ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಪಿಸಿಗೆ 20 ಸದಸ್ಯರ ಅವಿರೋಧ ಆಯ್ಕೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸದಾಗಿ ಅಸ್ತಿತ್ವಕ್ಕೆ ತರಲಾದ ಬೃಹತ್‌ ಬೆಂಗಳೂರು ಯೋಜನಾ ಸಮಿತಿ (ಬಿಎಂಪಿಸಿ)ಗೆ ಸೋಮವಾರ ಸದಸ್ಯರನ್ನು ಅವಿರೋ ಧವಾಗಿ ಆಯ್ಕೆ ಮಾಡಲಾಯಿತು. ಅಕ್ರಮ–ಸಕ್ರಮ ಯೋಜನೆ ಜಾರಿಗೊ ಳಿಸುವ ನಿಟ್ಟಿನಲ್ಲಿ ಈ ಸಮಿತಿಯ ರಚನೆ ಒಂದು ಮಹತ್ವದ ಹೆಜ್ಜೆಯಾಗಿದೆ.

ಸಿ.ಎನ್‌. ಕುಮಾರ್‌ ಎಂಬುವವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ನಿರ್ದೇಶನದ ಮೇರೆಗೆ ಈ ಸಮಿತಿಯನ್ನು ರಚಿಸಲಾಯಿತು.

ಚುನಾವಣಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪ್ರಾದೇಶಿಕ ಆಯುಕ್ತ ಗೌರವ್‌ ಗುಪ್ತ, ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಸಮಿತಿಗೆ 20 ಸದಸ್ಯರನ್ನು ಆಯ್ಕೆ ಮಾಡಿದರೆ, ಇತರ 10 ಜನ ನಾಮನಿರ್ದೇಶಿತ ಸದಸ್ಯರನ್ನು ಸರ್ಕಾರ ನೇಮಕ ಮಾಡುತ್ತದೆ.
ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಕೇಂದ್ರ ಸರ್ಕಾರದ ಪ್ರತಿನಿಧಿ ಸಹ ಸಮಿತಿಯ ಸದಸ್ಯರಾಗಲಿದ್ದಾರೆ. ಅರ್ಥ ಶಾಸ್ತ್ರಜ್ಞರು ಹಾಗೂ ನಗರಯೋಜನೆ ತಜ್ಞರು ವಿಶೇಷ ಆಮಂತ್ರಿತ ರಾಗಿದ್ದಾರೆ.

ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಸಹ ಈ ಸಮಿತಿಗೆ ಸದಸ್ಯ ರಾಗಲಿದ್ದಾರೆ. ಸಮಿತಿಯ ಸದಸ್ಯರಲ್ಲಿ ಒಬ್ಬರು ಅಧ್ಯಕ್ಷರಾಗಲಿದ್ದು, ಬೆಂಗ ಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸಭೆ ನಡೆಸುವ ಹೊಣೆ ವಹಿಸಲಾಗಿದೆ.

ಆಯ್ಕೆಯಾದ ಸದಸ್ಯರ ವಿವರ ಹೀಗಿದೆ:
ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು: ಡಾ. ಕೆ.ಎನ್‌. ಗೀತಾ ಶಶಿಕುಮಾರ್‌ (ಅಟ್ಟೂರು ವಾರ್ಡ್‌), ಬಿ.ಗೋವಿಂದರಾಜು (ಎಚ್‌ಬಿಆರ್‌ ಬಡಾವಣೆ), ಎ.ಎಚ್‌. ಬಸವರಾಜು (ಬನಶಂಕರಿ ದೇವಸ್ಥಾನ), ಜಿ. ಮಂಜುನಾಥ್‌ ರಾಜು (ಕಾಡು ಮಲ್ಲೇಶ್ವರ), ಡಾ.ಎಸ್‌. ರಾಜು (ಹೊಸಹಳ್ಳಿ), ಬಿ.ಎಸ್‌. ಮಂಜು ನಾಥ್‌ ರೆಡ್ಡಿ (ಬೊಮ್ಮನಹಳ್ಳಿ), ಸಿ.ಕೆ. ರಾಮಮೂರ್ತಿ (ಪಟ್ಟಾಭಿ ರಾಮನಗರ), ಎಸ್‌.ಎನ್‌. ಶ್ರೀಧರ ರೆಡ್ಡಿ (ದೊಡ್ಡನೆಕ್ಕುಂದಿ) ಮತ್ತು ಪಿ.ಎನ್‌. ಸದಾಶಿವ (ಸುಂಕೇನಹಳ್ಳಿ).

ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರು: ಎಂ.ಕೆ. ಗುಣಶೇಖರ್‌ (ಜಯಮಹಲ್‌), ಕೆ.ದೊಡ್ಡಣ್ಣ (ಅತ್ತಿಗುಪ್ಪೆ), ದೇವಿಕಾರಾಣಿ ಶ್ರೀಧರ್‌ (ಎಸ್‌.ಕೆ. ಗಾರ್ಡನ್‌), ಎಂ. ಉದಯಶಂಕರ್‌ (ಸಿದ್ದಾಪುರ), ಒ. ಮಂಜುನಾಥ್‌ (ಯಲಚೇನಹಳ್ಳಿ), ಆರ್‌.ಎಸ್‌. ಸತ್ಯನಾರಾಯಣ (ದತ್ತಾತ್ರೇಯ ದೇವಸ್ಥಾನ).

ಜೆಡಿಎಸ್‌ನಿಂದ ಆಯ್ಕೆಯಾದ ಸದಸ್ಯರು: ಟಿ.ತಿಮ್ಮೇಗೌಡ (ಶ್ರೀನಗರ), ಎಲ್‌.ನಾಗರತ್ನ (ವೃಷಭಾವತಿನಗರ).

ಪಂಚಾಯಿತಿಯಿಂದ ಆಯ್ಕೆಯಾದ ಸದಸ್ಯರು: ಅಮರೇಶ್‌ ರೆಡ್ಡಿ (ಉಪಾಧ್ಯಕ್ಷ ಯಮರೆ ಗ್ರಾ.ಪಂ), ಚಿಕ್ಕರಾಜು (ಉಪಾಧ್ಯಕ್ಷ ಕುಂಬಳ ಗೋಡು ಗ್ರಾ.ಪಂ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT