ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಡುವೆಯೂ ಇಳಿದ ಬೆಲೆ

ಏರು ಬೆಲೆ ಕಾಯ್ದುಕೊಂಡ ಈರುಳ್ಳಿ: ಉಳಿದ ತರಕಾರಿಗಳು ಯಥಾಸ್ಥಿತಿ
Last Updated 5 ಸೆಪ್ಟೆಂಬರ್ 2015, 11:34 IST
ಅಕ್ಷರ ಗಾತ್ರ

ಕೊಪ್ಪಳ: ಬರಗಾಲ ಆವರಿಸಿದೆ. ಮಳೆಯಿಲ್ಲ. ಆದರೆ, ತರಕಾರಿ ಮಾರುಕಟ್ಟೆಯಲ್ಲಿ ಮಾತ್ರ ಪರಿಸ್ಥಿತಿ ಸ್ಥಿರವಾಗಿದೆ. ಕೆಲವು ತರಕಾರಿ ಬೆಲೆಗಳು ₹10ರಿಂದ 20ರಷ್ಟು ಕಡಿಮೆಯಾಗಿವೆ.

ಅಲ್ಪ ಪ್ರಮಾಣದ ಮಳೆಯಾಗಿದ್ದು. ಇದ್ದ ಬದ್ದ ನೀರಿನ ಮೂಲ ಬಳಸಿ ತರಕಾರಿ ಬೆಳೆದ ಪರಿಣಾಮ ಸೆಪ್ಟೆಂಬರ್‌ ಮೊದಲ ವಾರದಲ್ಲಿ ನಗರಕ್ಕೆ ತರಕಾರಿ ಆವಕ ಪ್ರಮಾಣ ಹೆಚ್ಚಾಗಿದೆ. ಸಹಜವಾಗಿ ಬೆಲೆಗಳು ಆಗಸ್ಟ್‌ಗಿಂತ ಕಡಿಮೆಯಾಗಿವೆ ಎನ್ನುತ್ತಾರೆ ನಗರದ ಜೆ.ಪಿ. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಗವಿಸಿದ್ದಪ್ಪ.

ಶ್ರಾವಣ ಮಾಸವಾದ್ದರಿಂದ ತರಕಾರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲಲ್ಲಿ ಪುರಾಣ ಪ್ರವಚನಗಳು, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ಬಹುತೇಕರು ಈ ಮಾಸದಲ್ಲಿ ಸಸ್ಯಾಹಾರ ಹೆಚ್ಚು ಸೇವಿಸುವುದರಿಂದ ಬೇಡಿಕೆ ಇಳಿದಿಲ್ಲ. ಆದರೆ, ಕೊಳ್ಳುವ ಪ್ರಮಾಣ ಕಡಿಮೆಯಾಗಿದೆ ಎಂದರು ಅವರು. ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಜನಸಂದಣಿ ಯಥಾಪ್ರಕಾರ ಹೆಚ್ಚಾಗಿಯೇ ಇತ್ತು. ಈರುಳ್ಳಿ ಪ್ರತಿ ಕೆಜಿ ₹60 ರಷ್ಟಿದೆ. ಕಳೆದ ವಾರಕ್ಕಿಂತ ₹20 ಏರಿಕೆಯಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಅಂಥ ವ್ಯತ್ಯಾಸ ಇಲ್ಲ. ಸೊಪ್ಪು ತರಕಾರಿಗಳ ಬೆಲೆ ಒಂದೇ ಪ್ರಮಾಣದಲ್ಲಿದೆ ಎಂದು ವ್ಯಾಪಾರಿಗಳು ಹೇಳಿದರು.

ಕೊಳವೆ ಬಾವಿ ನೀರನ್ನು ಅಲ್ಪ ಪ್ರಮಾಣದಲ್ಲಿ ಬಳಸಿ ತರಕಾರಿ ಬೆಳೆದಿದ್ದೇವೆ. ಹಾಗಾಗಿ ನಷ್ಟವೇನೂ ಇಲ್ಲ. ಎಲ್ಲವನ್ನೂ ಇಲ್ಲಿನ ಮಾರುಕಟ್ಟೆಗೇ ನೀಡಲಾಗದು, ಗದಗ, ಹುಬ್ಬಳ್ಳಿ ಕಡೆಗಳಲ್ಲೂ ಬೇಡಿಕೆಯಿದೆ ಎಂದು ಮಾರುಕಟ್ಟೆಗೆ ತರಕಾರಿ ತಂದ ರೈತರು ಹೇಳಿದರು.

ಬೆಲೆ ಏರಿಳಿತ ನೋಡಲಾಗದು. ನಿತ್ಯದ ಅಡುಗೆಗೆ  ತರಕಾರಿ ಕೊಳ್ಳಲೇಬೇಕು. ಅದು ಪ್ರತಿನಿತ್ಯದ ಅನಿವಾರ್ಯ ಕೆಲಸವಾಗಿದೆ.
ಸುನಂದಮ್ಮ,
ಗ್ರಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT