ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌ಗಳಿಗೆ ಇನ್ನು ಮೂರೇ ಬಣ್ಣ

Last Updated 4 ಮಾರ್ಚ್ 2015, 19:57 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾ­ನಗರ ಸಾರಿಗೆ ಸಂಸ್ಥೆಯ ಬಸ್‌ಗಳು ಇನ್ನು ಮುಂದೆ ಮೂರೇ ಬಣ್ಣ ಹೊಂದಲಿವೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ನಡೆದ 62ನೇ ಬಸ್ ದಿನಾಚರಣೆಯಲ್ಲಿ ನೂತನ ವಿನ್ಯಾಸದ ಬಸ್‌ಗಳನ್ನು ಉದ್ಘಾಟಿಸಲಾಯಿತು.

ಸಮಾರಂಭದಲ್ಲಿ ಬಿಎಂಟಿಸಿ ವ್ಯವ­ಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌ ಮಾತ­ನಾಡಿ, ‘ಈಗ ಬಿಎಂಟಿಸಿಯಲ್ಲಿ 6700ಕ್ಕೂ ಅಧಿಕ ಬಸ್‌ಗಳು ಇವೆ. ಸುಮಾರು 18 ಬಣ್ಣದ ಬಸ್‌ಗಳು ಇವೆ. ಗೊಂದಲ ಹೋಗ­ಲಾಡಿಸಲು ವಿವಿಧ ಬಸ್‌ಗಳನ್ನು ಪ್ರತ್ಯೇಕ­ವಾಗಿ ಗುರುತಿಸುವ ಸಲುವಾಗಿ ಒಂದು ವಿನ್ಯಾಸ ಅಗತ್ಯ ಇತ್ತು. ಹೀಗಾಗಿ ಬಸ್‌ಗಳ ಬಣ್ಣವನ್ನು ಮೂರಕ್ಕೆ ಇಳಿಸ­ಲಾಗುತ್ತಿದೆ’ ಎಂದರು.

‘ಈ ಪ್ರಕ್ರಿಯೆಯಲ್ಲಿ ಸೇವೆಗಳ ಹೆಸರು­ಗಳನ್ನು ಕನ್ನಡ ಭಾಷೆಯಲ್ಲಿ ಹಾಗೂ ಸೇವೆಗಳನ್ನು ಆಯಾ ಮಾದ­ರಿಗೆ ಸಂಬಂಧಿ­ಸಿದಂತೆ ಹೆಸರನ್ನು ನೀಡ­ಲಾ­ಗುವುದು. ಎಲ್ಲ ಬಸ್‌ಗಳಿಗೆ ಬಣ್ಣ ಲೇಪನ ಕಾರ್ಯ ಒಂದೂವರೆ ವರ್ಷಗಳಲ್ಲಿ ಪೂರ್ಣ­ಗೊಳ್ಳಲಿದೆ. ಇದಕ್ಕೆ ಹೆಚ್ಚುವರಿ ಖರ್ಚು ಆಗುವುದಿಲ್ಲ’ ಎಂದರು.

ವಿಪ್ರೊ ಸಮೀಕ್ಷೆ: ವಿಪ್ರೊ ಸಂಸ್ಥೆಯು ಬಿಎಂಟಿಸಿ ಮಾರ್ಗಗಳಲ್ಲಿ ಸಂಚರಿಸುವ ತನ್ನ ಉದ್ಯೋಗಿಗಳ ಸಮೀಕ್ಷೆ ನಡೆಸಿದೆ.  ಬಿಎಂಟಿಸಿ ಬಸ್‌ಗಳ ಮೂಲಕ ನಿವಾಸ­ದಿಂದ ಕಚೇರಿಗೆ ಬರಲು ಹಾಗೂ ಕಚೇರಿ­ಯಿಂದ ನಿವಾಸಕ್ಕೆ ತೆರಳು ಎಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬು­­­­­ದನ್ನು ಕಂಡು ಹಿಡಿಯಲು ಸಂಸ್ಥೆ ಈ ಸಮೀಕ್ಷೆಗೆ ಮುಂದಾಗಿತ್ತು. ಶೇ 65.5 ರಷ್ಟು ಉದ್ಯೋಗಿಗಳು ತಮ್ಮ ನಿವಾಸದಿಂದ ಸಂಸ್ಥೆ ತಲುಪಲು 45 ನಿಮಿಷ ತೆಗೆದುಕೊಳ್ಳುತ್ತಾರೆ. ಶೇ 74.3ರಷ್ಟು ಮಂದಿ ಕೆಲಸ ಮುಗಿಸಿ ಮನೆಗೆ ಹೋಗಲು 45 ನಿಮಿಷ ತೆಗೆದು­ಕೊಳ್ಳುತ್ತಾರೆ. ಶೇ 70.8ರಷ್ಟು ಜನರು ಸಾರ್ವ­ಜನಿಕ ಸಾರಿಗೆ ಬಳಸುವ ಇಚ್ಛೆ ವ್ಯಕ್ತ­ಪಡಿಸಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದು ಬಂದಿದೆ.

ಯಾವ ಯಾವ ಬಣ್ಣ
*ಹಸಿರು ಸರಣಿ: ಸಾಮಾನ್ಯ, ಬಿಗ್‌ ಟ್ರಂಕ್‌, ಬಿಗ್‌ ಸರ್ಕಲ್‌ ಸೇವೆಗಳಿಗೆ: ಸಾಮಾನ್ಯ ದರ.

*ಕಿತ್ತಳೆ ಸರಣಿ: ಫೀಡರ್‌ ಸೇವೆಗಳಿಗೆ‘ ಸಾಮಾನ್ಯ ದರ.

*ನೀಲಿ ಸರಣಿ: ವಜ್ರ, ವಾಯುವಜ್ರ ಸೇವೆಗಳಿಗೆ: ಹವಾನಿಯಂತ್ರಿತ ದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT