ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎಯಲ್ಲಿ ರಾತ್ರಿಯೂ ಕೆಲಸ

ಛಾಯಾಚಿತ್ರ ತೆಗೆಯದಂತೆ ಮಾಧ್ಯಮ ಪ್ರತಿನಿಧಿಗೆ ಅಡ್ಡಿ
Last Updated 30 ಜನವರಿ 2015, 20:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಿಬ್ಬಂದಿಯು ಶುಕ್ರವಾರ ಕೆಲಸದ ಅವಧಿ ಮುಗಿದ ನಂತರವೂ ಕಚೇರಿಯಲ್ಲಿ ರಾತ್ರಿವರೆಗೆ ಕಾರ್ಯ ನಿರ್ವಹಿಸಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಬಿಡಿಎ ಪ್ರಧಾನ ಕಚೇರಿಯಲ್ಲಿ ನೌಕರರು ರಾತ್ರಿಯೂ ಕೆಲಸ ಮಾಡು­ತ್ತಿದ್ದ ಸಂಗತಿ ತಿಳಿದು ಛಾಯಾಚಿತ್ರ ತೆಗೆ­ಯಲು ಸ್ಥಳಕ್ಕೆ ಹೋದ ‘ಪ್ರಜಾವಾಣಿ’ ಛಾಯಾಗ್ರಾಹಕ­ರೊಂದಿಗೆ ಅಲ್ಲಿನ ಪೊಲೀಸ್‌ ಸಿಬ್ಬಂದಿ ತಿಮ್ಮಾರೆಡ್ಡಿ ಎಂಬು­ವರು ವಾಗ್ವಾದ ನಡೆಸಿ, ಕಾರ್ಯ ನಿರ್ವಹಣೆಗೆ ಅಡ್ಡಿ­ಪಡಿಸಿದ್ದಾರೆ.

ಅಲ್ಲದೇ, ಛಾಯಾಗ್ರಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಸಹೋದ್ಯೋಗಿಯೊಂದಿಗೆ ಸೇರಿ ಛಾಯಾಗ್ರಾಹಕರನ್ನು ಕೊಠಡಿಗೆ ಕರೆದೊಯ್ದು ತಪಾಸಣೆ ನೆಪದಲ್ಲಿ ಬಟ್ಟೆ ಬಿಚ್ಚಿಸಲು ಯತ್ನಿಸಿದ್ದಾರೆ.

ಈ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ ನಂತರ ತಿಮ್ಮಾರೆಡ್ಡಿ ಮತ್ತು ಸಿಬ್ಬಂದಿ, ಛಾಯಾಗ್ರಾಹಕರನ್ನು ಕಚೇರಿಯಿಂದ ಬಿಟ್ಟು ಕಳುಹಿಸಿದ್ದಾರೆ.

ಬಿಡಿಎ ಸಿಬ್ಬಂದಿ ಮಂಗಳವಾರ (ಜ.27) ಕೂಡ ಕಚೇರಿಯ ಸ್ಕ್ಯಾನಿಂಗ್‌ ಕೊಠಡಿಗೆ ಬೀಗ ಹಾಕಿ­ಕೊಂಡು ಕಾರ್ಯ ನಿರ್ವಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಅರ್ಕಾವತಿ ಡಿನೋಟಿಫಿಕೇಶನ್‌ ಪ್ರಕರಣ ಹಾಗೂ ಪ್ರಾಧಿಕಾರದಲ್ಲಿ ನಡೆದಿವೆ ಎನ್ನಲಾದ ಹಗರಣಗಳಿಗೆ ಸಂಬಂಧಿಸಿದ ಕಡತಗಳು ಬಿಡಿಎ ಪ್ರಧಾನ ಕಚೇರಿಯಲ್ಲಿದ್ದು, ಸಿಬ್ಬಂದಿ ಅವುಗಳನ್ನು ತಿದ್ದಲು ಯತ್ನಿಸಿ­ದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT