ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಉದ್ಯಾನ: ಚಿರತೆ ಸಫಾರಿಗೆ ಅವಕಾಶ

Last Updated 21 ಡಿಸೆಂಬರ್ 2014, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾ­ನ­­ದಲ್ಲಿ (ಬಿಬಿಪಿ) ಚಿರತೆ ಸಫಾರಿಗೆ ಅವಕಾಶ ನೀಡಲು ಉದ್ಯಾನದ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಸಂಬಂಧ ಬಿಬಿಪಿ ಅಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ರಾಜ್ಯ ಮೃಗಾಲಯ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕಿದೆ.

‘ಚಿರತೆ ಸಫಾರಿಯ ರೂಪುರೇಷೆ ಸಿದ್ಧಗೊಂಡಿದ್ದು, ಯೋಜನೆಗೆ ಸದ್ಯ­ದಲ್ಲೇ ಟೆಂಡರ್‌ ಕರೆಯಲಾ­ಗು­ತ್ತದೆ. ಸಿಂಹ ಮತ್ತು ಹುಲಿ ಸಫಾರಿ ಪ್ರದೇಶದ ಪಕ್ಕದಲ್ಲೇ ಯೋಜನೆಗೆ 25 ಎಕರೆ ಜಾಗ ಗುರುತಿಸಲಾಗಿದೆ. ಯೋಜನೆಯ ವೆಚ್ಚ ಸುಮಾರು ರೂ3 ಕೋಟಿ ಎಂದು ಅಂದಾಜಿ­ಸಲಾಗಿದೆ’ ಎಂದು ಉದ್ಯಾನದ ನಿರ್ದೇಶಕ ರಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಯೋಜನೆಗೆ ಅನುದಾನದ ಕೊರತೆ ಇರುವುದರಿಂದ ‘ಕಾರ್ಪೊರೇಟ್‌ ಸಾಮಾ­ಜಿಕ ಹೊಣೆಗಾರಿಕೆ’ (ಸಿಎಸ್‌ಆರ್‌) ಕಾರ್ಯಕ್ರಮದಡಿ ಕಾರ್ಪೊರೇಟ್‌ ಸಂಸ್ಥೆಗಳಿಂದ ಹಣಕಾಸು ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉದ್ಯಾನದಲ್ಲಿ ಪ್ರಸ್ತುತ 24 ಚಿರತೆ­ಗಳಿವೆ. ಅವುಗಳಲ್ಲಿ ಏಳು ಚಿರತೆಗಳನ್ನು ಮೊದಲ ಹಂತದಲ್ಲಿ ಸಫಾರಿಗೆ ಬಳಸಿಕೊಳ್ಳಲಾಗುತ್ತದೆ ಎಂದು ರಂಗೇಗೌಡ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT