ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ದುರಂತ: ಡಿಎನ್‌ಎ ಮಾದರಿ ನೀಡಿದ ಐವರು

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಮೇಟಿಕುರ್ಕೆ ಸಮೀಪ ಬುಧವಾರ ಬೆಳಗಿನ ಜಾವ ಸಂಭವಿಸಿದ ಖಾಸಗಿ ಬಸ್ ಅವಘಡದಲ್ಲಿ ಗುರುತು ಹಿಡಿಯಲು ಸಾಧ್ಯ­ವಾಗ­­ದಷ್ಟು ಕರಕಲಾ­ದ­­ವರು ತಮ್ಮ ಸಂಬಂಧಿ ಇರಬಹುದೆಂದು  ಐವರ ರಕ್ತ ಸಂಬಂಧಿಗಳು ನೀಡಿ­ರುವ ಡಿಎನ್ಎ ಮಾದರಿಯನ್ನು ಪರೀಕ್ಷೆಗೆಂದು  ಬೆಂಗಳೂರಿಗೆ ಕಳುಹಿಸಲಾಗಿದೆ.

ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ರವಿ­ಕುಮಾರ್ ಮತ್ತು ನಾಗರಾಜ್, ದಾವಣಗೆರೆ ನಗರದ ರಫೀಕ್ ಮತ್ತು ನಾಗರಾಜ್, ಬೆಂಗಳೂರು ಶಿವಾಜಿ ನಗರದ ರಾಜೇಶ್ ಕಾಣೆಯಾಗಿದ್ದಾರೆಂದು ಅವರ ಸಂಬಂಧಿ­ಕರು ನಗರ ಠಾಣೆ ಪೊಲೀಸರನ್ನು ಭೇಟಿ ಮಾಡಿದ್ದಾರೆ.
ತಮ್ಮ ಡಿಎನ್ಎ ಮಾದರಿ­ಯನ್ನು ವೈದ್ಯರಿಗೆ ನೀಡಿದ್ದಾರೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಸುದರ್ಶನ್ ತಿಳಿಸಿದ್ದಾರೆ.

ಇನ್ನೊಂದು ಮೃತದೇಹಕ್ಕೆ ಸಂಬಂಧಿಸಿ­ದಂತೆ ಇದು ತಮ್ಮ ಕಡೆಯವರಿ­ರಬಹುದು ಎಂದು ಶಂಕಿಸಿ ಯಾರೂ ಬಂದಿಲ್ಲ. ಆರೂ ಮೃತ ದೇಹಗಳನ್ನು ಚಿತ್ರ­ದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಡಲಾಗಿದೆ.

ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್‌ ಬುಧವಾರ ಬೆಳ­ಗಿನ ಜಾವ ಬೆಂಕಿಗಾಹುತಿಯಾಗಿ ಆರು ಮಂದಿ ಸಜೀವ ದಹನಗೊಂಡಿದ್ದರು.

ಮೂವರು ಚೇತರಿಕೆ (ದಾವಣಗೆರೆ ವರದಿ): ಬಸ್‌ ದುರಂತ­ದಲ್ಲಿ ಗಂಭೀರ ಗಾಯಗೊಂಡು ನಗರದ ಎಸ್‌.ಎಸ್‌.­ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿರುವ ಐವರ ಪೈಕಿ ಮೂವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.

ಗಂಭೀರ ಗಾಯಗೊಂಡಿರುವ ಪುರೋಹಿತ ಸಂಜಯ ಆಚಾರ್ಯ ಹಾಗೂ ಅವರ ಪತ್ನಿ ಶ್ರೀಪ್ರಿಯಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡ­ಲಾಗುತ್ತಿದೆ. ಇವರ ಜತೆಗೆ ಆಸ್ಪತ್ರೆಗೆ ದಾಖ­­ಲಾ­ಗಿದ್ದ ಮಹಮದ್‌ ಮುಸ್ತಾಫಾ, ಮಹಮದ್‌ ಸುಹೇಬ್‌ ಹಾಗೂ ಕಾಶೀನಾಥ ಅವರು ಚೇತರಿಸಿ­ಕೊಳ್ಳು­ತ್ತಿ­­ದ್ದಾರೆ  ಎಂದು ಆಸ್ಪತ್ರೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT