ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ₨ 3,589 ಕೋಟಿ ಹಾನಿ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹತ್ತು ಜಿಲ್ಲೆಗಳ 35 ತಾಲ್ಲೂಕು­­ಗಳಲ್ಲಿ ಬರ ಪರಿಸ್ಥಿತಿ ಇದ್ದು ₨ 3,589 ಕೋಟಿ ನಷ್ಟ ಉಂಟಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ತಿಳಿಸಿದರು.

‌ಶುಕ್ರವಾರ ವಿಧಾನಸೌಧದಲ್ಲಿ ಪತ್ರ­ಕ­ರ್ತರ ಜೊತೆ ಮಾತನಾಡಿದ ಅವರು, ‘ಮೊದಲು ಒಂಬತ್ತು ಜಿಲ್ಲೆಗಳ 34 ತಾಲ್ಲೂಕು­ಗಳು ಬರಪೀಡಿತ ಎಂದು ಘೋಷಿ­ಸಲಾಗಿತ್ತು. ಬೀದರ್‌ ಜಿಲ್ಲೆಯ ಬಸವ­ಕಲ್ಯಾಣ ತಾಲ್ಲೂಕನ್ನು ಈ ಪಟ್ಟಿಗೆ ಸೇರಿಸಲು ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಒಪ್ಪಿ­ಕೊಂ­ಡಿದ್ದು, ಬರಪೀಡಿತ ತಾಲ್ಲೂಕು­ಗಳ ಸಂಖ್ಯೆ 35ಕ್ಕೆ ಏರಿದೆ’ ಎಂದರು.

ಬರಪೀಡಿತ ಪ್ರದೇಶಗಳಲ್ಲಿನ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ನಾಲ್ಕು ತಂಡಗಳನ್ನು ಕಳು­­ಹಿ­ಸಿದೆ. ಶನಿವಾರ ಈ ತಂಡವು ತಮ್ಮನ್ನು ಭೇಟಿ ಮಾಡಲಿದೆ. ಆಗ ₨ 3,589 ಕೋಟಿ ಹಾನಿಯ ವರದಿಯನ್ನು ಸಲ್ಲಿಸಲಾಗುವುದು. ಕೇಂದ್ರ ವಿಪತ್ತು ಪರಿ­ಹಾರ ನಿಧಿಯಿಂದ (ಎನ್‌ಡಿ­ಆರ್‌ಎಫ್‌) ₨ 779 ಕೋಟಿ ನೆರವು ನೀಡು­ವಂತೆ ಮನವಿ ಮಾಡಲಾಗುವುದು ಎಂದರು.

2013–14ರಲ್ಲಿ ಬರ ಪರಿ­ಹಾ­ರ­ಕ್ಕಾಗಿ ₨ 1,014.15 ಕೋಟಿ ನೆರವು ನೀಡು­ವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ₨ 169 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಅತಿ­ವೃಷ್ಟಿ­ಯಿಂದ ಹಾನಿಗೊಳಗಾದ ಪ್ರದೇಶ­ಗ­ಳಿಗೆ ₨ 610 ಕೋಟಿ ನೆರವು ಕೇಳಿದರೆ, ಕೇಂದ್ರ­ದಿಂದ ₨ 73.53 ಕೋಟಿ ಅನು­ದಾನ ದೊರಕಿತ್ತು.

2014–1ರಲ್ಲಿ ಆಲಿ­ಕಲ್ಲು ಮಳೆ­ಯಿಂದ ತೊಂದರೆ­ಗೊಳ­ಗಾದ ಪ್ರದೇಶಗಳಿಗೆ ₨ 963.44 ಕೋಟಿ ನೆರವು ಕೋರಲಾಗಿತ್ತು. ₨ 82.77 ಕೋಟಿ ಮಾತ್ರ ಬಿಡುಗಡೆ ಮಾಡ­ಲಾ­ಗಿದೆ. ಈ ವರ್ಷ ಅತಿವೃಷ್ಟಿಯಿಂದ ಹಾನಿ­ಗೀ­ಡಾದ ಐದು ಜಿಲ್ಲೆಗಳಿಗೆ ₨ 320 ಕೋಟಿ ನೆರವು ಕೇಳಿದ್ದು, ಇನ್ನೂ ಪ್ರತಿಕ್ರಿಯೆ ದೊರಕಿಲ್ಲ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT