ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌ ಅನುಭವ ಕಥನ ಪುಸ್ತಕ ರೂಪ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ಬಿಎಂಟಿಸಿ ಬಸ್‌­ಗಳ ಪ್ರಯಾಣಿಕರ ಅನುಭವ ಕಥನಗಳನ್ನು ಪುಸ್ತಕ ರೂಪದಲ್ಲಿ  ತರಲು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಮುಂದಾಗಿದೆ.

ಪ್ರಯಾಣಿಕರು ಪ್ರಯಾಣದ ವೇಳೆ ಅನುಭವಿಸಿದ ಖುಷಿ, ಕಿರುಕುಳ ಸೇರಿ ದಂತೆ ನಾನಾ ಬಗೆಯ ಅನುಭವ­ಗಳನ್ನು ಕಥೆ, ಕಾವ್ಯ, ವ್ಯಂಗ್ಯಚಿತ್ರದ ಮೂಲಕ ಕಳುಹಿಸಬಹುದು. ಲೇಖನ­ಗಳನ್ನು ಇಂಗ್ಲಿಷ್‌ ಅಥವಾ ಭಾರತದ ಯಾವುದೇ ಭಾಷೆಯಲ್ಲಿ ಬರೆಯ­ಬಹುದು. ಕಥೆ 500 ಪದಕ್ಕಿಂತ ಜಾಸ್ತಿ ಇರಬಾರದು. ಆಯ್ದ ಉತ್ತಮ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಡಿಸೆಂಬರ್‌ 10ರೊಳಗೆ ಲೇಖನಗಳನ್ನು ಕಳುಹಿ ಸಬೇಕು ಎಂದು ವೇದಿಕೆ ತಿಳಿಸಿದೆ.

ವಿಳಾಸ: ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ, #122/4, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು–1. ಇ–ಮೇಲ್‌ ವಿಳಾಸ  bbpvedike@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT