ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ಸ್ಥಾನ: ಮುಂಚೂಣಿಯಲ್ಲಿ ಜೆ.ಪಿ.ನಡ್ಡಾ

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ಶಿಮ್ಲಾ, ನವದೆಹಲಿ (ಐಎಎನ್‌ಎಸ್‌): ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರು ಒಂದು ವೇಳೆ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡರೆ ನೂತನ ಅಧ್ಯಕ್ಷರಾಗಲಿ­ರುವ ಸಂಭವನೀಯರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ ಅವರ ಹೆಸರು ಮುಂಚೂಣಿ­ಯಲ್ಲಿದೆ.

ಹಿಮಾಚಲ ಪ್ರದೇಶದ ರಾಜ್ಯಸಭಾ ಸಂಸದರಾಗಿರುವ ನಡ್ಡಾ ಅವರು ಮೋದಿ ಆಪ್ತರಾದ ಬಿಜೆಪಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಅಮಿತ್‌ ಷಾ ಮತ್ತು ಹಿರಿಯ ಮುಖಂಡ ನಿತಿನ್‌ ಗಡ್ಕರಿ ಅವರಿಗೆ ಹತ್ತಿರದವರು ಎಂದು ಕೇಂದ್ರ ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ.

‘ನಡ್ಡಾ ಅವರು ಪಕ್ಷದ ಉನ್ನತ ನಾಯಕತ್ವ ಹಾಗೂ ಆರ್‌ಎಸ್‌ಎಸ್‌ ಎರಡರ ಜತೆಯೂ ಉತ್ತಮ ಸಂಬಂಧ ಹೊಂದಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಿ ತೋರುತ್ತಿದ್ದಾರೆ’ ಎಂದು ಪಕ್ಷದ ಮತ್ತೊಬ್ಬ ಮುಖಂಡ ಅಭಿಪ್ರಾಯಪಟ್ಟಿದ್ದಾರೆ.

1978ರಲ್ಲಿ ಬಿಜೆಪಿ ಅಂಗಸಂಸ್ಥೆ ಅಖಿಲ­ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ (ಎಬಿವಿಪಿ) ತೊಡಗಿಕೊಂಡು ವಿದ್ಯಾರ್ಥಿ ನಾಯಕ­ನಾಗಿ ರಾಜಕೀಯ ವೃತ್ತಿ ಆರಂಭಿ­ಸಿದ್ದ ನಡ್ಡಾ, ಅಮಿತ್‌ ಷಾ ಮತ್ತು ಗಡ್ಕರಿ ಅವರ ಪರವಾಗಿ ಕೆಲಸ­ ಮಾಡಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT