್ಯ ಸರ್ಕಾರ ಘೋಷಿಸಿರುವ ₨ 5 ಲಕ್ಷ ಮೊತ್ತದ ಪರಿಹಾರ ತಿರಸ್ಕರಿಸಿವೆ.

‘ಹಣದಿಂದ ನಮ್ಮ ಮಕ್ಕಳು ವಾಪಸು ಬರುವುದಿಲ್ಲ. ಅವರಿಗೆ ಆದ ಅವಮಾನ ಸರಿಪಡಿಸಲು ಆಗುವುದಿಲ್ಲ. ದುರುಳರು ನಮ್ಮ ಮಕ್ಕಳನ್ನು ಮರಕ್ಕೆ ನೇಣು­ಹಾಕಿ­ದಂತೆಯೇ ಆ ದುರುಳರನ್ನು ಸಾರ್ವಜನಿ­ಕ­ವಾಗಿ ನೇಣಿಗೆ ಹಾಕಬೇಕು’ ಎಂದು ಬಾಲಕಿಯರ ಕುಟುಂಬಗಳು ಒತ್ತಾ­­ಯಿ­­ಸಿವೆ. ಈ ಮಧ್ಯೆ, ಕಟರಾ ಗ್ರಾಮದಲ್ಲಿನ ಬಾಲಕಿಯರ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪ್ರಕರಣವನ್ನು ಸಿಬಿಐ ತನಿ­ಖೆಗೆ ಒಪ್ಪಿಸಬೇಕು ಎಂಬ ಸಂತ್ರಸ್ತ ಕುಟುಂಬ­ಗಳ ಒತ್ತಾಯವನ್ನು ಬೆಂಬಲಿಸಿದರು.

ಇನ್ನಿಬ್ಬರು ಆರೋಪಿಗಳ ಬಂಧನ: ತಲೆ­ತಪ್ಪಿಸಿಕೊಂಡಿದ್ದ ಉರ್ವೇಶ್‌ ಯಾದವ್‌, ಸೇವೆಯಿಂದ ವಜಾಗೊಂಡಿರುವ ಕಾನ್‌­ಸ್ಟೆಬಲ್‌ ಛತ್ರಪಾಲ್‌ ಯಾದವ್‌ ಸೇರಿ­ದಂತೆ ಐವರನ್ನು ಬಂಧಿಸಲಾಗಿದೆ. ಇದ­­ರೊಂದಿಗೆ ಎಲ್ಲ ಆರೋಪಿಗಳನ್ನು ಬಂಧಿಸಿ­ದಂತಾಗಿದೆ.ಕಟರಾ ಸಾದತ್‌ಗಂಜ್‌ ಪೊಲೀಸ್‌ ಹೊರ­ಠಾಣೆಯ ಮುಖ್ಯಸ್ಥ ರಾಂ ವಿಲಾಸ್‌ಯಾದವ್‌ ಅವರನ್ನು ಅಮಾ­ನತು ಮಾಡಲಾಗಿದೆ.

ದಲಿತ ಬಾಲಕಿಯರ ಮೇಲೆ  ಹೇಯ­ವಾಗಿ ಎಸಗಿದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಮಾಜ­ವಾದಿ ಪಕ್ಷದ ಸರ್ಕಾರ ನಿರ್ವಹಿಸಿದ ರೀತಿ­ಯನ್ನು ವಿವಿಧ ರಾಜಕೀಯ ಪಕ್ಷಗಳು ಮತ್ತು ಅನೇಕ ಸಂಘಟನೆಗಳು ಅತ್ಯುಗ್ರ­ವಾಗಿ ಟೀಕಿಸಿವೆ.

ಉತ್ತರಪ್ರದೇಶದ ಪ್ರಮುಖ ವಿರೋಧ ಪಕ್ಷ ಬಿಎಸ್‌ಪಿ, ಸರ್ಕಾರವನ್ನು ಹಿಗ್ಗಾಮಗ್ಗಾ ಟೀಕಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದೂ ಒತ್ತಾಯಿ­ಸಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದು­ಕೊಂಡಿದೆ.

ಬಾಲಕಿ ಮೇಲೆ ಅತ್ಯಾಚಾರ:  ಲಖೀಂ­ಪುರ ಖೀರೀ (ಉತ್ತರಪ್ರದೇಶ): ಮೂರು ವರ್ಷದ ಹಸುಳೆಯ ಮೇಲೆ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಜಿಲ್ಲೆಯ ತಾವರ್‌­ಗಂಜ್‌ನಲ್ಲಿ ನಡೆದಿದೆ.

ಮುಖ್ಯ ಕಾರ್ಯದರ್ಶಿ ಬದಲು ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆ­ಯಲ್ಲಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಜಾವೇದ್‌ ಉಸ್ಮಾನಿ ಅವರನ್ನು ಬದಲಿಸಲಾಗಿದೆ. ಅವರ ಸ್ಥಾನಕ್ಕೆ ಅಲೋಕ್‌ ರಂಜನ್‌ ನೇಮಕ­ಗೊಂಡಿದ್ದಾರೆ.

ವಿಶ್ವಸಂಸ್ಥೆ ಖಂಡನೆ
ವಿಶ್ವಸಂಸ್ಥೆ  (ಪಿಟಿಐ
):  ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ  ದಲಿತ ಸಮುದಾಯದ ಸಹೋದರಿ­ಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ವಿಶ್ವಸಂಸ್ಥೆ ಖಂಡಿಸಿದ್ದು, ‘ಇದೊಂದು ಘೋರ ಅಪರಾಧ’ ಎಂದು ಹೇಳಿದೆ. ಎಲ್ಲ ನಾಗರಿಕರನ್ನು ಕಾನೂನಿನ ಮೂಲಕ ರಕ್ಷಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT