ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮುಜುಗರ ತಂದ ಒಪ್ಪಂದ ವಿವಾದ

Last Updated 30 ಸೆಪ್ಟೆಂಬರ್ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಜಾಹೀರಾತು ತೆರಿಗೆ­ಬಾಕಿ ಉಳಿಸಿಕೊಂಡ ಸಂಸ್ಥೆ­ಗಳ ಜತೆ ‘ನಮ್ಮ ಬೆಂಗಳೂರು ನನ್ನ ಕೊಡುಗೆ’ ಯೋಜನೆ ಮೂಲಕ ಸಹಭಾಗಿತ್ವದ ಒಪ್ಪಂದ ಮಾಡಿ­ಕೊಂಡ ವಿಷಯ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಪ್ರಸ್ತಾವ­ಗೊಂಡು ಆಡಳಿತ ಪಕ್ಷವೇ ತೀವ್ರ ಮುಜುಗರ ಅನುಭವಿಸ­ಬೇಕಾಯಿತು.

ಬಿಜೆಪಿಯವರೇ ಆದ ಡಾ. ರಾಜ್‌­ಕುಮಾರ್‌ ವಾರ್ಡ್‌ನ ಗಂಗ­ಬೈರಯ್ಯ, ‘ಕೋಟ್ಯಂತರ ರೂಪಾಯಿ ಜಾಹೀರಾತು ಶುಲ್ಕ ನೀಡದೆ ಬಿಬಿಎಂಪಿ ದೃಷ್ಟಿಯಲ್ಲಿ ಅಪರಾಧಿ ಸ್ಥಾನ­ದಲ್ಲಿ ಇರುವ ಜಗದೀಶ್‌ ಟ್ರಾವೆಲ್‌ ಏಜೆನ್ಸಿ ಜತೆ ಒಪ್ಪಂದ ಮಾಡಿಕೊಂಡಿದ್ದೇಕೆ; ತೆರಿಗೆ ಬಾಕಿ ನೀಡುವಂತೆ ಆ ಸಂಸ್ಥೆಯ ಕಚೇರಿ ಮುಂದೆ ತಮಟೆ ಬಾರಿಸಿದ್ದು ಮರೆತು ಹೋಯಿತೇ’ ಎಂದು ಪ್ರಶ್ನಿಸಿದರು.

‘ಬೆಂಗಳೂರು ದಕ್ಷಿಣ ಹಾಗೂ ಮಹದೇವಪುರ ವಲಯದಲ್ಲಿ ಒಪ್ಪಂದ ಮಾಡಿಕೊಳ್ಳುವಾಗ ಹೆಚ್ಚಿನ ಲೋಪಗಳು ಆಗಿವೆ. ಬಿಬಿಎಂಪಿಗೆ ದೊಡ್ಡ ಮೊತ್ತದ ಬಾಕಿ ಉಳಿಸಿ­ಕೊಂಡ ಸಂಸ್ಥೆಗಳೇ ಈಗ ಉದ್ಯಾನ, ರಸ್ತೆ ವಿಭಜಕ ಹಾಗೂ ಸ್ಕೈವಾಕ್‌ಗಳ ನಿರ್ವಹಣೆ ನೆಪದಲ್ಲಿ ಅವುಗಳ ಮೇಲೆ ಬಿಟ್ಟಿಯಾಗಿ ಜಾಹೀರಾತು ಫಲಕ ಹಾಕಿಕೊಳ್ಳುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT