ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌:6 ರಿಂದ ವಿದ್ಯಾರ್ಥಿ ಪಾಸ್‌ ವಿತರಣೆ

ನಗರದಲ್ಲಿ 40 ಪಾಸು ವಿತರಣಾ ಕೇಂದ್ರ
Last Updated 3 ಜೂನ್ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 2015–16ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ವಿತರಣೆ ಪ್ರಕ್ರಿಯೆ ಜೂನ್‌ 6ರಿಂದ ಆರಂಭವಾಗಲಿದೆ.

ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 6ರಿಂದ (ಭಾನುವಾರ ಹಾಗೂ ರಜಾದಿನಗಳನ್ನು ಹೊರತುಪಡಿಸಿ)  ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ನಗರದ 40 ಪಾಸು ವಿತರಣಾ ಕೇಂದ್ರಗಳಲ್ಲಿ  ವಿತರಿಸಲಾಗುವುದು.

ಪಾಸ್ ವಿತರಣಾ ಕೇಂದ್ರಗಳು: ಮೆಜೆಸ್ಟಿಕ್‌, ಶಿವಾಜಿನಗರ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಇಂದಿರಾನಗರ (ಘಟಕ-6), ದೊಮ್ಮಲೂರು, ಜೀವನ್‌ ಬಿಮಾನಗರ, ಕೆ.ಆರ್.ಪುರ, ಕಲ್ಯಾಣನಗರ ಬಸ್‌ ನಿಲ್ದಾಣ, ಆರ್.ಟಿ.ನಗರ ಡಿಪೊ, ಬಸವೇಶ್ವರ ನಗರ, ವಿಜಯನಗರ ಟಿಟಿಎಂಸಿ, ಚಂದ್ರಾ ಲೇಔಟ್, ಎಂಸಿಟಿಸಿ, ಕುಮಾರಸ್ವಾಮಿ ಲೇಔಟ್ ಬಸ್‌ ನಿಲ್ದಾಣ, ಕೆಂಗೇರಿ ಟಿಟಿಎಂಸಿ, ನೀಲಸಂದ್ರ  ಬಸ್‌ ನಿಲ್ದಾಣ, ಹಂಪಿನಗರ  ಬಸ್‌ ನಿಲ್ದಾಣ, ನಂದಿನಿ ಲೇಔಟ್  ಬಸ್‌ ನಿಲ್ದಾಣ,  ನೆಲಮಂಗಲ  ಬಸ್‌ ನಿಲ್ದಾಣ, ಚೌಡೇಶ್ವರಿ  ಬಸ್‌ ನಿಲ್ದಾಣ (ಮತ್ತಿಕೆರೆ), ವಿದ್ಯಾರಣ್ಯಪುರ  ಬಸ್‌ ನಿಲ್ದಾಣ, ಯಲಹಂಕ 5ನೇ ಹಂತ  ಬಸ್‌ ನಿಲ್ದಾಣ, ಯಲಹಂಕ ಉಪನಗರ  ಬಸ್‌ ನಿಲ್ದಾಣ, ರಾಜಾಜಿನಗರ 1ನೇ ‘ಎನ್’ ಬ್ಲಾಕ್, ಮಲ್ಲೇಶ್ವರ ಬಸ್ ನಿಲ್ದಾಣ(18ನೇ ಕ್ರಾಸ್), ಜಯನಗರ ಟಿಟಿಎಂಸಿ, ಚನ್ನಮ್ಮನಕೆರೆ ಅಚ್ಚುಕಟ್ಟು  ಬಸ್‌ ನಿಲ್ದಾಣ, ಬಿಟಿಎಂ ಲೇಔಟ್  ಬಸ್‌ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ(ಘಟಕ-19), ಕೋರಮಂಗಲ ಟಿಟಿಎಂಸಿ, ಕೆ.ಆರ್‌. ಮಾರುಕಟ್ಟೆ  ಬಸ್‌ ನಿಲ್ದಾಣ, ಯಶವಂತಪುರ ಟಿಟಿಎಂಸಿ, ಕಾಡುಗೋಡಿ  ಬಸ್‌ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಬನ್ನೇರುಘಟ್ಟ ಟಿಟಿಎಂಸಿ, ಉತ್ತರಹಳ್ಳಿ  ಬಸ್‌ ನಿಲ್ದಾಣ, ಚಂದಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ.

ಸಲ್ಲಿಸಬೇಕಾದ ದಾಖಲೆಗಳು:  ವಿದ್ಯಾರ್ಥಿಗಳು ಅರ್ಜಿಯ ಜತೆಗೆ ಶಾಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಶುಲ್ಕ ಪಾವತಿಸಿರುವ ಅಸಲಿ ರಶೀದಿ, ಕಾಲೇಜು ಅಥವಾ ಶಾಲೆಯಲ್ಲಿ ವಿತರಿಸಿರುವ ಗುರುತಿನ ಚೀಟಿ, ಇತ್ತೀಚಿನ 2 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳು, ಆಧಾರ್‌ ಕಾರ್ಡ್‌ ನಕಲು ಪ್ರತಿ (ಲಭ್ಯವಿದ್ದಲ್ಲಿ), ನಿಗದಿತ ಪಾಸಿನ ಮೊತ್ತದೊಂದಿಗೆ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT