ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ: ಶೀಲಾ ಹೇಳಿಕೆಗೆ ವಿರೋಧ

Last Updated 11 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೆಹಲಿಯಲ್ಲಿ ಸರ್ಕಾರ ರಚಿಸುವುದಕ್ಕೆ ಬಿಜೆಪಿಗೆ ಅವ­ಕಾಶ ಕೊಡಬೇಕು’ ಎಂದು ಮಾಜಿ ಮುಖ್ಯ­ಮಂತ್ರಿ ಶೀಲಾ ದೀಕ್ಷಿತ್‌ ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಗುರುವಾರ ಅಸಮ್ಮತಿ ಸೂಚಿಸಿದೆ.

ಈ ಹೇಳಿಕೆಯಿಂದ ಅಂತರ ಕಾಯ್ದು­ಕೊಂಡ ಪಕ್ಷದ ಪ್ರಭಾರ ಪ್ರಧಾನ ಕಾರ್ಯದರ್ಶಿ ಶಕೀಲ್‌ ಅಹ್ಮದ್‌, ‘ ಇದು ಶೀಲಾ ಅವರ ವೈಯಕ್ತಿಕ ಅಭಿ­ಪ್ರಾಯ.  ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದನ್ನು ಸಂಪೂರ್ಣ­ವಾಗಿ ವಿರೋಧಿಸಿದ್ದಾರೆ’ ಎಂದಿದ್ದಾರೆ.

ಶೀಲಾ ಅವರು ಆಘಾತಕಾರಿ ಹೇಳಿಕೆ ನೀಡಿದ್ದಾರೆ ಎಂದಿರುವ ದೆಹಲಿ ಕಾಂಗ್ರೆಸ್‌, ‘ಇದು ಅವರ ವೈಯಕ್ತಿಕ ಅನಿಸಿಕೆ. ಇದಕ್ಕೂ ಪಕ್ಷಕ್ಕೂ ಸಂಬಂಧ­ವಿಲ್ಲ. ದೇಶದ ರಾಜಧಾನಿಯಲ್ಲಿ ಬಿಜೆಪಿಗೆ ಸರ್ಕಾರ ರಚಿಸುವುದಕ್ಕೆ ನಾವು ಬಿಡುವುದಿಲ್ಲ’ ಎಂದು ದೆಹಲಿ ಕಾಂಗ್ರೆಸ್‌ ವಕ್ತಾರ ಮುಕೇಶ್‌ ಶರ್ಮಾ ಹೇಳಿದ್ದಾರೆ.
ಇದಕ್ಕೆ ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ಅಜಯ್‌ ಮಾಕನ್‌ ಕೂಡ ದನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT