ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಸಿ: ರೋನಾ ಫೇರ್‌ಹೆಡ್‌ ಮೊದಲ ಮಹಿಳಾ ಅಧ್ಯಕ್ಷೆ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಪ್ರಪಂಚದ ಪ್ರತಿಷ್ಠಿತ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊ­ರೇಷನ್‌ (ಬಿಬಿಸಿ) ಸುದ್ದಿಸಂಸ್ಥೆ ಪ್ರಥಮ ಬಾರಿಗೆ ಮಹಿಳೆಯನ್ನು ಅಧ್ಯಕ್ಷೆ­ಯನ್ನಾಗಿ ಆಯ್ಕೆ ಮಾಡಿದೆ. 53 ವರ್ಷದ ರೋನಾ ಫೇರ್‌ಹೆಡ್‌ ಅವರನ್ನು ಸಂಸ್ಥೆಯ ಹೊಸ ಅಧ್ಯಕ್ಷೆಯನ್ನಾಗಿ ಬಿಬಿಸಿ ಘೋಷಿಸಿದೆ. 

ಲಾರ್ಡ್‌ ಪ್ಯಾಟನ್‌ ಅವರು ಮೇ ತಿಂಗ­ಳಲ್ಲಿ ಅನಾರೋಗ್ಯದ ಕಾರಣ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ  ಕೆಳಗಿಳಿದಿ­ದ್ದರು. ಆ ಹುದ್ದೆಗೆ ಫೇರ್‌ಹೆಡ್‌ ಅವರನ್ನು ಆಯ್ಕೆ ಮಾಡಲಾಗಿದೆ.

‘ಅತ್ಯಂತ ಪ್ರತಿಭೆಯುಳ್ಳವರು ಬಿಬಿಸಿ­ಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದು ವಿಶ್ವವಿಖ್ಯಾತ ಸಂಸ್ಥೆ­ಯಾಗಿದೆ. ಈ ಸಂಸ್ಥೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿ­ರು­ವುದು ನನಗೆ ಹೆಮ್ಮೆ ಎನಿಸಿದೆ’ ಎಂದು ಫೇರ್‌ಹೆಡ್‌ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT