ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತ ಸಾಬೀತು ಮಾಡಿದ ಖಂಡು

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಪೆಮಾ ಖಂಡು ಅವರು ವಿಧಾನಸಭೆಯಲ್ಲಿ ಬುಧವಾರ ಬಹುಮತ ಸಾಬೀತುಪಡಿಸಿದರು.
60 ಸದಸ್ಯ  ಬಲದ ವಿಧಾನಸಭೆಯಲ್ಲಿ 44 ಕಾಂಗ್ರೆಸ್‌ ಶಾಸಕರು ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸರ್ಕಾರದ ಪರ ಮತ ಚಲಾಯಿಸಿದರು. ವಿರೋಧ ಪಕ್ಷ ಬಿಜೆಪಿ 11 ಸದಸ್ಯರನ್ನು ಹೊಂದಿದೆ.

ಬಹುಮತ ಸಾಬೀತು ಮಾಡಿದ ಖಂಡು ಮಾತನಾಡಿ, ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ  ಪಕ್ಷದ ಹಿರಿಯ ನಾಯಕರಾಗಿರುವ ನಬಮ್‌  ಟುಕಿ ಮತ್ತು ಕಲಿಖೋ ಪುಲ್‌  ಸೇರಿದಂತೆ ಎಲ್ಲ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

‘ಈಶಾನ್ಯ ರಾಜ್ಯಗಳಲ್ಲಿಯೇ ಬಹುಸಂಖ್ಯೆಯಲ್ಲಿರುವ 26 ದೊಡ್ಡ ಬುಡಕಟ್ಟು ಮತ್ತು 100ಕ್ಕೂ ಹೆಚ್ಚು ಉಪ ಪಂಗಡಗಳನ್ನೊಳಗೊಂಡು ಅಭಿವೃದ್ಧಿ ಸಾಧಿಸುವುದಕ್ಕೆ ಸರ್ಕಾರದ ಮೊದಲ ಆದ್ಯತೆ ನೀಡುತ್ತದೆ’ ಎಂದು ಖಂಡು ಹೇಳಿದ್ದಾರೆ.

ಹಿಂದೆ ಆಗಿರುವುದನ್ನು ಕೆದಕಬೇಡಿ ಎಂದ ಅವರು, ಸಂಪುಟದ ಎಲ್ಲ ಸಚಿವರಿಗೂ ಹೊಣೆ ನಿಗದಿ ಮಾಡಲಾಗುವುದು, ಉತ್ತಮ ರೀತಿಯಲ್ಲಿ ಕೆಲಸ ಮಾಡದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT