ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಕ್ವಾರ್ಟರ್ ಫೈನಲ್‌ಗೆ ಮನೋಜ್‌

Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ):  ಭಾರತದ ಮನೋಜ್‌ ಕುಮಾರ್‌ ಇಲ್ಲಿ ನಡೆಯುತ್ತಿ ರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಪುರುಷರ 64 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಮನೋಜ್‌ 3–0ರಲ್ಲಿ ನೇಪಾಳದ ದೀಪಕ್‌ ಶ್ರೇಷ್ಠ ಅವರನ್ನು ಪರಾಭವಗೊಳಿಸಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿರುವ ಮನೋಜ್‌ ಆರಂಭಿಕ ಸುತ್ತಿನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ಮನೋಜ್‌ ಚುರುಕಿನ ಕೈ ಚಲನೆಯ ಮೂಲಕ ಎದು ರಾಳಿಯ ಮುಖಕ್ಕೆ ಶಕ್ತಿಯುತ ಪಂಚ್‌ಗ ಳನ್ನು ಮಾಡಿ ಪಾಯಿಂಟ್ಸ್‌ ಗಳಿಸಿದರು.

ನೇಪಾಳದ ಬಾಕ್ಸರ್‌ ಕೂಡ ಕೆಲ ಸೊಗಸಾದ ಪಂಚ್‌ಗಳನ್ನು ಮಾಡಿ ಭಾರ ತದ ಬಾಕ್ಸರ್‌ಗೆ ಸವಾಲೊಡ್ಡಿದರು. ಇದರ ನಡುವೆಯೂ ಮನೋಜ್‌ ಮೊದಲ ಸುತ್ತಿ ನಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಆದರೆ ಎರಡನೇ ಸುತ್ತಿನಲ್ಲಿ ಭಿನ್ನ ತಂತ್ರದೊಂದಿಗೆ ಕಣಕ್ಕಿಳಿದ ಭಾರತದ ಬಾಕ್ಸರ್‌ ಆಕ್ರಮಣಕಾರಿಯಾದರು. ಅವರು ವೇಗ ಹಾಗೂ ಚಾಕಚಕ್ಯತೆ ಯಿಂದ ಬಾರಿಸುತ್ತಿದ್ದ ಹೊಡೆತಗಳಿಂದ ಕಂಗೆಟ್ಟ ದಿಲೀಪ್‌ ಕಿಂಚಿತ್ತೂ ಹೋರಾಟ ನೀಡದೆ ಸೋಲೊಪ್ಪಿಕೊಂಡರು.

ಕ್ವಾರ್ಟರ್ ಫೈನಲ್‌ನಲ್ಲಿ ಮನೋಜ್‌ ಕಜಕಸ್ತಾನದ ಎರಡನೇ ಶ್ರೇಯಾಂಕಿತ ಆಟಗಾರ ಸಮತ್‌ ಬಶೇನೊವ್‌ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ ನಲ್ಲಿ  ಬಶೇನೊವ್‌ 3–0ರಲ್ಲಿ ಉಜ್‌ಬೆಕಿ ಸ್ತಾನದ ಫಜಲಿದ್ದೀನ್‌ ಗೈಬ್ನಾಜಾರೊವ್‌ ಅವರನ್ನು ಸೋಲಿಸಿದರು.

ಎಂಟರ ಘಟ್ಟಕ್ಕೆ ಮದನ್‌: ಪುರುಷರ 52ಕೆ.ಜಿ. ವಿಭಾಗದಲ್ಲಿ ಭಾರತದ ಭರವಸೆ ಎನಿಸಿರುವ ಮದನ್‌ ಲಾಲ್‌ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. ಭಾರತದ ಬಾಕ್ಸರ್‌ 16ರ ಘಟ್ಟದ ಹಣಾಹಣಿಯಲ್ಲಿ 3–0ರಲ್ಲಿ ಇರಾಕ್‌ನ  ಮುರ್ತಾಧಾ ಅಲ್‌ ಸುದಾನಿ ವಿರುದ್ಧ ವಿಜಯಿಯಾದರು.

ಕ್ವಾರ್ಟರ್‌ ಫೈನಲ್‌ನಲ್ಲಿ  ಮದನ್‌ ಉಜ್‌ಬೆಕಿಸ್ತಾನದ  ಶಕೋಬಿದಿನ್‌ ಜೊಯ್‌ರೊವ್‌  ವಿರುದ್ಧ ಪೈಪೋಟಿ ನಡೆ ಸಲಿದ್ದಾರೆ. ಇನ್ನೊಂದು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಜೊಯ್‌ರೊವ್‌  3–0ರಲ್ಲಿ  ಜಪಾನ್‌ನ ರೋಮೆ  ಟನಾಕ ಎದುರು ಗೆಲುವು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT