ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ

Last Updated 21 ಜೂನ್ 2014, 19:30 IST
ಅಕ್ಷರ ಗಾತ್ರ

ಅಂಡಾಲ್ (ಪಶ್ಚಿಮ ಬಂಗಾಳ) (ಪಿಟಿಐ): ದೇವಸ್ಥಾನದ ಅರ್ಚಕ­ನೊಬ್ಬ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಬುರುದ್ವಾನ್‌ ಜಿಲ್ಲೆಯಲ್ಲಿ ನಡೆದಿದೆ.

ಎರಡನೇ ತರಗತಿಯ ಬಾಲಕಿ ಹೂವು ಸಂಗ್ರಹಿಸಲು ಶುಕ್ರವಾರ ಸೌಥ್‌ ಬಜಾರ್‌ನ ದೇವಾಲ­ಯಕ್ಕೆ ಬಂದಾಗ, ದೇವಾಲ­ಯದ ಅರ್ಚಕ ಬಾಲಕಿಗೆ ಪ್ರಸಾದ ನೀಡುವು­ದಾಗಿ ಆಮಿಷ ತೋರಿಸಿ ಮಹಡಿ ಮೇಲೆ ಕರೆದೊಯ್ದಿ­ದ್ದಾನೆ.

ನಂತರ ಅತ್ಯಾಚಾರ­ವೆಸಗಿ ಕತ್ತು ಹಿಸುಕಿ ಕೊಲೆ ಮಾಡಿ ಮಹಡಿಯಿಂದ ಕೆಳಗೆ ಎಸೆದಿ­ದ್ದಾನೆ. ಬಾಲಕಿಯನ್ನು ಎಸೆದ ಶಬ್ದ ಕೇಳಿದ ಸ್ಥಳೀಯರು ಅಲ್ಲಿ ನೆರೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀ­ಸರು ಶವ ಎತ್ತಲು ಮುಂದಾ­ದಾಗ ವಿರೋ­ಧಿಸಿದ ಗ್ರಾಮಸ್ಥರು, ಆರೋಪಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ­ದ್ದಾರೆ.
‘ಅರ್ಚಕ­ನನ್ನು ಬಂಧಿಸ­ಲಾಗಿದೆ. ಅತ್ಯಾಚಾರ ಮಾಡಿ­ದ್ದಾಗಿ ಆತ ಒಪ್ಪಿ­ಕೊಂಡಿ­ದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT