ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೋಡಾ ಸಹೋದರ ಜೋಡಿಯ ಮೋಡಿ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ರೋಡಾದ ಮತ್ತೊಂದು ಸಹೋದರ ಜೋಡಿ ಈಗ ಕ್ರಿಕೆಟ್‌ ಅಂಗಳದಲ್ಲಿ ಮಿಂಚುತ್ತಿದೆ. ಅವರೇ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ.  ಹಲವು ಮಹತ್ವದ ದಾಖಲೆಗಳಿಗೆ ಪಾತ್ರರಾಗಿರುವ ಇರ್ಫಾನ್ ಪಠಾಣ್ ಮತ್ತು ಯುಸೂಫ್ ಪಠಾಣ್ ಅವರ ಊರಿನ ಹುಡುಗರು ಇವರು. ಅಷ್ಟೆ ಅಲ್ಲ ಪಠಾಣ್ ಸಹೋದರರ ಮಾರ್ಗದರ್ಶನದಲ್ಲಿ ಅರಳಿರುವ ಪ್ರತಿಭೆಗಳು.  

ಇವರಿಬ್ಬರೂ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಬ್ಬರೂ ಆಲ್‌ರೌಂಡರ್‌ಗಳಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಮಧ್ಯಮವೇಗಿ ಮತ್ತು ಕೃಣಾಲ್ ಪಾಂಡ್ಯ ಸ್ಪಿನ್ನರ್ ಆಗಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಕೃಣಾಲ್ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕವೂ ತಮ್ಮ ತಂಡಕ್ಕೆ ಗೆಲುವಿನ ಕಾಣಿಕೆ ನೀಡುತ್ತಿದ್ದಾರೆ. ಈ ಎಡಗೈ ಆಲ್‌ರೌಂಡರ್ ಭಾರತ ಕ್ರಿಕೆಟ್‌ನ ಮತ್ತೊಬ್ಬ ಯುವರಾಜ್ ಸಿಂಗ್ ಆಗುವ ಕನಸು ಕಾಣುತ್ತಿದ್ದಾರೆ.

‘ಯುವರಾಜ್ ಸಿಂಗ್ ಅವರ ಆಟವನ್ನು ನಾನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ಅವರಂತೆಯೇ ಆಡುವ ಪ್ರಯತ್ನ ಮಾಡಿದ್ದೇನೆ. ಅವರೊಬ್ಬ ಅತ್ಯುತ್ತಮ ಆಲ್‌ರೌಂಡರ್.

ನಾನು ಅವರ ಬಹಳ ದೊಡ್ಡ ಅಭಿಮಾನಿ’ ಎಂದು ಕೃಣಾಲ್ ಹೇಳುತ್ತಾರೆ. ಕೃಣಾಲ್‌ಗೆ ಇದು ಮೊದಲ ಐಪಿಎಲ್ ಟೂರ್ನಿಯಾಗಿದೆ. ಮುಂಬೈ ತಂಡವು ₹ 2 ಕೋಟಿಗೆ ಅವರನ್ನು ಖರೀದಿಸಿತ್ತು.  ತಂಡದ ನಾಯಕ ರೋಹಿತ್ ಶರ್ಮಾ ಅವರ ನಿರೀಕ್ಷೆಗೆ ತಕ್ಕಂತೆ ಕೃಣಾಲ್ ಇದುವರೆಗೆ ಆಡಿದ್ದಾರೆ. ಒಟ್ಟು 11 ಪಂದ್ಯಗಳಲ್ಲಿ 233 ರನ್‌ಗಳನ್ನು ಪೇರಿಸಿದ್ದಾರೆ ಮತ್ತು ಆರು ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ಅವರು ಗಳಿಸಿದ್ದ 86 ರನ್‌ಗಳು ತಂಡಕ್ಕೆ ಜಯದ ಕಾಣಿಕೆ ನೀಡಿದ್ದವು.

ದೇಶಿ ಮತ್ತು ಐಪಿಲ್‌ ಟೂರ್ನಿಗಳಲ್ಲಿ ಉತ್ತಮ ಆಟದ ಮೂಲಕ ಕೃಣಾಲ್ ಅವರು ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. ಆದರೆ ಅವರ ತಮ್ಮ ಹಾರ್ದಿಕ್ ಈಗಾಗಲೇ ಅಂತರರಾಷ್ಟ್ರೀಯ ಏಕದಿನ ಮತ್ತು ಟ್ವೆಂಟಿ–20 ಟೂರ್ನಿಗಳಲ್ಲಿ ಈಗಾಗಲೇ ಮಿಂಚಿದ್ದಾರೆ.

ತ್ತೀಚೆಗೆ ಬೆಂಗಳೂರಿನಲ್ಲಿ  ನಡೆದಿದ್ದ  ಬಾಂಗ್ಲಾ ಎದುರಿನ ಪಂದ್ಯದಲ್ಲಿ (ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್) ಅವರು   ಮಿಂಚಿದ್ದರು. ಆ ಪಂದ್ಯದ ಕೊನೆಯ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ತಂಡವು ರೋಚಕ ಜಯ ಗಳಿಸಲು ಕಾರಣರಾಗಿದ್ದರು.

ಅವರಿಗೆ ಮಾರ್ಗದರ್ಶಕರಾಗಿರುವ  ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಅವರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ.  ಇಬ್ಬರೂ ಭಾರತ ತಂಡವನ್ನು ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಜಿಂಬಾಬ್ವೆಯ ಗ್ರ್ಯಾಂಟ್ ಮತ್ತು ಆ್ಯಂಡಿ ಫ್ಲವರ್, ನ್ಯೂಜಿಲೆಂಡ್‌ನ ಮಾರ್ಟಿನ್ ಕ್ರೋವ್ ಮತ್ತು ಜೆಫ್ ಕ್ರೋವ್, ಆಸ್ಟ್ರೇಲಿಯಾದ ಬ್ರೆಟ್ ಲೀ, ಶೇನ್ ಲೀ, ಮಾರ್ಕ್‌ ವಾ ಮತ್ತು ಸ್ಟೀವ್ ವಾ.

ಮೈಕೆಲ್ ಹಸ್ಸಿ, ಡೇವಿಡ್ ಹಸ್ಸಿ,  ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಮತ್ತು ನಾಥನ್ ಮೆಕ್ಲಮ್, ದಕ್ಷಿಣ ಆಫ್ರಿಕಾದ ಮಾರ್ನೆ ಮಾರ್ಕೆಲ್, ಅಲ್ಬೀ ಮಾರ್ಕೆಲ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಜೋಡಿಗಳು. ಭವಿಷ್ಯದಲ್ಲಿ ಭಾರತ ತಂಡದಲ್ಲಿ ಆಡಿ ಖ್ಯಾತಿ ಗಳಿಸುವ ಗುರಿ ಪಾಂಡ್ಯ ಸಹೋದರರದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT