ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹದ ಮೌಲ್ಯ ನಿರ್ಧರಿಸುವ ‘ಲೈಕ್‌’!

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನಟರಾಜ್ ಹುಳಿಯಾರ್ ಅವರ ‘ಕ್ಷಮಿಸಿ, ಇದು ಅಭಿನಂದನಾ ಚಳವಳಿ ಕಾಲ!’ (ಪ್ರ.ವಾ. ಆ. 20) ಲೇಖನಕ್ಕೆ ಈ ಪ್ರತಿಕ್ರಿಯೆ. 

ಇಂಟರ್‌ನೆಟ್ ಸಂಸ್ಕೃತಿಯಲ್ಲಿ ‘ಲೈಕ್’ ಎಂಬುದು ಒಂದು ರಾಜಕಾರಣದ ತಂತ್ರ­ವಾ­ಗಿದೆ.    ಎಷ್ಟು ‘ಲೈಕ್‌’ಗಳು ಬಂದವು ಎಂಬು­ದರ ಮೇಲೆ ಇಂದು ಬರಹದ ಮೌಲ್ಯ ನಿರ್ಧಾ­ರ­ವಾಗುತ್ತದೆ. ಹೊಗಳಿಕೆಗೆ ಈಗ ಹೆಚ್ಚು ಅರ್ಥ­ವಿಲ್ಲ; ಹೊಗಳು­ವವರನ್ನು ನೀವು ಪ್ರತಿಯಾಗಿ ಹೊಗಳಲಿ ಎಂಬ ಕಾರಣಕ್ಕಾಗಿ ಅವರು ‘ಲೈಕ್’ ಒತ್ತುತ್ತಾರೆ.  ಹಿಂದೆ  ಸಾಹಿತಿ­ಗಳಿಗೆ ಸೂಕ್ತ ಗೌರವ ಸಿಗುತ್ತಿತ್ತು. ಆದರೆ- ಇಂದು ‘ಸಾಹಿತಿಗಿಂತ ನಾವೇನು ಕಡಿಮೆ’ ಎನ್ನುವ ಯುಗ.

ನಿಮ್ಮಿಂದ ಏನಾದರೂ ಕೆಲಸ ಆಗಬೇಕಾಗಿ­ದ್ದರೆ ನಿಮ್ಮ ಮಿತ್ರರಾಗಲು ಆಹ್ವಾನ ಕಳಿಸುತ್ತಾರೆ.  ‘ನಿಮ್ಮ ಕಮೆಂಟ್ಸ್ ತಿಳಿಸಿ’
ಎಂದು ಯಾರಾದರೂ ನಿಮಗೆ ಬರೆದರೆ ‘ದಯವಿಟ್ಟು ಲೈಕ್ ಮಾಡಿ’ ಎಂದೇ ಇದರ ಅರ್ಥ. ನಿಮಗೆ ಲೈಕ್ ಬೇಕೇ? ನೀವು ಮಾಡಿದ ಊಟದ ಚಿತ್ರ, ನಿಮ್ಮ ಕಾರಿನ ಚಿತ್ರ, ನಿಮ್ಮ ಹೊಸ ಬಟ್ಟೆಯ ಚಿತ್ರ, ನಿಮ್ಮ ನಾಯಿಯ ಚಿತ್ರಗಳನ್ನು  ಹಾಕುತ್ತಿರಿ. 

ಪ್ರೊಫೈಲ್ ಚಿತ್ರವನ್ನೂ ಆಗಾಗ ಬದಲಾಯಿಸುತ್ತಿರಿ. ಆಗ ನಿಮ್ಮ ‘ಇಮೇಜ್‌’ ಚೆನ್ನಾಗಿರುತ್ತದೆ!   ಸಾಹಿತಿ ಹೇಗೆ ಕಾಣುತ್ತಾನೆ­(ಳೆ) ಎಂಬುದರ ಮೇಲೆ, ವೆಬ್‌ಸೈಟ್ ಎಷ್ಟು ಆಕರ್ಷಕವಾಗಿದೆ ಎಂಬುದರ ಮೇಲೆ  ಅವನ(ಳ) ಬರವಣಿಗೆಯ ಮೌಲ್ಯ ನಿರ್ಧಾ­ರ­­­ವಾಗುವ ದಿನಗಳು ಈಗಾಗಲೇ ಹೆಜ್ಜೆ ಇಟ್ಟಿವೆ!

ಮುಂದಿನ ಸಾಹಿತಿಗಳು ಸಿನಿಮಾ ತಾರೆಯರ ಫೋಟೊಗಳನ್ನು ಪ್ರೊಫೈಲ್ ಚಿತ್ರದಲ್ಲಿ ಬಳಸಿಕೊಂಡು ಬರೆದರೆ ಯಶಸ್ಸು ಗಟ್ಟಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT