ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ: 200 ಕೆ.ಜಿ ಬಂಟಿಂಗ್ಸ್‌ಗೆ ಅನುಮತಿ

Last Updated 1 ಏಪ್ರಿಲ್ 2015, 19:50 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ರೀತಿಯ ಜಾಹೀರಾತು ಫಲಕಗಳ ಅಳವಡಿಕೆಯನ್ನು ನಗರದಲ್ಲಿ ನಿಷೇಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಾಮಾನ್ಯ ಸಭೆ ಜನವರಿಯಲ್ಲಿ ನಿರ್ಣಯ ಕೈಗೊಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಬಂಟಿಂಗ್‌ಗಳನ್ನು ಅಳವಡಿಸಲು ಪಾಲಿಕೆ ಆಯುಕ್ತರು ಬಿಜೆಪಿಗೆ ಅವಕಾಶ ನೀಡಿದ್ದಾರೆ.

ಬಂಟಿಂಗ್‌ಗಳು ಮತ್ತು ಜಾಹೀರಾತು ಫಲಕಗಳನ್ನು ನಿಷೇಧಿಸುವ ತನ್ನದೇ ನಿರ್ಣಯಕ್ಕೆ ವ್ಯತಿರಿಕ್ತವಾಗಿ, ಪಾಲಿಕೆ ತೆಗೆದುಕೊಂಡಿರುವ ಕ್ರಮಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ‌ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿದ್ದರು.

‘ಗುರುವಾರದಿಂದ ಶನಿವಾರದವರೆಗೆ ಲಲಿತ್ ಅಶೋಕ ಹೋಟೆಲ್‌ ಬಳಿ ಮತ್ತು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಮತ್ತು ಬಂಟಿಂಗ್‌ಗಳನ್ನು ಹಾಕಲು ಪಾಲಿಕೆ ಆಯುಕ್ತರು ಬಿಜೆಪಿಗೆ ಅನುಮತಿ ನೀಡಿದ್ದಾರೆ ಎಂದು ಪಾಲಿಕೆಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ. 30 ಕಿ.ಮೀ ವ್ಯಾಪ್ತಿ ಎಂದರೆ ಇಡೀ ನಗರವೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಬಿಜೆಪಿಯವರ ಕಾರ್ಯಕ್ರಮ ಮುಗಿದ ನಂತರ, ಆ ಬಂಟಿಂಗ್‌ಗಳನ್ನು ವಿಲೇವಾರಿ ಮಾಡಲು ಅದರಿಂದ ತೆರಿಗೆ ರೂಪದಲ್ಲಿ ಬರುವುದಕ್ಕಿಂತ ಹೆಚ್ಚು ಹಣ ಬೇಕು’ ಎಂದು ನ್ಯಾಯಮೂರ್ತಿ ಅಡಿ ಹೇಳಿದ್ದಾರೆ.‌‌

ಬಂಟಿಂಗ್‌ಗಳನ್ನು ಎಲ್ಲಿ ಹಾಕಲಾಗುವುದು ಎಂಬುದನ್ನು ಆಯುಕ್ತರು ನೀಡಿದ ಅನುಮತಿ ಪತ್ರದಲ್ಲಿ ಸ್ಪಷ್ಟಪಡಿಸಿಲ್ಲ ಎಂದು ಅಡಿ ತಿಳಿಸಿದರು.

ಪ್ಲಾಸ್ಟಿಕ್‌ ಬಂಟಿಂಗ್‌ ಹಾಕಲು ಅನುಮತಿ ನೀಡಿರುವುದು ಪ್ರಧಾನಿಅವರ ಸ್ವಚ್ಛ ಭಾರತ ಅಭಿಯಾನದ ಆಶಯಕ್ಕೆ ವಿರುದ್ಧವಾಗಿದೆ
ಸುಭಾಷ್ ಬಿ. ಅಡಿ, ಉಪ ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT