ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಬ್ರೂಯಿ ಅತಿಥಿಗೃಹ ತೆರವಿಗೆ ವಿರೋಧ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಾರಂಪರಿಕ ಬಾಲ­ಬ್ರೂಯಿ ಅತಿಥಿಗೃಹವನ್ನು ತೆರವುಗೊಳಿ­ಸುವ ನಿರ್ಧಾರವನ್ನು ಸರ್ಕಾರ ಕೈಬಿಡ­ಬೆಕು ವಿವಿಧ ಸಂಘಟನೆಗಳ ಸದಸ್ಯರು ವಿರೋಧಿಸಿದ್ದಾರೆ.

ಬಿ.ಪ್ಯಾಕ್‌, ಇನ್‌ಟ್ಯಾಕ್‌ ಮತ್ತು ‘ಬೈ–ಗಾನ್‌ ಬೆಂಗಳೂರು’ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಸಭೆ ನಡೆಸಿ, ಪಾರಂಪರಿಕ ಬಾಲಬ್ರೂಯಿ ಅತಿಥಿ ಗೃಹವನ್ನು ತೆರವುಗೊಳಿಸುವ ನಿರ್ಧಾರ­ವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಅತಿಥಿಗೃಹ ತೆರವುಗೊಳಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.  ಇಂತಹ ಕಾರಣಗಳಿಗೆ ಅತಿಥಿಗೃಹವನ್ನು ತೆರವು­ಗೊಳಿಸುವುದು ಸರಿಯಲ್ಲ. ಮೂಲ ಕಟ್ಟ­ಡಕ್ಕೆ ಯಾವ ಕಾರಣಕ್ಕೂ ಹಾನಿ ಮಾಡ­ಬಾರದು ಎಂದು ಸಭೆಯಲ್ಲಿ ಭಾಗ­ವಹಿಸಿದ್ದ ಸದಸ್ಯರೊಬ್ಬರು ಹೇಳಿದರು.

‘ಅತಿಥಿಗೃಹದ ಕಟ್ಟಡದಿಂದ ತಡೆ­ಗೋಡೆ­ವರೆಗೆ 150 ಅಡಿ ಜಾಗ ಇದೆ. ಅಗತ್ಯ ಇದ್ದರೆ ಆ ಜಾಗವನ್ನು ಬಳಸಿ­ಕೊಳ್ಳ­­­ಬೇಕು. ರಾಜ್ಯದಲ್ಲಿ 2004 ರಲ್ಲಿ 1,800ಕ್ಕೂ ಹೆಚ್ಚು ಐತಿಹಾಸಿಕ ಕಟ್ಟಡ­ಗಳಿದ್ದವು. ಅದರಲ್ಲಿ ಈಗ  ಕೆಲವು ಮಾತ್ರ ಈ ಉಳಿದಿವೆ. ಕರ್ನಾಟಕ ನಗರ ಯೋಜನೆ ಕಾಯ್ದೆ ಅಡಿ ಬಾಲಬ್ರೂಯಿ ಅತಿಥಿ ಗೃಹ ಸೇರಿದಂತೆ ಇತರ ಕಟ್ಟಡ­ಗಳನ್ನು ರಕ್ಷಣೆ ಮಾಡಬೇಕು’ ಎಂದು ‘ಬೈ–ಗಾನ್‌ ಬೆಂಗಳೂರು’ ಸಂಘಟನೆಯ ಸದಸ್ಯರೊಬ್ಬರು ಒತ್ತಾಯಿಸಿದರು.

ಬಾಲಬ್ರೂಯಿ ಅತಿಥಿಗೃಹವನ್ನು ತೆರವು­­ಗೊಳಿಸುವುದನ್ನು ನಿಲ್ಲಿಸಬೇಕು ಎಂದು ಬಹುಜನ ಸಮಾಜ ಪಕ್ಷವು  ಸಾರ್ವ­ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸ­ಲಾಗಿದೆ. ಅಲ್ಲದೆ ಹಲವು ಆನ್‌ಲೈನ್‌ ಅರ್ಜಿಗಳು ಸಲ್ಲಿಕೆಯಾಗಿವೆ.

ಸಾಮಾಜಿಕ ಜಾಲತಾಣಗಳ ಮೂಲ­ಕವೂ ಜನರು ಬಾಲಬ್ರೂಯಿ ಅತಿಥಿ­ಗೃಹ­ವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸು­ತ್ತಿ­ದ್ದಾರೆ. ವ್ಯಕ್ತಿಯೊಬ್ಬರು ತಮ್ಮ ಫೇಸ್‌­­ಬುಕ್‌ ಖಾತೆಯಲ್ಲಿ ‘ಬಾಲಬ್ರೂಯಿ ಅತಿಥಿಗೃಹವನ್ನು ರಕ್ಷಿಸಿ ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ 160 ಮಂದಿ ಅಭಿಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT