ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ಎಂಟರ ಘಟ್ಟಕ್ಕೆ ವಿಕಾಸ್‌

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ದೋಹಾ (ಪಿಟಿಐ): ಭಾರತದ ಭರವಸೆಯ ಬಾಕ್ಸರ್‌ಗಳಾದ ವಿಕಾಸ್‌ ಕೃಷ್ಣನ್‌ ಮತ್ತು ಶಿವ ಥಾಪಾ ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್‌ ಚಾಂಪಿ ಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಹೋದ ವರ್ಷ ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿ ಸಿದ್ದ ವಿಕಾಸ್‌ 75 ಕೆ.ಜಿ. ವಿಭಾಗದವರ ಹಣಾಹಣಿಯಲ್ಲಿ ತೊಮಾಜ ಜಬ್ಲೊಂಸ್ಕಿ ಎದುರು 2–1ರಲ್ಲಿ ಗೆಲುವು ಸಾಧಿಸಿದರು. 23 ವರ್ಷದ ವಿಕಾಸ್‌ 2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು.

56 ಕೆ.ಜಿ. ವಿಭಾಗದ ಪೈಪೋಟಿ ಯಲ್ಲಿ ಶಿವ ಥಾಪಾ 2–1ರಲ್ಲಿ ಬೊಯೆ ವಾವ್ರಾರಾ ಎದುರು ಜಯಭೇರಿ ಮೊಳಗಿಸಿದರು. ಯುವ ಬಾಕ್ಸರ್ ತಾಪಾ 2010 ರಲ್ಲಿ ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದಿದ್ದರು. ಶಿವ ಕೇವಲ 26 ಸೆಕೆಂಡು ಗಳಲ್ಲಿ ಕೊನೆಯ ಬೌಟ್‌ ಜಯಿಸಿದರು.

‘ಶಿವ ಪ್ರಬಲ ಪಂಚ್‌ಗಳ ಮೂಲಕ ಎದುರಾಳಿ ಆಟಗಾರರಲ್ಲಿ ಆತಂಕ ಮೂಡಿಸಿದ್ದ. ಮಹತ್ವದ ಚಾಂಪಿಯನ್‌ ಷಿಪ್‌ನಲ್ಲಿ ಆತ ಸಾಮರ್ಥ್ಯ ತೋರಿದ ರೀತಿ ಮೆಚ್ಚುವಂತದ್ದು. ವಿಕಾಸ್‌ ಕೂಡ ತುಂಬಾ ಚೆನ್ನಾಗಿ ಆಡಿದರು. ಪೂರ್ಣ ಸಾಮರ್ಥ್ಯದೊಂದಿಗೆ ಸವಾಲುಗಳನ್ನು ಎದುರಿಸಿದರು. ಕರಾರುವಾಕ್ಕಾದ ಪಂಚ್‌ ಗಳಿಂದ ವಿಕಾಸ್‌ ಗಮನ ಸೆಳೆದರು’ ಎಂದು ರಾಷ್ಟ್ರೀಯ ಬಾಕ್ಸಿಂಗ್‌ ತಂಡದ ಕೋಚ್‌ ಗುರುಬಕ್ಷ್‌ ಸಿಂಗ್ ಸಂಧು ಸಂತೋಷ ವ್ಯಕ್ತಪಡಿಸಿದ್ದಾರೆ.

‘ಎದುರಾಳಿ ಬಾಕ್ಸರ್‌ನ ಸಾಮರ್ಥ್ಯ ಏನೆಂಬುದು ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಮೊದಲ ಸುತ್ತಿನಿಂದಲೇ ಆಕ್ರಮಣಕಾರಿಯಾಗಿ ಆಡಿದೆ. ಮೊದಲ ಎರಡು ಸುತ್ತುಗಳಲ್ಲಿ ಪ್ರಾಬಲ್ಯ ಮೆರೆದೆ. ಮಹತ್ವದ ಹಂತದಲ್ಲಿ ನಾನು ನೀಡಿದ ಪ್ರದರ್ಶನ ಖುಷಿ ನೀಡಿದೆ. ಮುಂದಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪಂಚ್‌ಗಳನ್ನು ಬಾರಿಸಬೇಕಿದೆ’ ಎಂದು ವಿಕಾಸ್‌ ಕೃಷ್ಣನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT