ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕ ತಿದ್ದುಪಡಿ ಮಸೂದೆಗೆ ವಿಶ್ವಸಂಸ್ಥೆ ಕಳವಳ

ಕುಟುಂಬ ಉದ್ಯಮಕ್ಕೆ ಮಕ್ಕಳ ನೆರವು ಅಂಶ ತೆಗೆಯಲು ಒತ್ತಾಯ
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ):  ಭಾರತದ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಗೆ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ತೀವ್ರ ಕಳವಳ ವ್ಯಕ್ತಪಡಿಸಿದೆ.

ಕುಟುಂಬದ ಉದ್ಯಮದಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಇದಕ್ಕೆ ಯುನಿಸೆಫ್ ವಿರೋಧ ವ್ಯಕ್ತಪಡಿಸಿದ್ದು, ಮಸೂದೆಯಿಂದ ಈ ಅಂಶವನ್ನು ತೆಗೆದುಹಾಕಬೇಕು ಎಂದು  ಒತ್ತಾಯಿಸಿದೆ.

ಹೊಸ ಮಸೂದೆ ಜಾರಿಯಾದರೆ  ಬಾಲ ಕಾರ್ಮಿಕ ಪದ್ಧತಿಯ ವಿವಿಧ ರೂಪಗಳನ್ನು ಮರೆಮಾಚುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಅತ್ಯಂತ ದುರ್ಬಲ ಹಾಗೂ ಅಂಚಿಗೆ ದೂಡಲ್ಪಟ್ಟ ಮಕ್ಕಳ ಶಾಲಾ ಹಾಜರಾತಿಮಟ್ಟ ಮತ್ತು ಕಲಿಕಾಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಭಾರತ ಘಟಕದ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಯುಫ್ರೆಟ್ಸ್‌ ಗೊಬಿನಾ ಆತಂಕ ವ್ಯಕ್ತಪಡಿಸಿದ್ದಾರೆ.

ಕುಟುಂಬದ ಉದ್ಯಮದಲ್ಲಿ ಕೆಲಸ ಮಾಡಲು ಅವಕಾಶ ನೀಡಿದರೆ ಅಪಾಯ ಕಾರಿ ಉದ್ಯಮಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವ ಅಪಾಯವಿದೆ ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್‌ ಸತ್ಯಾರ್ಥಿ ಮತ್ತು ಮಾನವಹಕ್ಕು ಕಾರ್ಯಕರ್ತ ಹರ್ಷ ಮಂದೆರ್‌ ಅವರೂ ಮಸೂದೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT