ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ಜನಲೋಕಪಾಲ ಜಾರಿಗೆ ಆದ್ಯತೆ

ಆಮ್‌ ಆದ್ಮಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ
Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಬಲಿಷ್ಠ ಜನಲೋಕಪಾಲ ಮಸೂದೆ ಜಾರಿ, ನ್ಯಾಯಾಲಯದ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಚುನಾವಣೆಗೆ ಸ್ಪರ್ಧಿಸುವ ಅರ್ಹ ವಯಸ್ಸನ್ನು 25 ರಿಂದ 21 ಕ್ಕೆ ಇಳಿಸುವಿಕೆ...

-ಇವು ಆಮ್‌ ಆದ್ಮಿ ಪಕ್ಷ ಗುರುವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತ ನಾಡಿದ ಅರವಿಂದ ಕೇಜ್ರಿವಾಲ್‌, ಅಧಿಕಾರ ವಿಕೇಂದ್ರಿಕರಣ, ಉತ್ತಮ ಸರ್ಕಾರ ಮತ್ತು ಸೇವೆಯನ್ನು ಸರಿಯಾದ ಸಮಯದಲ್ಲಿ ಒದಗಿಸು­ವುದು ಪಕ್ಷದ ಆದ್ಯತೆಗಳು ಎಂದು ಹೇಳಿದರು.

ದೇಶದ ಸಮಗ್ರ ಅಭಿವೃದ್ಧಿಗೆ ಸಂಪತ್ತು ವೃದ್ಧಿ ಅಗತ್ಯವಾಗಿರುವುದರಿಂದ ತಮ್ಮ ಪಕ್ಷವು ಕೈಗಾ­ರಿಕಾ ಸ್ನೇಹಿಯಾಗಿದೆ ಎಂದು ಘೋಷಿಸಿದ ಕೇಜ್ರಿ­ವಾಲ್‌, ಬಂಡವಾಳಶಾಹಿಗಳ ವಿರುದ್ಧ ಧೋರಣೆ ಹೊಂದಿದ್ದೇವೆ ಎಂಬುದನ್ನೂ ತಿಳಿಸಿದರು.

ನ್ಯಾಯಾಂಗ ಉತ್ತರದಾಯಿತ್ವದ ಬಗ್ಗೆ ಒತ್ತಿಹೇಳಿರುವ ಆಮ್‌ ಆದ್ಮಿ, ಮುಂದಿನ ಐದು ವರ್ಷಗಳಲ್ಲಿ ದೇಶದಾದ್ಯಂತ ನ್ಯಾಯಾಲಯ­ಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ದ್ವಿಗುಣ­ಗೊಳಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದೆ.

ಪೊಲೀಸ್‌ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು, ಹಾಗೆಯೇ ವಿಚಾರಣಾ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾ­ಗುವುದು, ಪೊಲೀಸ್ ಇಲಾಖೆಯಲ್ಲಿ ತನಿಖೆ, ಕಾನೂನು ಮತ್ತು ಆದೇಶ ವಿಭಾಗವನ್ನು ಪ್ರತ್ಯೇಕಿಸಲಾ­ಗುವುದು ಎಂದು ಅರವಿಂದ ಕೇಜ್ರಿವಾಲ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT