ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬ್ರಿ ಮಸೀದಿ ಪ್ರಕರಣ: ಹಿರಿಯ ಅರ್ಜಿದಾರ ನಿಧನ

Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಯೋಧ್ಯೆ (ಪಿಟಿಐ): ಬಾಬ್ರಿ ಮಸೀದಿ ಪ್ರಕರಣದ ಅತಿ ಹಿರಿಯ ಅರ್ಜಿದಾರ ಮಹಮ್ಮದ್‌ ಫಾರೂಕ್‌ (100) ಬುಧವಾರ ಇಲ್ಲಿ ನಿಧನ ಹೊಂದಿದರು.

1949ರಲ್ಲಿ ಬಾಬ್ರಿ ಮಸೀದಿ ಆವರಣದಲ್ಲಿ ಶ್ರೀರಾಮನ ಮೂರ್ತಿಗಳನ್ನು ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೆ ಹೂಡಿದ್ದ ಏಳು ಮುಸ್ಲಿಮರಲ್ಲಿ ಅಯೋಧ್ಯೆಯ ನಿವಾಸಿ ಫಾರೂಕ್‌ ಒಬ್ಬರಾಗಿದ್ದರು.

ಫಾರೂಕ್‌ ಅವರ ನಿಧನದ ಬಳಿಕ ಅವರ ಹಿರಿಯ ಮಗ ಮೊಹಮ್ಮದ್ ಸಲೀಂ ಪ್ರಕರಣದ ದಾವೆಯನ್ನು ಮುಂದುವರಿಸಬಹುದಾಗಿದೆ ಎಂದು ಬಾಬ್ರಿ ಮಸೀದಿ ಕಾರ್ಯ ಸಮಿತಿ ಸಂಚಾಲಕ ಮತ್ತು ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜಫಾರಿಯಬ್ ಜಿಲಾನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT