ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಕೋಟ್ಯಧೀಶ್ವರರ ಪಟ್ಟಿಯಲ್ಲಿ ಬೆಂಗಳೂರು

‘ಏಷ್ಯಾ ಪೆಸಿಫಿಕ್‌’ನ ಇಪ್ಪತ್ತು ಬಹುಕೋಟ್ಯಧೀಶ್ವರರ ನಗರಗಳ ಪಟ್ಟಿ *ದೇಶದ 7 ನಗರಗಳಿಗೆ ಸ್ಥಾನ
Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಲಿಕಾನ್‌  ಸಿಟಿ ಬೆಂಗಳೂರು, ವಾಣಿಜ್ಯ ರಾಜಧಾನಿ ಮುಂಬೈ, ರಾಜಕೀಯ ಕೇಂದ್ರ ದೆಹಲಿ ಸೇರಿ ದೇಶದ ಏಳು ನಗರಗಳು  ಬಹು ಕೋಟ್ಯಧಿಪತಿಗಳನ್ನು ಹೊಂದಿರುವ ಏಷ್ಯಾ ಪೆಸಿಫಿಕ್‌ನ (ಅಪಾಕ್‌) 20 ಉನ್ನತ  ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ದೇಶದ ಇತರ ನಗರಗಳಾದ ಪುಣೆ, ಹೈದರಾಬಾದ್‌, ಚೆನ್ನೈ ಹಾಗೂ ಕೋಲ್ಕತ್ತ ಸಹ ಈ ಪಟ್ಟಿಯಲ್ಲಿವೆ ಎಂದು ‘ನ್ಯೂ ವರ್ಲ್ಡ್  ವೆಲ್ತ್‌’ ಸಂಸ್ಥೆ ನಡೆಸಿದ ಅಧ್ಯಯನ ವರದಿ ತಿಳಿಸಿದೆ. ‘ಅತಿ ವೇಗವಾಗಿ ಬೆಳೆ ಯುತ್ತಿರುವ ಶ್ರೀಮಂತರ ನಗರಗಳು’ ಶೀರ್ಷಿಕೆಯಲ್ಲಿ ಸಿದ್ಧಪಡಿಸಿರುವ ಕಳೆದ ಡಿಸೆಂಬರ್‌ಗೆ ಅಂತ್ಯಗೊಂಡ ದಶಕದ ಈ ಪಟ್ಟಿಯಲ್ಲಿ ವಿಯೆಟ್ನಾಂನ ಹೋ ಚೀ ಮಿನ್ಹ್‌ ನಗರ ಮೊದಲ ಸ್ಥಾನದಲ್ಲಿದೆ.

ಪುಣೆಯಲ್ಲಿ ಅತಿಶ್ರೀಮಂತರ ಸಂಖ್ಯೆ ಭಾರಿ ವೇಗಗತಿಯಲ್ಲಿ ಹೆಚ್ಚುತ್ತಿದೆ. ಈ ನಗರದಲ್ಲಿ 2004ರ ಡಿಸೆಂಬರ್‌ನಲ್ಲಿ 60 ಇದ್ದ ಬಹುಕೋಟ್ಯಧಿಪತಿಗಳ ಸಂಖ್ಯೆ  2014ರ ಡಿಸೆಂಬರ್‌ನಲ್ಲಿ 250ಕ್ಕೆ ಏರಿದ್ದು, ಈ ಮೂಲಕ ಶೇ 317ರಷ್ಟು ಹೆಚ್ಚಳ ಕಂಡಿದೆ. ನಂತರದ ಸ್ಥಾನದಲ್ಲಿ ಮುಂಬೈ ಇದ್ದು, 2014ರ ಡಿಸೆಂಬರ್‌ನಲ್ಲಿ 2,690 ಬಹುಕೋಟ್ಯಧೀಶ್ವರರು ಈ ನಗರದಲ್ಲಿ ಇದ್ದಾರೆ. ಈ ಅವಧಿಯಲ್ಲಿ ಹೈದರಾಬಾದ್‌ನಲ್ಲಿ 160ರಿಂದ 510ಕ್ಕೆ, ಬೆಂಗಳೂರಿನಲ್ಲಿ 140ರಿಂದ 440ಕ್ಕೆ, ದೆಹಲಿಯಲ್ಲಿ 430ರಿಂದ 1,350ಕ್ಕೆ, ಚೆನ್ನೈನಲ್ಲಿ 130ರಿಂದ 390ಕ್ಕೆ ಹಾಗೂ ಕೋಲ್ಕತ್ತದಲ್ಲಿ 210ರಿಂದ 570ಕ್ಕೆ ಬಹು ಕೋಟ್ಯಧಿಪತಿಗಳ ಸಂಖ್ಯೆ ಏರಿದೆ.

ಈ ಮಧ್ಯೆ, ಅಮೆರಿಕವು ಸುಮಾರು 1,83,500 ಅತಿ ಶ್ರೀಮಂತದಿಂದಾಗಿ ವಿಶ್ವದಲ್ಲೇ ಅತ್ಯಧಿಕ ಸ್ಥಾನಿಕ ಬಹು ಕೋಟ್ಯ ಧಿಪತಿಗಳನ್ನು

ಪ್ರಗತಿಯಲ್ಲಿ ರಷ್ಯಾ,  ಬ್ರೆಜಿಲ್‌, ಚೀನಾ, ಭಾರತ, ಇಂಡೊನೇಷ್ಯಾ, ವಿಯೆಟ್ನಾಂ ಸೇರಿದಂತೆ ಪ್ರಮುಖ ಅಭಿವೃದ್ಧಿಶೀಲ ಮಾರುಕಟ್ಟೆಯ  ರಾಷ್ಟ್ರಗಳು  ಶೇ 200ಕ್ಕಿಂತಲೂ ಮೇಲ್ಪಟ್ಟು ಸಾಧನೆ ತೋರಿವೆ
ನ್ಯೂ ವರ್ಲ್ಡ್  ವೆಲ್ತ್‌
ಅಪಾಕ್‌ ಸಮೀಕ್ಷಾ ಸಂಸ್ಥೆ

ಹೊಂದಿದೆ. ನಂತರ ಚೀನಾದಲ್ಲಿ 26,500, ಜರ್ಮನಿಯಲ್ಲಿ 25,400 ಅತಿಶ್ರೀಮಂತ ಸ್ಥಾನಿಕ ಬಹು ಕೋಟ್ಯಧೀಶ್ವರರಿದ್ದಾರೆ.

ವರದಿ ಪ್ರಕಾರ, ವಿಶ್ವದಾದ್ಯಂತ ಕಳೆದ 10 ವರ್ಷಗಳಲ್ಲಿ ಬಹು ಕೋಟ್ಯಧಿಪತಿಗಳ ಸಂಖ್ಯೆ ಶೇ 71ರಷ್ಟು ಏರಿಕೆಯಾಗಿದೆ.
ಪ್ರಾದೇಶಿಕವಾರು ವಿಶ್ಲೇಷಣೆ ಅನ್ವಯ, ಕಳೆದ 10 ವರ್ಷಗಳಲ್ಲಿ ದಕ್ಷಿಣ ಅಮೆರಿಕದ ಬಹುಕೋಟ್ಯಧೀಶ್ವರರ ಸಂಖ್ಯೆಯಲ್ಲಿ ಶೇ 265ರಷ್ಟು ಹೆಚ್ಚಳವಾಗಿದೆ. ಇದಲ್ಲದೆ, ಆಸ್ಟ್ರೇಲಿಯಾದಲ್ಲಿ ಶೇ 182 ಮತ್ತು ಆಫ್ರಿಕಾದಲ್ಲಿ ಶೇ 142ರಷ್ಟು ಬಹು ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಿದೆ.

ಒಟ್ಟಾರೆಯಾಗಿ, ಪ್ರಸ್ತುತ ವಿಶ್ವದಲ್ಲಿ 1.3 ಕೋಟಿ ಕೋಟ್ಯಧಿಪತಿಗಳು ಇದ್ದು, ಇವರಲ್ಲಿ ಅಂದಾಜು 4.95 ಲಕ್ಷ ವ್ಯಕ್ತಿಗಳನ್ನು ಬಹುಕೋಟ್ಯಧೀಶ್ವರು ಎಂದು ವಿಂಗಡಿಸಬಹುದು. ಸುಮಾರು 14,800 ಬಹು ಕೋಟ್ಯಧಿಪತಿಗಳನ್ನು ಹೊಂದಿd ಭಾರತ ವಿಶ್ವದಲ್ಲಿ 8ನೇ ಸ್ಥಾನದಲ್ಲಿದೆ. 

ಅಧಿಕ ಸ್ಥಾನಿಕ ಬಹುಕೋಟ್ಯಧಿಪತಿಗಳ ನಗರಗಳಲ್ಲಿ ಹಾಂಕಾಂಗ್‌ ಪ್ರಥಮ, ನ್ಯೂಯಾರ್ಕ್‌ ಮತ್ತು ಲಂಡನ್‌ ನಂತರದ ಸ್ಥಾನಗಳಲ್ಲಿವೆ. 2,700 ಬಹು ಕೋಟ್ಯ ಧೀಶ್ವರರನ್ನು ಹೊಂದಿದ ಮುಂಬೈ ಮಾತ್ರ ಈ ಪಟ್ಟಿಯಲ್ಲಿ ಭಾರತದ ನಗರಗಳ ಪೈಕಿ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT