ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರ್ಪಡೆ ಇಲ್ಲ: ಇಬ್ರಾಹಿಂ ಸ್ಪಷ್ಟನೆ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ‘ನಾನು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಪಕ್ಷದ ಮುಖಂಡ ಸಿ.ಎಂ. ಇಬ್ರಾಹಿಂ ಸ್ಪಷ್ಟಪಡಿ­ಸಿದ್ದಾರೆ.

‘ಕೆಲವರು ನಾನು ಬಿಜೆಪಿ ಸೇರುತ್ತೇನೆಂದು ಸುದ್ದಿ ಹರಡುತ್ತಿದ್ದಾರೆ. ಈ ರೀತಿ ಪ್ರಚಾರ ಮಾಡುವವರನ್ನು ತಡೆಯಲು ಸಾಧ್ಯವೇ?’ ಎಂದು ಅವರು ಮಾಧ್ಯಮ ಪ್ರತಿನಿಧಿಗಳನ್ನು ಮಂಗಳವಾರ ಪ್ರಶ್ನಿಸಿದರು.

‘ಎಲ್ಲ ಪಕ್ಷಗಳಲ್ಲೂ ನನಗೆ ಗೆಳೆಯ­ರಿದ್ದಾರೆ. ಅವರ ಜತೆ ಮಾತನಾಡಿದ ತಕ್ಷಣ ಪಕ್ಷ ಬಿಡುತ್ತಾರೆಂದು ಗುಲ್ಲೆಬ್ಬಿಸು­ವುದು ಸರಿಯಲ್ಲ.
ಮಾಜಿ ಪ್ರಧಾನಿ ದೇವೇಗೌಡ­ರನ್ನು ಈಚೆಗೆ ಹೊಗಳಿದ್ದರ ಹಿಂದೆ ಯಾವ ಉದ್ದೇಶವೂ ಇಲ್ಲ. ಅವರಲ್ಲಿರುವ ಒಳ್ಳೆ ಗುಣಗಳ ಕುರಿತು ಮಾತನಾಡುವು­ದರಲ್ಲಿ ತಪ್ಪೇನಿದೆ?’ ಎಂದು ಇಬ್ರಾಹಿಂ ಕೇಳಿದರು.

‘ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದೆ. ಅವರೊಂದಿಗೆ ರಾಜ್ಯ ರಾಜಕೀಯ ವಿಚಾರಗಳನ್ನು ಚರ್ಚಿಸಿ­ದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ­ನವರ ಸರ್ಕಾರದ ಬಗ್ಗೆ ಮೇಡಂಗೆ ಒಳ್ಳೆಯ ಅಭಿಪ್ರಾಯವಿದೆ. ಸರ್ಕಾರದ ಯೋಜನೆಗಳ ಬಗ್ಗೆಯೂ ಸಮಾಧಾನ­ವಿದೆ. ಈ ಯೋಜನೆಗಳನ್ನು ಎಲ್ಲ ಜಾತಿ ಬಡವರಿಗೂ ವಿಸ್ತರಿಸುವಂತೆ ಕಾಂಗ್ರೆಸ್‌ ಅಧ್ಯಕ್ಷರು ಸಲಹೆ ಮಾಡಿದ್ದಾರೆ. ಅವರ ಸಲಹೆಯನ್ನು ಮುಖ್ಯಮಂತ್ರಿಗೆ ತಲುಪಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT