ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ದರ ಇಳಿಸಿ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಡೀಸೆಲ್ ದರ ಏರಿಕೆಯಾದ ತಕ್ಷಣ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ದ­ರವೂ ಏರುತ್ತದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ವಿಳಂಬಕ್ಕೆ ಅವಕಾಶವನ್ನೇ ನೀಡುವುದಿಲ್ಲ.

ಆದರೆ ಈಗ ಡೀಸೆಲ್ ದರದಲ್ಲಿ ಇಳಿಕೆ­ಯಾಗಿದೆ. ಅದಕ್ಕೆ ತಕ್ಕಂತೆ ದರ ಬದಲಾವ­ಣೆಗೆ  ಸರ್ಕಾರ ಏಕೆ ಚಿಂತನೆ ಮಾಡುತ್ತಿಲ್ಲ? ಸರ್ಕಾರ ಈ ಕಡೆ ಗಮನಹರಿಸಿ ಬಸ್ ದರ ಇಳಿಸಲು ಕ್ರಮ ಕೈಗೊಳ್ಳಬೇಕು. 
–ಶ್ರೀನಿವಾಸ ರಾಂಪುರ, ಚನ್ನಪಟ್ಟಣ

ವಿ.ವಿ : ಭ್ರಷ್ಟತೆಗೆ ಕಡಿವಾಣ

ಡಿಡಿಪಿಐ, ಬಿಇಒಗೆ ಸ್ವಂತ ಜಿಲ್ಲೆ ಇಲ್ಲ ಎಂಬ ಸುದ್ದಿಗೆ ನನ್ನ ಪ್ರತಿಕ್ರಿಯೆ (ಪ್ರ.ವಾ.ಅ.೨೦). ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ನಿರ್ವಹಿಸಲು ಸ್ವಂತ ಜಿಲ್ಲೆ ಅಥವಾ ಸ್ವಕ್ಷೇತ್ರ ಅಡ್ಡಿಯಾದೀತು ಹಾಗೂ ಭ್ರಷ್ಟಾಚಾರ ತಡೆಯಲು ಸಾಧ್ಯ ವಾಗಲಿಕ್ಕಿಲ್ಲ ಎಂಬ ದೃಷ್ಟಿ­ಯಿಂದ ಈ ಕಾನೂನು...  ಎಂದು ಭಾವಿಸಿದ್ದೇನೆ.

ಈ ಚಿಂತನೆ ಸರಿಯಾದದ್ದೇ. ಆದರೆ ಉನ್ನತ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ­ಗಳ ಕುಲ­ಪತಿ­ಗಳ ನೇಮಕ ವಿಚಾರದಲ್ಲೂ ಅವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿ­ಸು­ತ್ತಿದ್ದ ವಿ.ವಿಯಲ್ಲೇ ಅವರನ್ನು ಕುಲಪತಿಗಳ­ನ್ನಾಗಿ ನೇಮಿಸದೇ ರಾಜ್ಯದ  ಬೇರೆ ಬೇರೆ ವಿ.ವಿಗಳಿಗೆ ನೇಮಕ ಮಾಡಿ ದಲ್ಲಿ ಭ್ರಷ್ಟಾಚಾರ ಹಾಗೂ ಜಾತಿ ಲಾಬಿ ತಡೆಯಲು ಸ್ವಲ್ಪ ಮಟ್ಟಿಗೆ ಸಾಧ್ಯವಾದೀತು.

ವಿ.ವಿ.ಗಳನ್ನು ಭ್ರಷ್ಟಾಚಾರ ಮುಕ್ತಗೊ­ಳಿಸಲು ಸರ್ಕಾರ ಮತ್ತು  ಉನ್ನತ ಶಿಕ್ಷಣ ಇಲಾಖೆ ಸೋತಲ್ಲಿ, ಉನ್ನತ ಶಿಕ್ಷಣದ ಬಗ್ಗೆ ಜನರು ನಂಬಿಕೆಯನ್ನೇ  ಕಳೆದುಕೊಳ್ಳ­ಬಹುದು.
–ಪ್ರೊ.ಎಸ್.ಪಿ.ಗೌಡರ, ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT