ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಅಪಹರಣ: ಮೂವರ ಬಂಧನ

Last Updated 19 ಡಿಸೆಂಬರ್ 2014, 19:58 IST
ಅಕ್ಷರ ಗಾತ್ರ

ಹೊಸಕೋಟೆ: ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆವಲ­ಹಳ್ಳಿ ಪೊಲೀಸರು ಮೂವರು ಯುವಕ­ರನ್ನು ಗುರುವಾರ ಬಂಧಿಸಿದ್ದಾರೆ.

ಯಲಹಂಕ ಬಳಿಯ ಅಮೃತ­ಹಳ್ಳಿಯ ಶ್ರೀನಿವಾಸ (19), ಶಂಕರ (18) ಹಾಗೂ ಆದರ್ಶ (18) ಬಂಧಿತರು. ಅಮೃತಹಳ್ಳಿಯ ಬಾಲಕಿ 10ನೇ ತರಗತಿ ಓದುತ್ತಿ­ದ್ದಾಳೆ. ಬಾಲಕಿ ಡಿ.15 ರಂದು ಆವಲಹಳ್ಳಿ­ಯಲ್ಲಿನ ಚಿಕ್ಕಪ್ಪನ ಮನೆಗೆ ಬಂದಿ­ದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿದ್ದರು.

ಬಾಲಕಿಯ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮುಳು­ಬಾಗಿಲು ಸಮೀಪದ ಬೂದಳ­ಪಲ್ಲಿ­ಯಲ್ಲಿ ಆರೋಪಿಗಳನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT