ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪು ಹತ್ಯೆ: ಗೋಡ್ಸೆ ಪುಸ್ತಕ ಪರಿಷ್ಕೃತ ಪ್ರತಿ ಮರುಮುದ್ರಣ

Last Updated 23 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಾತ್ಮ ಗಾಂಧಿ ಅವರ ಹಂತಕ ನಾಥುರಾಂ ಗೋಡ್ಸೆ ಹೇಳಿಕೆಯನ್ನು ಆಧರಿಸಿ ಆತನ ಸೋದರ ಗೋಪಾಲ್‌ ಗೋಡ್ಸೆ ಬರೆದಿರುವ ‘ನಾನೇಕೆ ಗಾಂಧಿ ಹತ್ಯೆ ಮಾಡಿದೆ’ ಕೃತಿಯ ಪರಿಷ್ಕೃತ ಇಂಗ್ಲಿಷ್‌ ಅನುವಾದ ಮರು ಮುದ್ರಣ ಆಗಲಿದೆ.

ಗಾಂಧೀಜಿ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಗೋಡ್ಸೆ ನೀಡಿರುವ ಹೇಳಿಕೆ, ನ್ಯಾಯಾಲಯದ ತೀರ್ಪು ಮತ್ತು ಗೋಡ್ಸೆ ಅನಿಸಿಕೆಗಳನ್ನು ಈ ಪರಿಷ್ಕೃತ ಕೃತಿ ಒಳಗೊಂಡಿದೆ.

‘ನಾಥುರಾಂ ಹೇಳಿಕೆ ಓದಿದ ಮೇಲೆ ಗೋಪಾಲ್‌ ಅವರ ಪುಸ್ತಕ ಮತ್ತು  ನ್ಯಾಯಮೂರ್ತಿ ಕೋಸ್ಲಾ ಅವರ  ವಿಶ್ಲೇಷಣೆಯನ್ನು ಒಂದೇ ಕೃತಿ ಯಲ್ಲಿ ಸಂಪಾದಿಸುವ ಯೋಚನೆ ಹೊಳೆಯಿತು’ ಎಂದು ಕೃತಿಯ ಅನು­ವಾದಕ ವೀರೇಂದರ್‌ ಮೆಹ್ರಾ ಹೇಳಿದ್ದಾರೆ. ಈ ಪುಸ್ತಕವನ್ನು ದೆಹಲಿ ಮೂಲದ ‘ಫಾರ್‌ಸೈಟ್‌’ ಪ್ರಕಾಶನ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT