ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಮಧ್ಯೆ ಬಿರುಸಿನ ಮತದಾನ

Last Updated 30 ಏಪ್ರಿಲ್ 2014, 10:37 IST
ಅಕ್ಷರ ಗಾತ್ರ

ಅಹಮದಾಬಾದ್‌/ಹೈದರಾಬಾದ್‌/ಲಖನೌ/ಕೋಲ್ಕತ್ತ/ ಪಟ್ನಾ/ಚಂಡೀಗಡ/ ಶ್ರೀನಗರ/ದಿಮನ್‌ ಮತ್ತು ದಿಯು/ ದಾದ್ರಾ ಮತ್ತು ನಗರ ಹವೇಲಿ (ಪಿಟಿಐ/ ಐಎಎನ್‌ಎಸ್‌): 16ನೇ ಲೋಕಸಭೆಗೆ ನಡೆಯುತ್ತಿರುವ ಏಳನೇ ಹಂತದ ಮತದಾನ ಚಿಕ್ಕಪುಟ್ಟ ಘರ್ಷಣೆಯ ಘಟನೆ ಹೊರತು ಪಡಿಸಿ ಬುಧವಾರ  ಬಿರುಸಿನಿಂದ ಆರಂಭಗೊಂಡಿದೆ.

ಗುಜರಾತ್‌: ತಾಪಮಾನ ಏರಿಕೆಯ ನಡುವೆಯೂ ಗುಜರಾತಿನಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಬೆಳಿಗ್ಗೆ 11 ಗಂಟೆಯ ವರೆಗೂ ಶೇಕಡಾ 22 ರಷ್ಟು ಮತದಾನ ದಾಖಲಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಣದಲ್ಲಿರುವ ವಡೋದರಾ ಕ್ಷೇತ್ರದಲ್ಲಿ ಶೇಕಡಾ 32 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

ತೆಲಂಗಾಣ: ತೆಲಂಗಾಣದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. 17 ಲೋಕಸಭೆ ಹಾಗೂ 119 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 9 ಗಂಟೆಯವರೆಗೆ 15.3 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಭನ್ವರ್‌ ಲಾಲ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶ: 40 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದ ತಾಪಮಾನವಿರುವ ಉತ್ತರ ಪ್ರದೇಶದಲ್ಲಿ ಜನರು ಬಿಸಿಲು ಹೆಚ್ಚಾಗುವ ಮುನ್ನವೇ ತಮ್ಮ ಚಲಾಯಿಸಿಲು ಮತಗಟ್ಟೆಗಳಿಗೆ ಧಾವಿಸಿದ್ದರು.

14 ಲೋಕಸಭಾ ಹಾಗೂ 2 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಲಖನೌದಲ್ಲಿ ಮೊದಲ ಎರಡು ಗಂಟೆಗಳ ಅವಧಿಯಲ್ಲಿ 9.09 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆಯ ವರೆಗೆ ಶೇಕಡಾ 20 ರಷ್ಟು ಜನತೆ ಮತದಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ: ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿಗೆ ಬುಧವಾರ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಿಗ್ಗೆ 10 ಗಂಟೆಯ ವರೆಗೆ ಸುಮಾರು 19 ರಷ್ಟು ಮತದಾನವಾಗಿದೆ.

ಜೆಡಿಯು ಪಕ್ಷದ ಮುಖ್ಯಸ್ಥ ಶರದ್‌ ಯಾದವ್‌ ಅವರು ಕಣದಲ್ಲಿರುವ ಮಾದೇಪುರ ಕ್ಷೇತ್ರದಲ್ಲಿ ಒಟ್ಟು 18.88 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪಂಜಾಬ್‌: ಪಂಜಾಬ್‌ನಲ್ಲಿ 13 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನ ಮಂದಗತಿಯ ಆರಂಭ ಪಡೆದಿದ್ದು, ಬಳಿಕ ಚೇತರಿಸಿಕೊಂಡಿದೆ. ಬೆಳಿಗ್ಗೆ 10 ಗಂಟೆಯ ವರೆಗೆ ಶೇಕಡಾ 14 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಆದರೆ, ಅಕಾಲಿದಳ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ  ಮಧ್ಯೆ ಮೊಗಾ ಹಾಗೂ ಅಮೃತಸರದಲ್ಲಿ ಮತದಾನದ ವೇಳೆ ಚಿಕ್ಕ–ಪುಟ್ಟ ಘರ್ಷಣೆ ನಡೆದಿವೆ.

ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯದ ಒಂದು ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ 5.41 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿ: ಇಲ್ಲಿ ನಡೆಯುತ್ತಿರುವ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ ಶೇಕಡಾ 40 ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

ದಿಮನ್‌ ಮತ್ತು ದಿಯು: ಇಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಶೇಕಡಾ 14.3 ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT