ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಕಳಪೆಯಾದರೆ ಒಪ್ಪಂದ ರದ್ದು

Last Updated 24 ಜುಲೈ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡಿದರೆ ಸಂಸ್ಥೆಯ ಒಪ್ಪಂದವನ್ನು ರದ್ದುಮಾಡ­ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ವೀರಣ್ಣ  ಮತ್ತಿಕಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇತ್ತೀಚೆಗೆ ಸ್ಟೆಂ ಸಂಸ್ಥೆಯ ಮೂಲಕ ಬಿಸಿಯೂಟದ ಮೌಲ್ಯ­ಮಾಪನ ಮಾಡಿಸಲಾಗಿತ್ತು. ನಗರ ಪ್ರದೇಶದ ಸ್ವಯಂಸೇವಾ ಸಂಸ್ಥೆಗಳು ಪೂರೈ ಸುತ್ತಿರುವ ಬಿಸಿಯೂಟದಲ್ಲಿ ಕಡಿಮೆ ಪೌಷ್ಟಿಕಾಂಶ ಇದೆ ಎಂದು ವರದಿ ತಿಳಿಸಿದೆ’ ಎಂದರು.

ಸ್ವಯಂಸೇವಾ ಸಂಸ್ಥೆಗಳು ಒಂದೇ ರೀತಿಯ ತರಕಾರಿ ಬಳಸುತ್ತಿರುವು­ದ­ರಿಂದ ಪೌಷ್ಟಿಕಾಂಶ ಕಡಿಮೆ ಆಗಿದೆ. ಪ್ರತಿದಿನ ನಿರ್ದಿಷ್ಟ ತರಕಾರಿಗಳನ್ನೇ ಬಳಸ­ಬೇಕು ಎಂದು ಸೂಚನೆ ನೀಡ­ಲಾಗಿದೆ ಎಂದರು. ಈ ಬಿಸಿಯೂಟವನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT