ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶಕ್ಕೆ ಸಾಮಗ್ರಿ ರವಾನೆ ರಾಕೆಟ್‌ ಸ್ಫೋಟ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಂತರರಾಷ್ಟ್ರೀಯ ಬಾಹ್ಯಾ­ಕಾಶ ನಿಲ್ದಾಣಕ್ಕೆ ‘ನಾಸಾ’ ಪರವಾಗಿ ಅಗತ್ಯ ಸಾಮಗ್ರಿ ಸಾಗಿಸುತ್ತಿದ್ದ ಮಾನವರಹಿತ ಖಾಸಗಿ ರಾಕೆಟ್‌ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಘಟನೆ ನಡೆದಿದೆ.

ಅಮೆರಿಕದ ಪೂರ್ವ ವರ್ಜೀನಿಯಾ ಕರಾವಳಿಯ ವಾಲೋಪ್ಸ್‌ ಉಡಾವಣಾ ಕೇಂದ್ರದಿಂದ ಮಂಗಳ­ವಾರ ಸಂಜೆ 6.22ಕ್ಕೆ (ಸ್ಥಳೀಯ ಕಾಲಮಾನ) ಈ ರಾಕೆಟ್‌ ಉಡಾವಣೆ ಮಾಡಲಾಗಿತ್ತು.

ಆರ್ಬಿಟಲ್‌ ಸೈನ್ಸ್‌ಸ್‌ ಕಾರ್ಪೊರೇಷನ್‌ನ ‘ಅಂಟಾ­ರೆಸ್‌’ ರಾಕೆಟ್‌ ‘ಸೈಗ್ನಸ್‌’ ಅಂತರಿಕ್ಷ ನೌಕೆ­ಯನ್ನು ಬಾಹ್ಯಾ­­ಕಾಶ ನಿಲ್ದಾಣಕ್ಕೆ ಕೊಂಡೊ­ಯ್ಯು­ತ್ತಿತ್ತು. ನೌಕೆ­ಯಲ್ಲಿ 2,268 ಕೆ.ಜಿ. ತೂಕದ ಸಾಮ­ಗ್ರಿ­ಗಳು ಇದ್ದವು. ಉಡಾವಣೆಯಾದ 6 ಸೆಕೆಂಡ್‌­ಗಳಲ್ಲಿ ರಾಕೆಟ್‌ ಸ್ಫೋಟಗೊಂಡಿತು. ಈ ವೈಫಲ್ಯಕ್ಕೆ ಕಾರಣ ವಿಶ್ಲೇಷಿಸಲಾ­ಗುತ್ತಿದೆ ಎಂದು ‘ನಾಸಾ‘ ವಕ್ತಾರ ಜಾಯ್‌ ಬೊಲ್ಡನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT